HEALTH TIPS

ಗರ್ಭನಿರೋಧಕಗಳನ್ನು ಬಳಸೋದ್ರಿಂದ ಮುಟ್ಟಿನಲ್ಲಿ ಈ ಬದಲಾವಣೆಗಳಾಗುತ್ತದೆಯೇ? ಇದು ಹೇಗೆ ಅಪಾಯಕಾರಿ?

 ಗರ್ಭನಿರೋಧಕಗಳಾದ ಜನನ ನಿಯಂತ್ರಣ ಮಾತ್ರೆಗಳು, ಸಾಧನಗಳು ಅಥವಾ ಶಸ್ತ್ರಚಿಕಿತ್ಸೆಯ ಮೂಲಕ ಗರ್ಭಧಾರಣೆಯನ್ನು ತಡೆಯಲು ಸುರಕ್ಷಿತ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ. ಆದರೆ ಇವೆಲ್ಲಾ ಹಾರ್ಮೋನ್‌ ಗರ್ಭನಿರೋಧಕಗಳು ಋತುಚಕ್ರದ ಮೇಲೂ ಪರಿಣಾಮ ಬೀರುತ್ತವೆ.

ಕೆಲವರು ಮೊದಲನೇ ಬಾರಿ ಗರ್ಭನಿರೊಧಕವನ್ನು ಬಳಸುವಾಗ ಮುಟ್ಟಿನ ಸಮಯದಲ್ಲಿ ಹೆಚ್ಚು ರಕ್ತಸ್ರಾವ ಅಥವಾ ಸ್ಪಾಟಿಂಗ್‌ ಸಮಸ್ಯೆಯನ್ನು ಎದುರಿಸಬಹುದು. ಕೆಲವರಲ್ಲಿ ರಕ್ತಸ್ರಾವದ ಅವಧಿಯಲ್ಲಿ ವ್ಯತ್ಯಾಸಗಳಾಗಬಹುದು.ಕೆಲವರಿಗೆ ಸ್ರಾವವು ಸಂಪೂರ್ಣವಾಗಿ ನಿಲ್ಲಬಹುದು. ಗರ್ಭನಿರೋಧಕವು ಒಂದು ರೀತಿಯಲ್ಲಿ ಸಹಾಯ ಮಾಡಿದರೆ ಇನ್ನೊಂದು ರೀತಿಯಲ್ಲಿ ಅಡ್ಡಪರಿಣಾಮಗಳನ್ನೂ ಉಂಟು ಮಾಡುತ್ತದೆ. ಅದೇನು ಎನ್ನುವ ಮಾಹಿತಿ ಈ ಕೆಳಗಿದೆ ನೋಡಿ.

1. ಜನನ ನಿಯಂತ್ರಣ ಮಾತ್ರೆಗಳು

ಸಂಯೋಜಿತ ಹಾರ್ಮೋನ್ ಗರ್ಭನಿರೋಧಕ ಮಾತ್ರೆಯು ಹಾರ್ಮೋನುಗಳನ್ನು ಒಳಗೊಂಡಿರುತ್ತದೆ, ಅದು ಆ ತಿಂಗಳು ಮೊಟ್ಟೆಯನ್ನು ಹೊರಹಾಕದಂತೆ ದೇಹವನ್ನು ತಪ್ಪುದಾರಿಗೆಳೆಯುತ್ತದೆ, ಅಂಡೋತ್ಪತ್ತಿ ಮತ್ತು ಭ್ರೂಣದ ಅಳವಡಿಕೆಯನ್ನು ತಡೆಯುತ್ತದೆ. ನೀವು ಯಾವ ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸಿದರೂ, ಬಳಕೆಯ ಮೊದಲ ಕೆಲವು ತಿಂಗಳುಗಳಲ್ಲಿ ನೀವು ಸ್ಪಾಟಿಂಗ್‌ ಅಥವಾ ರಕ್ತಸ್ರಾವಕ್ಕೆ ಒಳಗಾಗಬಹುದು. ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟಿನ್ ಅನ್ನು ಒಳಗೊಂಡಿರುವ ಸಂಯೋಜನೆಯ ಮಾತ್ರೆಗಳಿಗೆ ಹೋಲಿಸಿದರೆ, ಕೇವಲ ಪ್ರೊಜೆಸ್ಟಿನ್ ಮಾತ್ರೆಗಳನ್ನು (ಮಿನಿ-ಮಾತ್ರೆಗಳು) ತೆಗೆದುಕೊಳ್ಳುವಾಗ ಇದು ಹೆಚ್ಚಾಗಿ ಕಂಡುಬರುತ್ತದೆ. ಮುಟ್ಟಿನ ಅವಧಿಯ ಮಧ್ಯೆ ರಕ್ತಸ್ರಾವವು ಮಾತ್ರೆ ತೆಗೆದುಕೊಳ್ಳಲು ವಿಫಲವಾದ ಅಥವಾ ತಡವಾಗಿ ತೆಗೆದುಕೊಳ್ಳುವ ಪರಿಣಾಮವಾಗಿಯೂ ಸಂಭವಿಸಬಹುದು.

2. ಗರ್ಭಾಶಯದ ಸಾಧನಗಳು

ಕಾಪರ್ IUD ಮತ್ತು ಪ್ರೊಜೆಸ್ಟಿನ್ IUD ಎರಡು ವಿಧದ IUD ಗಳು ಸುಲಭವಾಗಿ ಬಳಸಬಹುದಾದ ಗರ್ಭಾಶಯ ಸಾಧನಗಳು. ತಾಮ್ರದ IUD ವೀರ್ಯಕ್ಕೆ ಪ್ರತಿಕೂಲವಾದ ವಾತಾವರಣವನ್ನು ಅಭಿವೃದ್ಧಿಪಡಿಸುತ್ತದೆ, ಇದು ಅಂಡಾಣುವನ್ನು ಸೇರದಂತೆ ಮತ್ತು ಅದನ್ನು ಫಲವತ್ತಾಗಿಸದಂತೆ ತಡೆಯುತ್ತದೆ. ಹಾರ್ಮೋನ್ IUD ಪ್ರೊಜೆಸ್ಟಿನ್ ಎಂಬ ಹಾರ್ಮೋನ್ ಅನ್ನು ಸ್ರವಿಸುತ್ತದೆ, ಇದು ಗರ್ಭಾಶಯದ ಒಳಪದರವನ್ನು ತೆಳುಗೊಳಿಸುತ್ತದೆ ಮತ್ತು ಗರ್ಭಕಂಠದ ಲೋಳೆಯನ್ನು ದಪ್ಪವಾಗಿಸುತ್ತದೆ, ಗರ್ಭಾಶಯದೊಳಗೆ ಪ್ರವೇಶಿಸದಂತೆ ವೀರ್ಯವನ್ನು ನಿಷ್ಕ್ರಿಯಗೊಳಿಸುವ ಮೂಲಕ ಗರ್ಭಧಾರಣೆಯನ್ನು ತಡೆಯುತ್ತದೆ. ತಾಮ್ರದ IUD ಅಥವಾ ಪ್ರೊಜೆಸ್ಟಿನ್ IUD ಅನ್ನು ಬಳಸುವ ಮೊದಲ ಮೂರರಿಂದ ಆರು ತಿಂಗಳುಗಳಲ್ಲಿ ಮುಟ್ಟಿನ ಅವಧಿಗಳ ನಡುವೆ ಸ್ಪಾಟಿಂಗ್‌, ಹಾಗೆಯೇ ಅನಿಯಮಿತ ಮತ್ತು ಮುಟ್ಟಿನ ಸಂದರ್ಭದಲ್ಲಿ ನೋವು ಸಾಮಾನ್ಯವಾಗಿದೆ. ಆದರೆ ಇದು ಸಮಯ ಕಳೆದಂತೆ ಅಡ್ಡಪರಿಣಾಮಗಳೂ ಕಡಿಮೆಯಾಗುತ್ತದೆ.

3. ತುರ್ತು ಗರ್ಭನಿರೋಧಕಗಳು

ತುರ್ತು ಗರ್ಭನಿರೋಧಕವಾದ ಮಾತ್ರೆಗಳು ನಿಮ್ಮ ಋತುಚಕ್ರದ ಅವಧಿಯನ್ನು ಕಡಿಮೆ ಮಾಡುತ್ತದೆ. ಹೇಗೆಂದರೆ ಈ ಮಾತ್ರೆಯ ಸೇವನೆಯಿಂದ ನಿಮ್ಮ ಮುಟ್ಟಿನ ಅವಧಿಯು ನಿರೀಕ್ಷಿತ ಅವಧಿಗಿಂತ ಬೇಗನೆ ಕಾಣಿಸಿಕೊಳ್ಳಬಹುದು ಅಥವಾ ತಡವೂ ಆಗಬಹುದು. ನಿಮ್ಮ ಋತುಚಕ್ರದ ಮೊದಲ ಮೂರು ವಾರಗಳಲ್ಲಿ ನೀವು ತುರ್ತುಗರ್ಭನಿರೋಧಕ ಮಾತ್ರೆಗಳನ್ನು ಬಳಸಿದರೆ ನಿಮಗೆ ಬೇಗನೆ ಋತುಸ್ರಾವವಾಗಬಹುದು. ನಿಮ್ಮ ಮುಟ್ಟಿನ ಅವಧಿಯು ದೀರ್ಘವೂ ಆಗಬಹುದು. ಹೆಚ್ಚಿನ ಸಂದರ್ಭಗಳಲ್ಲಿ, ನಿಮ್ಮ ಋತುಚಕ್ರವು ಬೇಗನೇ ಆಗುತ್ತಿದ್ದಲ್ಲಿ, ನಿಮ್ಮ ಅವಧಿಯು ಕೂಡಾ ಬೇಗನೆ ಆಗಬಹುದು. ಅಂಡೋತ್ಪತ್ತಿ ನಂತರ ನೀವು ತುರ್ತು ಗರ್ಭನಿರೋಧಕ ಮಾತ್ರೆಗಳನ್ನು ಬಳಸಿದರೆ ನಿಮ್ಮ ಮುಟ್ಟಿನ ಅವಧಿಗಳು ವಿಳಂಬವಾಗಬಹುದು.

4. ಅಸಹಜ ರಕ್ತಸ್ರಾವವನ್ನು ಗುರುತಿಸುವುದು ಹೇಗೆ..?

ಪ್ರತಿ ಮಹಿಳೆಯ ದೇಹವು ಈ ಜನನ ನಿಯಂತ್ರಣ ವಿಧಾನಗಳಿಗೆ ವಿಭಿನ್ನವಾಗಿ ಪ್ರತಿಕ್ರಿಯಿಸುವುದರಿಂದ, ಅನಿಯಮಿತ ರಕ್ತಸ್ರಾವವು ಅಸಹಜವಾಗಿದೆ ಎಂದು ತಿಳಿಯುವುದು ಕಷ್ಟವಾಗುತ್ತದೆ. ಈ ಕೆಳಗಿನ ಸಂದರ್ಭಗಳಲ್ಲಿ ನೀವು ಅಸಹಜ ರಕ್ತಸ್ರಾವವನ್ನು ಅನುಭವಿಸಿದರೆ ನಿಮ್ಮ ವೈದ್ಯರನ್ನು ಭೇಟಿ ಮಾಡುವುದು ಅಗತ್ಯ.

* ನೀವು ಗರ್ಭಿಣಿಯಾಗಿದ್ದರೆ

* ನಿಮ್ಮ ಅವಧಿಯಲ್ಲಿ ಸಾಕಷ್ಟು ನೋವು ಇದ್ದರೆ

* ಸಂಭೋಗದ ನಂತರ ರಕ್ತಸ್ರಾವವಾದರೆ

* ನೀವು ಮೂರು ತಿಂಗಳಿಗಿಂತ ಹೆಚ್ಚು ಕಾಲ ಅದೇ ಜನನ ನಿಯಂತ್ರಣ ವಿಧಾನವನ್ನು ಬಳಸುತ್ತಿದ್ದರೆ

* ಅಸಜಹ ರಕ್ತಸ್ರಾವ ಅನಿರೀಕ್ಷಿತ

* ನೀವು 8 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ ಅಥವಾ ಪ್ರೌಢಾವಸ್ಥೆಯ ಯಾವುದೇ ಚಿಹ್ನೆಗಳನ್ನು ಹೊಂದಿಲ್ಲದೇ ಯೋನಿ ರಕ್ತಸ್ರಾವವನ್ನು ಹೊಂದಿದ್ದರೆ ವೈದ್ಯರನ್ನು ಭೇಟಿ ಮಾಡಬೇಕು.

5. ತಜ್ಞರ ಸಲಹೆ ಪಡೆಯಿರಿ

ಯಾವುದೇ ಹಾರ್ಮೋನ್ ಗರ್ಭನಿರೋಧಕವನ್ನು ಬಳಸುವ ಮೊದಲ ಕೆಲವು ತಿಂಗಳುಗಳಲ್ಲಿ, ಅನಿಯಮಿತ ಮುಟ್ಟಿನ ಮತ್ತು ಋತುಚಕ್ರದ ಮಧ್ಯೆ ರಕ್ತಸ್ರಾವವು ಸಾಮಾನ್ಯವಾಗಿದೆ, ಆದರೆ ಸಮಯ ಕಳೆದಂತೆ ಅವು ಸಾಮಾನ್ಯವಾಗಿ ಸುಧಾರಿಸುತ್ತವೆ. ಆದರೆ ಯಾವುದೇ ಗರ್ಭನಿರೋಧಕ ವಿಧಾನವನ್ನು ಎಚ್ಚರಿಕೆಯಿಂದ ಬಳಸಬೇಕು, ಏಕೆಂದರೆ ಯಾವುದೇ ಹಾರ್ಮೋನುಗಳ ಅಸಮತೋಲನವು ದೇಹದಲ್ಲಿ ದೀರ್ಘಾವಧಿಯ ಪರಿಣಾಮಗಳಿಗೆ ಕಾರಣವಾಗಬಹುದು. ಪ್ರತಿ ಮಹಿಳೆಯ ದೇಹವು ಹಲವಾರು ಗರ್ಭನಿರೋಧಕ ವಿಧಾನಗಳಿಗೆ ಸ್ವಲ್ಪ ವಿಭಿನ್ನವಾಗಿ ಪ್ರತಿಕ್ರಿಯಿಸುವುದರಿಂದ, ಅನಿಯಮಿತ ರಕ್ತಸ್ರಾವವು ಅ


ನಪೇಕ್ಷಿತ ಅಥವಾ ಅಸಹಜವಾದಾಗ ನಿಮಗೆ ಅದನ್ನು ನಿಯಂತ್ರಣ ಮಾಡುವುದು ಕಷ್ಟವಾಗಬಹುದು. ಯಾವುದೇ ಗರ್ಭನೊರೋಧಕಗಳನ್ನು ಬಳಸುವ ಮೊದಲು ಸ್ತ್ರೀರೋಗತಜ್ಞರನ್ನು ಭೇಟಿ ಮಾಡಿ ಮತ್ತು ಗರ್ಭನಿರೋಧಕಗಳಿಗೆ ಸಂಬಂಧಿಸಿದಂತೆ ಅವರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.

 

 

 

 

 

 

Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries