HEALTH TIPS

ನಕ್ಸಲರ ನಾಯಕನ ಬದಲಿಗೆ ಶಿರಡಿ ಸಾಯಿಬಾಬಾ ಚಿತ್ರ: ಮಾತೃಭೂಮಿ ವಾಹಿನಿಯಿಂದ ಅವಾಂತರ: ತೀವ್ರ ಟೀಕೆ


              ಕೊಚ್ಚಿ: ಕಮ್ಯುನಿಸ್ಟ್ ಭಯೋತ್ಪಾದಕ ನಾಯಕ ಜಿ.ಎನ್.ಸಾಯಿಬಾಬಾ ಅವರನ್ನು ಖುಲಾಸೆಗೊಳಿಸಿದ ಮಹಾರಾಷ್ಟ್ರ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ ಎಂಬ ಸುದ್ದಿಯನ್ನು ಮಾತೃಭೂಮಿ ವಾಹಿನಿ ವರದಿ ಮಾಡಿ ಅವಾಂತರವೆಸಗಿದೆ.
         ಕಮ್ಯುನಿಸ್ಟ್ ಭಯೋತ್ಪಾದಕ ನಾಯಕನ ಬದಲಿಗೆ, ಚಾನೆಲ್ ಆಧ್ಯಾತ್ಮಿಕ ಗುರು ಶಿರಡಿ ಸಾಯಿಬಾಬಾ ಅವರ ಚಿತ್ರವನ್ನು ಪ್ರಕಟಿಸಿದೆ. ಭಾರತದಲ್ಲಿ ಲಕ್ಷಾಂತರ ಭಕ್ತರನ್ನು ಹೊಂದಿರುವ ಶಿರಡಿ ಸಾಯಿಬಾಬಾ ಆಧ್ಯಾತ್ಮಿಕ ಗುರು. ದೇಶಾದ್ಯಂತ ಅನೇಕ ದೇವಾಲಯಗಳಿಗೆ ಅವರ ಹೆಸರನ್ನು ಇಡಲಾಗಿದೆ.
           ಭಯೋತ್ಪಾದಕ ನಾಯಕನ ಬದಲಿಗೆ ಶಿರಡಿ ಸಾಯಿಬಾಬಾ ಅವರ ಚಿತ್ರವನ್ನು ಹಾಕುವ ಚಾನೆಲ್ ನ ಕ್ರಮಕ್ಕೆ ಹಲವರು ಈಗಾಗಲೇ ಟೀಕಿಸಿದ್ದಾರೆ. ಮಾತೃಭೂಮಿ ಇಂತಹ ತಪ್ಪು ಮಾಡಿರುವುದು ಇದೇ ಮೊದಲಲ್ಲ. ಉಕ್ರೇನ್ ವಿರುದ್ಧ ರμÁ್ಯ ಯುದ್ಧಕ್ಕೆ ಮುಂದಾದಾಗ, ದಾಳಿಯ ದೃಶ್ಯವನ್ನು ನೀಡಿದ್ದು ವಿಡಿಯೋ ಗೇಮ್ ನದ್ದಾಗಿತ್ತು. ಪ್ರೇಕ್ಷಕರು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದಾಗ, ಚಾನಲ್ ಅಂತಿಮವಾಗಿ ಕ್ಷಮೆಯಾಚಿಸಿ ಆ ದಿನ ಕೈತೊಳೆದುಕೊಂಡಿತು. ಆದರೆ ಶಿರಡಿ ಸಾಯಿಬಾಬಾ ಅವರ ಚಿತ್ರ ತಪ್ಪಿ ಪ್ರಚುರಪಡಿಸಿದ್ದಕ್ಕೆ  ವಾಹಿನಿ ಇನ್ನೂ ಕ್ಷಮೆ ಕೇಳಿಲ್ಲ.
        ಬಾಂಬೆ ಹೈಕೋರ್ಟ್ ನಿನ್ನೆ ಸಾಯಿಬಾಬಾ ಅವರನ್ನು ಖುಲಾಸೆಗೊಳಿಸಿತ್ತು. ಆದರೆ ಮಹಾರಾಷ್ಟ್ರ ಸರ್ಕಾರ ತಕ್ಷಣವೇ ಸುಪ್ರೀಂ ಕೋರ್ಟ್‍ನ ಮೊರೆ ಹೋಗಿದ್ದು, ತೀರ್ಪಿಗೆ ತಡೆ ನೀಡುವಂತೆ ಕೋರಿತ್ತು. ತೀರ್ಪನ್ನು ಅಮಾನತುಗೊಳಿಸದಿರಲು ಕಾರಣಗಳನ್ನು ತಿಳಿಸಿ ಪ್ರತಿವಾದಿಗಳಿಗೆ ವಾದ ಮಂಡಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.

          ವಿಶೇಷ ಸಭೆಯಲ್ಲಿ ಮಹಾರಾಷ್ಟ್ರ ಸರ್ಕಾರದ ವಾದವನ್ನು ಸುಪ್ರೀಂ ಕೋರ್ಟ್ ಆಲಿಸಿದೆ. ಸಾಯಿಬಾಬಾ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶ ಹೊರಡಿಸಿದ 24 ಗಂಟೆಗಳ ನಂತರ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ಥಗಿತಗೊಳಿಸಿದೆ. ಆರೋಪಿಗಳು ಸಮಾಜದ ಹಿತಾಸಕ್ತಿ ಮತ್ತು ಭಾರತದ ಅಖಂಡತೆಗೆ ವಿರುದ್ಧವಾದ ಅಪರಾಧ ಎಸಗಿದ್ದಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಕಾರಣಗಳನ್ನು ಹೈಕೋರ್ಟ್ ವಾದ  ಪರಿಗಣಿಸುವಂತಿಲ್ಲ ಎಂದೂ ಪೀಠ ಸೂಚಿಸಿದೆ.
     ನ್ಯಾಯಮೂರ್ತಿಗಳಾದ ಎಂಆರ್ ಶಾ ಮತ್ತು ಬಾಲ ತ್ರಿವೇದಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಈ ತೀರ್ಪು ನೀಡಿದೆ. 2017ರಲ್ಲಿ ವಿಚಾರಣಾ ನ್ಯಾಯಾಲಯ ಸಾಯಿಬಾಬಾಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈತ ಮಾವೋವಾದಿ ನಂಟು ಹೊಂದಿದ್ದು, ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದನ್ನು ಪ್ರಶ್ನಿಸಿ ಸಾಯಿಬಾಬಾ ಸಲ್ಲಿಸಿದ್ದ ಮೇಲ್ಮನವಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ.
        ಸಾಯಿಬಾಬಾ ಅವರ ಮಾವೋವಾದಿ ಸಂಪರ್ಕವನ್ನು ಪತ್ತೆಹಚ್ಚಿದ ನಂತರ ಪೋಲೀಸರು 2014 ರಲ್ಲಿ ಅವರನ್ನು ಬಂಧಿಸಿದ್ದರು. ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲಾ ನ್ಯಾಯಾಲಯವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 12 ಬಿ ಮತ್ತು ಯುಎಪಿಎ 13, 18, 20, 38 ಮತ್ತು 39 ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries