ಬದಿಯಡ್ಕ: ಚಂಬಲ್ತಿಮಾರ್ ನಿವಾಸಿ ನಾರಾಯಣ ಇವರು ಎರಡು ಕಿಡ್ನಿ ವೈಫಲ್ಯಗೊಂಡು ಹಲವು ತಿಂಗಳಗಳಿಂದ ಸಂಪಾದನೆ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಇವರಿಗೆ ಕಿಡ್ನಿ ಮರುಜೋಡನೆಗೆ ಸುಮಾರು 45 ಲಕ್ಷ ಖರ್ಚು ತಗುಲಿದೆ. ಇವರ ಸಹಾಯಹಸ್ತಕ್ಕೆ ನಾರಾಯಣ ಚಂಬಲ್ತಿಮಾರ್ ಚಿಕಿತ್ಸಾ ಸಹಾಯ ಸಮಿತಿಯನ್ನು ರಚಿಸಲಾಗಿದೆ. ಇವರ ಪುತ್ರಿ ನವಜೀವನ ಪ್ರೌಢಶಾಲೆ ಹಳೆಯ ವಿದ್ಯಾರ್ಥಿ ಇವರಿಗೆ ಸಹಾಯ ಹಸ್ತವಾಗಿ ಪೆರಡಾಲ ಪ್ರೌಢಶಾಲೆಯ ಅಧ್ಯಾಪಕರು ವಿದ್ಯಾರ್ಥಿಗಳು ಸಂಗ್ರಹಿಸಿದ ಮೊತ್ತವನ್ನು ಮುಖ್ಯೋಪಾಧ್ಯಾಯನಿ ಮಿನಿ ಟೀಚರ್ ಮತ್ತು ಅಧ್ಯಾಪಕರು ಸಮಿತಿ ಪದಾಧಿಕಾರಿ ವಾರ್ಡ್ ಸದಸ್ಯ ಶ್ಯಾಮ್ ಪ್ರಸಾದ್ ಮಾನ್ಯ ಅವರಿಗೆ ಹಸ್ತಾಂತರಿಸಿದರು.
ಶಾಲಾ ನೌಕರ ಸಂಘದ ಕಾರ್ಯದರ್ಶಿ ಕಾರ್ತಿಕ ಟೀಚರ್, ಮಾಲತಿ ಟೀಚರ್, ನಾರಾಯಣ ಮಾಸ್ತರ್, ನಿರಂಜನ ರೈ ಪೆರಡಾಲ, ರಾಜೇಶ್ ಮಾಸ್ತರ್, ಸಮಿತಿಯ ಸಂಚಾಲಕ ಸುಧಾಕರನ್ ವಿದ್ಯಾಗಿರಿ, ಕೋಶಾದಿಕಾರಿ ಪಿ.ಜಿ. ಜಗನ್ನಾಥ ರೈ, ಪದಾಧಿಕಾರಿಗಳಾದ ಪದ್ಮನಾಭ ಶೆಟ್ಟಿ ವಳಮಲೆ, ಕೃಷ್ಣ ಬದಿಯಡ್ಕ, ಹಮೀದ್ ಕೆಡೆಂಜಿ, ರಾಮ ಮರಿಯಂಕೂಡ್ಲು ಜೊತೆಗಿದ್ದರು.
ನಾರಾಯಣ ಸಿ.ಎಚ್. ಚಿಕಿತ್ಸೆ ಸಹಾಯ ನಿಧಿ ಸಮಿತಿಗೆ ಪೆರಡಾಲ ನವ ಜೀವನ ಪ್ರೌಢಶಾಲೆಯ ಅಧ್ಯಾಪಕರು ವಿದ್ಯಾರ್ಥಿಗಳು ಸಂಗ್ರಹಿಸಿದ ಹಣ ಹಸ್ತಾಂತರ
0
ಅಕ್ಟೋಬರ್ 11, 2022

.jpg)
