HEALTH TIPS

ಪಕ್ಷ ನಿರ್ದೇಶಿಸಿದರೆ ಗುಂಡು ಹಾರಿಸಿಲೂ ಸಿದ್ದ: ಎಂ.ಎಂ.ಮಣಿ


           ಇಡುಕ್ಕಿ: ಮಾಜಿ ಶಾಸಕ ಎಸ್.ರಾಜೇಂದ್ರನ್ ವಿರುದ್ಧ ಎಂ.ಎಂ.ಮಣಿ ಮತ್ತೆ ಟೀಕೆ ಮಾಡಿದ್ದಾರೆ. ಎಸ್.ರಾಜೇಂದ್ರನ್ ಅವರನ್ನು ಅನರ್ಹತೆಯ ಕಾರಣದಿಂದ ವಜಾಗೊಳಿಸಲಾಗಿತ್ತು.
           ಅವರನ್ನು ಉಚ್ಛಾಟಿಸಲು ಪಕ್ಷದ ಸಮಿತಿ ಸದಸ್ಯನಾಗಿ ಮುತುವರ್ಜಿ ವಹಿಸಿದ್ದೇನೆ ಎಂದರು. ತನ್ನನ್ನು ಉಚ್ಚಾಟಿಸಲು ಕಾರಣರಾದವರು ಎಂ.ಎಂ.ಮಣಿ ಅವರ ವಿರುದ್ಧ ಪುಂಡರ ಕಾಟ ವಿಪರೀತವಾಗಿದೆ ಎಂದು ಎಸ್. ರಾಜೇಂದ್ರನ್ ಹೇಳಿದ್ದರು. ಜಾತಿ ಹೆಸರಿಟ್ಟು ಒಡೆದು ಆಳುವ ಯತ್ನ ಮಣಿಯವರದ್ದು ಎಂದು ಆರೋಪಿಸಿದ್ದರು. ಇದೀಗ ಎಂ.ಎಂ.ಮಣಿ ರಾಜೇಂದ್ರನ್ ಅವರನ್ನು ಕೆಟ್ಟ ಭಾμÉಯಲ್ಲಿ ಟೀಕಿಸಿದ್ದಾರೆ.
            ರಾಜೇಂದ್ರನ್ ಅವರೆಂದಿಗೂ ಇನ್ನು ಪಕ್ಷದಲ್ಲಿ ಇರುವುದಿಲ್ಲ ಎಂದು ಹೇಳಿದರು. ನನ್ನ ಪಕ್ಷ ಸೇರಲು ಅರ್ಹರಲ್ಲ. ಅದಕ್ಕಾಗಿಯೇ ನಾವು ಅವನನ್ನು ಹೊರಹಾಕಿದೆವು. ಅವರಂತಹವರು ಈ ಪಕ್ಷದಲ್ಲಿ ಕೂರುವುದು ಸರಿಯಲ್ಲ. ಇವರೆಲ್ಲರನ್ನೂ ಹೊರ ಹಾಕಲು ಮುಂದಾಗಿದ್ದಾರೆ ಎಂದು ಎಂ.ಎಂ.ಮಣಿ ರಾಜೇಂದ್ರನ್ ಲೇವಡಿ ಮಾಡಿದರು.
             ‘‘ಬಹಳಷ್ಟು ಜನರನ್ನು ಬಲಿಕೊಟ್ಟು ಕಮ್ಯುನಿಸ್ಟ್ ಪಕ್ಷ ಬೆಳೆದಿದೆ. ಹತ್ತಾರು ಜನ ಸೇರಿ ಬೆಳೆಸಿದ ಪಕ್ಷ ಇದಾಗಿದೆ. ಕಳಪೆ ಪ್ರದರ್ಶನ ತೋರಿದರೆ ಎಂ.ಎಂ.ಮಣಿ ಅವರನ್ನೂ ವಜಾ ಮಾಡಬೇಕು. ಕಮ್ಯುನಿಸ್ಟ್ ಪಕ್ಷ ರಾಜೇಂದ್ರನ್‍ನಂತಹವರು ಕುಳಿತುಕೊಳ್ಳುವ ಪಕ್ಷವಲ್ಲ. ಎಸ್.ರಾಜೇಂದ್ರನ್ ಅವರನ್ನು ಪದಚ್ಯುತಗೊಳಿಸಲು ನಾನೇ ಮುಂದಾಗಿದ್ದೆ. ನಾನು ಸುಮ್ಮನೆ ಕೂರುವುದಿಲ್ಲ. ಪಕ್ಷ ಬೆಂಕಿ ಹಚ್ಚಿ ಎಂದು ಹೇಳಿದರೆ ನಾನು ಗುಂಡು ಹಾರಿಸುತ್ತೇನೆ ಎಂದು ಎಂ.ಎಂ.ಮಣಿ ಹೇಳಿದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries