ತಿರುವನಂತಪುರ: ಪೋಲೀಸ್ ಸಭೆಯು ಪೋಲೀಸ್ ಅಧಿಕಾರಿಗಳ ದೂರುಗಳನ್ನು ಪರಿಹರಿಸಲಿದೆ. ಅಧಿಕಾರಿಗಳ ಸೇವೆಗೆ ಸಂಬಂಧಿಸಿದ ಮತ್ತು ವೈಯಕ್ತಿಕ ಕುಂದುಕೊರತೆಗಳನ್ನು ಪರಿಹರಿಸಲು ಕೌನ್ಸಿಲ್ ಅನ್ನು ನಡೆಸಲಾಗುತ್ತದೆ.
ಜಿಲ್ಲಾ ಪೋಲೀಸ್ ವರಿμÁ್ಠಧಿಕಾರಿಗಳು ವಿವಿಧ ಕೇಂದ್ರಗಳಲ್ಲಿ ಪೋಲೀಸ್ ಸಭೆ ನಡೆಸಲಿದ್ದಾರೆ. ರಾಜ್ಯ ಪೆÇಲೀಸ್ ವರಿಷ್ಠ ಅನಿಲಕಾಂತ್ ಅವರು ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿಗಳಿಗೆ ಅಗತ್ಯ ಸೂಚನೆ ನೀಡುವÀರು.
ಪೋಲೀಸ್ ಅಧಿಕಾರಿಗಳ ಸೇವಾ ಸಂಬಂಧಿತ ವಿಷಯಗಳು, ವೇತನ ಮತ್ತು ಪಿಂಚಣಿಗೆ ಸಂಬಂಧಿಸಿದ ದೂರುಗಳ ಕುರಿತು ಸಭೆ ಚರ್ಚಿಸಲಿದೆ. ಇವುಗಳಲ್ಲದೆ ವೈಯಕ್ತಿಕ ದೂರುಗಳನ್ನೂ ಜಿಲ್ಲಾ ಪೋಲೀಸ್ ವರಿμÁ್ಠಧಿಕಾರಿಗಳು ಸಭೆಯಲ್ಲಿ ಪರಿಗಣಿಸಲಿದ್ದಾರೆ. ಬಂದಿರುವ ದೂರುಗಳನ್ನು ಸಕಾಲದಲ್ಲಿ ಪರಿಹರಿಸಲು ಜಿಲ್ಲಾ ಪೋಲೀಸ್ ವರಿಷ್ಠರು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ.
ಪೋಲೀಸ್ ಅಧಿಕಾರಿಗಳ ದೂರುಗಳ ಪರಿಹಾರದ ಭಾಗವಾಗಿ ಉಪವಿಭಾಗೀಯ ಪೋಲೀಸ್ ಅಧಿಕಾರಿಗಳು ಪ್ರತಿ ವಾರ ಪೋಲೀಸ್ ಠಾಣೆಗಳಿಗೆ ಭೇಟಿ ನೀಡಬೇಕು. ರೇಂಜ್ ಡಿಐಜಿಗಳು ಮತ್ತು ವಲಯ ಐಜಿಗಳು ಈ ಚಟುವಟಿಕೆಗಳನ್ನು ಸಂಯೋಜಿಸುತ್ತಾರೆ.
ಇತ್ತೀಚಿನ ದಿನಗಳಲ್ಲಿ ಕೇರಳ ಪೋಲೀಸರು ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಈ ನಡುವೆ ಮೇಲಧಿಕಾರಿಗಳು ಪೋಲೀಸ್ ಕೌನ್ಸಿಲ್ ಜತೆ ಸೇರಿ ಅಧಿಕಾರಿಗಳ ದೂರುಗಳನ್ನು ಬಗೆಹರಿಸಿದ್ದಾರೆ. ಇತ್ತೀಚಿಗೆ ಸ್ವತಃ ಪೋಲೀಸ್ ಅಧಿಕಾರಿಗಳೇ ತಮ್ಮ ಕೆಲಸದ ಭಾಗವಾಗಿ ತೀವ್ರ ಮಾನಸಿಕ ಒತ್ತಡವನ್ನು ಅನುಭವಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಏನೇ ಆಗಲಿ ಪೋಲೀಸ್ ಕೌನ್ಸಿಲ್ ಮೂಲಕ ಇಂತಹ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂಬ ಭರವಸೆ ಅಧಿಕಾರಿಗಳದ್ದು.
ಪೋಲೀಸ್ ಅಧಿಕಾರಿಗಳ ದೂರುಗಳನ್ನು ಪರಿಹರಿಸಲು ಪೋಲೀಸ್ ಕೌನ್ಸಿಲ್: ರಾಜ್ಯ ಪೋಲೀಸ್ ವರಿಷ್ಠ ಅನಿಲಕಾಂತ್ ಸೂಚನೆ
0
ಅಕ್ಟೋಬರ್ 26, 2022





