HEALTH TIPS

'ತರೂರ್ ಸವರ್ಣ ಹಿಂದೂ': ಕೆಪಿಸಿಸಿ ಬೆಂಬಲವಿಲ್ಲ; ಖರ್ಗೆ ಜೊತೆ ಕೇರಳದ ಕಾಂಗ್ರೆಸ್ ನಾಯಕರು


           ತಿರುವನಂತಪುರ: ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಶಶಿ ತರೂರ್ ಅವರನ್ನು ಬೆಂಬಲಿಸುವುದಿಲ್ಲ ಎಂದು ಕೆಪಿಸಿಸಿ ಘೋಷಿಸಿದೆ.
           ಸ್ಪರ್ಧೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಬಲಿಸುವುದಾಗಿ ಕೆ. ಸುಧಾಕರನ್ ಸ್ಪಷ್ಟಪಡಿಸಿದ್ದಾರೆ. ಕೆಪಿಸಿಸಿ ನಿರ್ಧಾರ ವು ರಾಷ್ಟ್ರೀಯ ನಾಯಕತ್ವದ ಸ್ಥಾನವನ್ನು ತಿರಸ್ಕರಿಸಿದೆ.
      ಶಶಿ ತರೂರ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದ ನಂತರ ಕೇರಳದಲ್ಲಿ ಕಾಂಗ್ರೆಸ್ ನಾಯಕರ ನಡುವೆ ಸಂಘರ್ಷ ತೀವ್ರವಾಗಿತ್ತು. ಆದರೆ ಇದೀಗ ತರೂರ್ ಅವರಿಗೆ ಕೇರಳದ ಬೆಂಬಲ ಇಲ್ಲ ಎಂಬುದು ಬಹುತೇಕ ಖಚಿತವಾಗಿದೆ. ಹಿರಿಯ ನಾಯಕರಾದ ಎ.ಕೆ.ಆಂಟನಿ, ವಿ.ಡಿ.ಸತೀಶನ್ ಮತ್ತು ರಮೇಶ್ ಚೆನ್ನಿತ್ತಲ ಅವರು ಶಶಿ ತರೂರ್ ಅವರನ್ನು ಬೆಂಬಲಿಸುವುದಿಲ್ಲ ಎಂದು ಸಾರ್ವಜನಿಕವಾಗಿ ಹೇಳಿದ್ದಾರೆ. ಆತ್ಮಸಾಕ್ಷಿಗೆ ಮತ ನೀಡಿ ಎಂದು ಸುಧಾಕರನ್ ಹೇಳಿಕೆ ನೀಡಿದ ಬೆನ್ನಲ್ಲೇ ಸುಧಾಕರನ್ ಅವರೇ ತಾವು ತರೂರ್ ಅವರನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಕೆಪಿಸಿಸಿ ಅಧಿಕೃತ ಹೇಳಿಕೆ ಇದುವೇ ಎಂಬುದು ಸ್ಪಷ್ಟವಾಗಿದೆ.
          ಕಾಂಗ್ರೆಸ್ ನಾಯಕರಾದ ಸೋನಿಯಾ, ರಾಹುಲ್, ಪ್ರಿಯಾಂಕಾ ಅವರ ಹಿತಾಸಕ್ತಿಗೆ ಅನುಗುಣವಾಗಿ ನಿರ್ಧರಿಸಲಾದ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಂಪೂರ್ಣ ಬೆಂಬಲ ನೀಡುವ ನೀತಿಯನ್ನು ಕೇರಳದ ಪ್ರಮುಖ ಕಾಂಗ್ರೆಸ್ ನಾಯಕರು ಅನುಸರಿಸಿದ್ದಾರೆ. ಆದರೆ ಇನ್ನೊಂದೆಡೆ ಯುವ ಮುಖಂಡರು ಶಶಿ ತರೂರ್‍ಗೆ ಬೆಂಬಲ ನೀಡುವುದಾಗಿ ಸಾರ್ವಜನಿಕ ನಿಲುವು ತಳೆದಿದ್ದಾರೆ. ಕೆ.ಎಸ್.ಶಬರಿನಾಥನ್, ಮ್ಯಾಥ್ಯೂ ಕುಲಜನಾಡÀನ್, ಹೈಬಿ ಈಡನ್ ಮುಂತಾದವರು ತರೂರ್ ಪರವಾಗಿದ್ದಾರೆ. ಇದೇ ವೇಳೆ ಕಾಂಗ್ರೆಸ್ ನ ಹಿರಿಯ ನಾಯಕರು ಯುವ ನಾಯಕರನ್ನು ತಮ್ಮ ಕಡೆಗೆ ಕರೆತರಲು ಯತ್ನಿಸುತ್ತಿದ್ದಾರೆ. ಇದೇ ವೇಳೆ, ಖರ್ಗೆ ದಲಿತ ಮತ್ತು ತರೂರ್ ಮೇಲ್ಜಾತಿ ಹಿಂದೂ ಎಂಬ ನಿಲುವು ತಳೆದಿರುವ ಹಿರಿಯ ಕಾಂಗ್ರೆಸ್ ನಾಯಕರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳೂ ವ್ಯಕ್ತವಾಗುತ್ತಿವೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries