ತಿರುವನಂತಪುರ: ಕೇರಳ ಟ್ರಾನ್ಸ್ಜೆಂಡರ್ ಕಲಾ ಉತ್ಸವದ ಸ್ಥಳದಲ್ಲಿ ಸ್ಪರ್ಧಿಗಳು ಪ್ರತಿಭಟನೆ ನಡೆಸಿದರು. ಸಾಮಾಜಿಕ ನ್ಯಾಯ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಕಲಾ ಉತ್ಸವದಲ್ಲಿ ಸ್ಪರ್ಧಾಳುಗಳು ಪ್ರತಿಭಟನೆ ನಡೆಸಿದರು.
ಸ್ಪರ್ಧೆಯ ಸಂದರ್ಭದಲ್ಲಿ ತೀರ್ಪುಗಾರರು ಪೋನ್ ಬಳಸಿದ್ದು, ತಾರತಮ್ಯದಿಂದ ವರ್ತಿಸಿದ್ದಾರೆ ಎಂಬಿತ್ಯಾದಿ ವಿಚಾರಗಳನ್ನು ಪ್ರತಿಭಟನೆಯಲ್ಲಿ ಪ್ರಸ್ತಾಪಿಸಲಾಯಿತು. ಇದಲ್ಲದೇ ಬಹುಮಾನ ವಿತರಣಾ ಸಮಾರಂಭವನ್ನೂ ಸ್ಪರ್ಧಿಗಳು ಬಹಿಷ್ಕರಿಸಿದ್ದಾರೆ.
ಮೊಬೈಲ್ ಪೋನ್ ನೋಡಿಯೇ ತೀರ್ಪು ನೀಡಲಾಗಿದೆ ಎಂದೂ ಆರೋಪಿಸಲಾಗಿದೆ. ಇನ್ನು ಕಲಾ ಉತ್ಸವ ಬೇಡ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ತೀರ್ಪುಗಾರರು ಮತ್ತು ಸಂಘಟಕರು ಅನ್ಯಾಯವಾಗಿ ನಡೆದುಕೊಂಡಿದ್ದಾರೆ ಎಂದರು. ಕಲಾ ಉತ್ಸವ ಮುಗಿಯುವ ಮುನ್ನವೇ ತೀರ್ಪು ಹೇಳಿಕೆಯಲ್ಲಿನ ಅಸಮರ್ಪಕತೆಯನ್ನು ಎತ್ತಿ ಹಿಡಿದ ಪ್ರತಿಭಟನಾಕಾರರು ವೇದಿಕೆಗೆ ಬಂದರು.
ತೃತೀಯಲಿಂಗಿಗಳ ಕಲಾ ಉತ್ಸವದಲ್ಲಿ ಸಾಮಾಜಿಕ ನ್ಯಾಯ ಇಲಾಖೆಗೆ ನ್ಯಾಯ ಎಲ್ಲಿದೆ? ಲಂಚ ಪಡೆದು ತೀರ್ಪು ನೀಡುವ ಇಂತಹ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ತಮಗೆ ಆಸಕ್ತಿ ಇಲ್ಲ. ಪ್ರತಿಭೆಯನ್ನು ಉತ್ತೇಜಿಸಲು ಈ ಕಲಾ ಉತ್ಸವ ನಡೆಸುತ್ತಿಲ್ಲ. ಸೆಮಿ ಕ್ಲಾಸಿಕಲ್ ವಿಭಾಗದಲ್ಲಿ ಸಿನಿಮಾ ನೃತ್ಯಕ್ಕೆ ಪ್ರಥಮ ಬಹುಮಾನ ನೀಡಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಕೇರಳ ಟ್ರಾನ್ಸ್ಜೆಂಡರ್ ಕಲಾ ಉತ್ಸವ; ಸಾಮಾಜಿಕ ನ್ಯಾಯ ಇಲಾಖೆಯಲ್ಲಿ ನ್ಯಾಯ ಎಲ್ಲಿದೆ; ಲಂಚ ಪಡೆದು ನಿರ್ಧಾರ: ಕಲಾ ಉತ್ಸವ ಬಹಿಷ್ಕರಿಸಿದ ಸ್ಪರ್ಧಿಗಳು
0
ಅಕ್ಟೋಬರ್ 17, 2022





