HEALTH TIPS

ಚೀನಾ ಗಡಿಯಲ್ಲಿ ಮಾದರಿ ಸೇನಾ ನೆಲೆ ನಿರ್ಮಾಣ

 

            ಗುವಾಹಟಿ: ಚೀನಾ ಗಡಿ ಸನಿಹದ ಅತಿ ಎತ್ತರದ ಪ್ರದೇಶದಲ್ಲಿ ಕಾವಲಿಗೆ ನಿಯೋಜನೆಗೊಳ್ಳುವ ಸೈನಿಕರಿಗಾಗಿ ಭಾರತೀಯ ಸೇನೆಯ ಎಂಜಿನಿಯರ್‌ಗಳು 'ಮಾದರಿ ಸೇನಾ ನೆಲೆ' (ಪೋಸ್ಟ್‌) ನಿರ್ಮಾಣ ಮಾಡಿದ್ದು, ಅದು ಬಳಕೆಗೆ ಮುಕ್ತವಾಗಿದೆ.

ಅಲ್ಟ್ರಾ ಹೈ ಪರ್ಫಾರ್ಮೆನ್ಸ್‌ ಕಾಂಕ್ರೀಟ್‌ (ಯುಎಚ್‌ಪಿಸಿ) ಮತ್ತು ಬ್ಯಾಂಬೂ ರೀಇನ್‌ಫೋರ್ಸಡ್‌ ಕಾಂಕ್ರೀಟ್‌ ಫ್ರೇಮ್ಸ್‌ ತಂತ್ರಜ್ಞಾನಗಳನ್ನು ಬಳಸಿಕೊಂಡು ಇದನ್ನು ನಿರ್ಮಿಸಲಾಗಿದೆ.

             'ಅರುಣಾಚಲಪ್ರದೇಶದ ಪಶ್ಚಿಮ ಭಾಗದಲ್ಲಿ (ತವಾಂಗ್‌ ಸೆಕ್ಟರ್‌) ಅಗತ್ಯ ಮೂಲಸೌಕರ್ಯವನ್ನೊಳಗೊಂಡ ಸೇನಾ ನೆಲೆ ನಿರ್ಮಿಸುವ ಮಹಾತ್ವಾಕಾಂಕ್ಷಿ ಯೋಜನೆಗೆ 2021ರ ನವೆಂಬರ್‌ನಲ್ಲಿ ಚಾಲನೆ ನೀಡಲಾಗಿತ್ತು. ಅದು ಈಗ ಪೂರ್ಣಗೊಂಡಿದೆ. ಇನ್ನೂ ಎರಡು ಸೇನಾ ನೆಲೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಅವು ಡಿಸೆಂಬರ್‌ ವೇಳೆಗೆ ಪೂರ್ಣಗೊಳ್ಳಲಿವೆ' ಎಂದು ಸೇನಾ ಅಧಿಕಾರಿಗಳು 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.

               'ಈಗ ನಿರ್ಮಿಸಲಾಗಿರುವ ಕಾವಲು ಕೇಂದ್ರದಲ್ಲಿ ಕನಿಷ್ಠ 30 ಮಂದಿ ಸೈನಿಕರು ಉಳಿದುಕೊಳ್ಳಬಹುದು. ಕೊಠಡಿಗಳು ವಿಶಾಲವಾಗಿದ್ದು, ನೀರು ಹಾಗೂ ಸೋಲಾರ್‌ ವಿದ್ಯುತ್‌ ಸೌಕರ್ಯಗಳನ್ನೂ ಇದು ಒಳಗೊಂಡಿದೆ. ಸೈನಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಅದಕ್ಕೆ ಅಗತ್ಯವಿರುವ ವ್ಯವಸ್ಥೆಯೂ ಈ ಕೇಂದ್ರದಲ್ಲಿದೆ. ಈ ಮೊದಲು ಸೈನಿಕರು ಬಂಕರ್‌ಗಳಲ್ಲಿ ಆಶ್ರಯಪಡೆಯಬೇಕಿತ್ತು. ಅವುಗಳಲ್ಲಿ ವಿಶಾಲವಾದ ಸ್ಥಳಾವಕಾಶ ಇರುತ್ತಿರಲಿಲ್ಲ. ಜೊತೆಗೆ ಹವಾಮಾನದಿಂದ ರಕ್ಷಣೆ ಪಡೆಯುವುದೂ ಕಷ್ಟಕರವಾಗಿತ್ತು. ಹೀಗಾಗಿ ಮಾದರಿ ಪೋಸ್ಟ್‌ಗಳನ್ನು ನಿರ್ಮಿಸುವ ಯೋಜನೆ ರೂಪಿಸಲಾಗಿತ್ತು' ಎಂದು ಸೇನಾ ಪ್ರಕಟಣೆ ತಿಳಿಸಿದೆ.

                 'ಇದು ಮಹಾತ್ವಕಾಂಕ್ಷಿ ಯೋಜನೆ. ಈಗಿನ ವಿನ್ಯಾಸ ಮತ್ತು ಪರಿಕಲ್ಪನೆಯಲ್ಲಿ ಇನ್ನಷ್ಟು ಬದಲಾವಣೆ ಮಾಡಿ, ಎಲ್ಲಾ ಗಡಿ ಪ್ರದೇಶಗಳಲ್ಲೂ ಮಾದರಿ ಸೇನಾ ನೆಲೆಗಳನ್ನು ನಿರ್ಮಿಸಲಾಗುತ್ತದೆ' ಎಂದು ಹೇಳಿದೆ.

                  'ಅತಿ ಎತ್ತರದ ಪ್ರದೇಶಗಳಲ್ಲಿ ಇಂತಹ ಪೋಸ್ಟ್‌ ನಿರ್ಮಿಸುವುದು ಅತ್ಯಂತ ಸವಾಲಿನದ್ದಾಗಿತ್ತು. ನಿರ್ಮಾಣ ಸಾಮಾಗ್ರಿಗಳನ್ನು ಸಾಗಿಸುವುದೂ ಕಷ್ಟವಾಗಿತ್ತು. ಪ್ರತಿಕೂಲ ಹವಾಮಾನದಿಂದಾಗಿ ನಮ್ಮ ಬಳಿ ಸಮಯವೂ ಕಡಿಮೆ ಇತ್ತು. ಕ್ರೇನ್‌ಗಳ ನೆರವಿಲ್ಲದೆ ಎರಡು ಅಂತಸ್ತಿನ ಶೆಡ್ ನಿರ್ಮಿಸುವುದೂ ತ್ರಾಸದಾಯಕವಾಗಿತ್ತು' ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries