ತಿರುವನಂತಪುರ: ಹುಡುಗರು ಮತ್ತು ಹುಡುಗಿಯರು ಒಟ್ಟಿಗೆ ಓದುವ ಶಾಲೆಗಳು ಇನ್ನು ಮುಂದೆ ಹುಡುಗರು ಮತ್ತು ಹುಡುಗಿಯರ ಹೆಸರನ್ನು ಹೊಂದಿರುವುದಿಲ್ಲ.
ರಾಜ್ಯದ ಸಾಮಾನ್ಯ ಶಾಲೆಗಳ ಹೆಸರಿನಿಂದ ಪುರುಷ ಮತ್ತು ಸ್ತ್ರೀ ವ್ಯತ್ಯಾಸವನ್ನು ತೆಗೆದುಹಾಕುವ ಪ್ರಸ್ತಾಪ ಜಾರಿಯಾಗುತ್ತಿದೆ. ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಈ ನಿಟ್ಟಿನಲ್ಲಿ ಮಕ್ಕಳ ಹಕ್ಕು ಆಯೋಗದ ಆದೇಶದ ಮೇರೆಗೆ ಇದೀಗ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ. ಲಿಂಗವನ್ನು ಲೆಕ್ಕಿಸದೆ ಮಕ್ಕಳು ಜೊತೆ-ಜೊತೆಗೆ ಕಲಿಯಲಿದ್ದಾರೆ. ಈವರೆಗೆ ಹಲವೆಡೆ ಹೆಣ್ಮಕ್ಕಳಿಗೆ ಹಾಗೂ ಬಾಲಕರಿಗೆ ಪ್ರತ್ಯೇಕ ಶಾಲೆಗಳಿದ್ದವು. ಇದರಿಂದ ಅಲ್ಲಿ ಓದುತ್ತಿರುವ ಮಕ್ಕಳಿಗೆ ತೊಂದರೆಯಾಗುತ್ತಿರುವುದನ್ನು ಗಮನಿಸಿಯೇ ಮಕ್ಕಳ ಹಕ್ಕು ಆಯೋಗದ ಆದೇಶ ಬಂದಿದೆ.
ಅಂತಹ ಶಾಲೆಗಳು ಶಿಕ್ಷಣಾಧಿಕಾರಿಗಳ ಅನುಮತಿಯೊಂದಿಗೆ ತಮ್ಮ ಹೆಸರನ್ನು ಮಾರ್ಪಡಿಸಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆಯ ತೀರ್ಪಿನ ಪ್ರಕಾರ, ಎಲ್ಲಾ ಅಧಿಕೃತ ದಾಖಲೆಗಳು ಮತ್ತು ಶಾಲೆಯ ಮಂಡಳಿಯಲ್ಲಿ ತಿದ್ದುಪಡಿಗಳನ್ನು ಮಾಡಬೇಕು.
ಶಾಲೆಗಳ ಹೆಸರಿನಲ್ಲಿ ಹುಡುಗರು ಮತ್ತು ಹುಡುಗಿಯರು ಇನ್ನಿರುವುದಿಲ್ಲ; ಗಂಡು ಮತ್ತು ಹೆಣ್ಣು ಎಂಬ ಭೇದ ಬೇಡವೆಂದು ಆದೇಶ
0
ಅಕ್ಟೋಬರ್ 14, 2022


