HEALTH TIPS

ಬುಡಕಟ್ಟು ಜನರ ಸ್ವಾತಂತ್ರ್ಯ ಹೋರಾಟ ನೆನಪಿಸುವ ವಿಚಾರ ಸಂಕಿರಣ, ಚಿತ್ರ ಪ್ರದರ್ಶನ



            ಕಾಸರಗೋಡು: ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಬುಡಕಟ್ಟು ಜನರ ಹೋರಾಟವನ್ನು ಸ್ಮರಿಸುವ ಚಿತ್ರಪ್ರದರ್ಶನ ಮತ್ತು ವಿಚಾರ ಸಂಕಿರಣ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕಾಸರಗೋಡು ಪೆರಿಯ ಕ್ಯಾಂಪಸ್‍ನಲ್ಲಿ ಜರುಗಿತು. ಸ್ವಾತಂತ್ರ್ಯಕ್ಕಾಗಿ ಬುಡಕಟ್ಟು ಜನಾಂಗದ ಕೊಡುಗೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
           ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ (ಎನ್‍ಸಿಎಸ್‍ಟಿ) ಆಶ್ರಯದಲ್ಲಿ ಅಖಿಲ ಭಾರತ ಅರಣ್ಯಕಲ್ಯಾಣ ಆಶ್ರಮದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು. ಉಪಕುಲಪತಿ ಪೆÇ್ರ.ಎಚ್. ವೆಂಕಟೇಶ್ವರಲು ಉದ್ಘಾಟಿಸಿ ಮಾತನಾಡಿ, ಆದಿವಾಸಿ ಜನಾಂಗದ ಹೋರಾಟದ ಇತಿಹಾಸವನ್ನು ಜನರಿಗೆ ತಲುಪಿಸಲು ವಿಶ್ವವಿದ್ಯಾಲಯ ಮುಂದಾಗಲಿದೆ. ಈ ಗುರಿಯನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಮತ್ತು ಅಭಿವೃದ್ಧಿಗಾಗಿ ವಿಶ್ವವಿದ್ಯಾಲಯ ಮಿಷನ್ ರೂಪಿಸಲಾಗಿದೆ ಎಂದು ವಿವರಿಸಿದರು.  ತಲಕಲ್ ಚಂದು, ಬಿರ್ಸಾ ಮುಂಡಾ, ರಾಣಿ ಮಾ ಗೈಡಿನ್ಲು, ಕೊಮರಂ ಭೀಮ್ ಮೊದಲಾದ ವಿವಿಧ ಬುಡಕಟ್ಟುಗಳ 60ಕ್ಕೂ ಹೆಚ್ಚು ವೀರರ ಜೀವನ ಚರಿತ್ರೆಗಳನ್ನು ಪ್ರದರ್ಶನದಲ್ಲಿ ನಿರೂಪಿಸಲಾಯಿತು. ನಂತರ ನಡೆದ ವಿಚಾರ ಸಂಕಿರಣದಲ್ಲಿ ವನವಾಸಿ ಕಲ್ಯಾಣ ಆಶ್ರಮದ ಅಖಿಲ ಭಾರತ ಜಂಟಿ ಸಂಘಟನಾ ಕಾರ್ಯದರ್ಶಿ ಸಂದೀಪ್ ಕಾಶಿವಾರ ದಿಕ್ಸೂಚಿ ಭಾಷಣ ಮಾಡಿ, ಆದಿವಾಸಿಗಳ ಹೋರಾಟ ಇತಿಹಾಸದಲ್ಲಿ ಉಜ್ವಲ ಅಧ್ಯಾಯವಾಗಿದೆ ಎಂದು ತಿಳಿಸಿದರು.
            ಎನ್‍ಸಿಎಸ್‍ಟಿ ಅಧ್ಯಕ್ಷರ ಸಹಾಯಕ ಖಾಸಗಿ ಕಾರ್ಯದರ್ಶಿ ಅಭಿನವ್ ಪ್ರಕಾಶ್ ಮುಖ್ಯ ಅತಿಥಿಯಾಗಿದ್ದರು. ಬುಡಕಟ್ಟು ಜನಾಂಗದ ಪರವಾಗಿ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ಮಾಡಿರುವ ಕೆಲಸಗಳನ್ನು ವಿವರಿಸಿದರು. ಕುಲಸಚಿವ ಡಾ.ಎಂ.ಮುರಳೀಧರನ್ ನಂಬಿಯಾರ್, ವನವಾಸಿ ವಿಕಾಸ ಕೇಂದ್ರದ ರಾಜ್ಯ ಸಂಘಟನಾ ಕಾರ್ಯದರ್ಶಿ ಎ.ನಾರಾಯಣನ್, ಡಾ.ಅಜಯಕುಮಾರ್ ಉಪಸ್ಥಿತರಿದ್ದರು. ಡಾ.ಅನಿಶ್ ಕುಮಾರ್ ಟಿ.ಕೆ. ಸ್ವಾಗತಿಸಿದರು. ಸುಕನ್ಯಾ ಎಸ್. ಸುಕುಮಾರನ್ ವಂದಿಸಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು.




 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries