HEALTH TIPS

ಇನ್ಮುಂದೆ Blue Tick ಬೇಕೆಂದರೆ ಪ್ರತಿ ತಿಂಗಳು 1600 ರೂ. ಪಾವತಿಸಿ; ಟ್ವಿಟರ್​ನಿಂದ ಹೊಸ ರೂಲ್ಸ್​!

 

                ನವದೆಹಲಿ: ಸಾಮಾಜಿಕ ಜಾಲತಾಣದ ಬಳಕೆಯಲ್ಲಿ ಎಲ್ಲರಿಗೂ ಕ್ರೇಝ್ ಇದ್ದೇ ಇದೆ. ನಮಗೂ ಹೆಚ್ಚಿನ ಫಾಲೋವರ್ಸ್​ ಬೇಕು, ನಮ್ಮ ಪೋಸ್ಟ್ ಹೆಚ್ಚಿನ ಶೇರ್, ಲೈಕ್ಸ್​ ಪಡೆಯಬೇಕೆಂಬ ಬಯಕೆ ಇರುತ್ತದೆ. ಜತೆಗೆ ನಮಗೂ ನಮ್ಮ ಪ್ರೊಫೈಲ್​ನಲ್ಲಿ ಬ್ಲೂ ಟಿಕ್ (Blue Tick) ಬರಬೇಕೆಂದು ಇರುತ್ತದೆ.

ಸದ್ಯ ಎಲಾನ್ ಮಸ್ಕ್ ಒಡೆತನಕ್ಕೆ ಟ್ವಿಟರ್​ ಬರುತ್ತಿದ್ದಂತೆ ಹಲವು ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಇದರ ಫಲವಾಗಿ ಇನ್ನುಮುಂದೆ ಟ್ವಿಟರ್​ನಲ್ಲಿ ಬ್ಲೂ ಟಿಕ್ (Blue Tick) ಬೇಕೆಂದರೆ ಹಣ ಪಾವತಿಸಿ ಚಂದದಾರರಾಗಬೇಕಿದೆ.

                     ಟ್ವಿಟರ್​​ನಲ್ಲಿ ಅಧಿಕ ಫಾಲೋವರ್ಸ್​ಗಳನ್ನು ಹೊಂದಿದಾಗ ಲಭ್ಯವಾಗುವಂತಹ ಬ್ಲೂ ಟಿಕ್ (Blue Tick) ಬಳಕೆಯಲ್ಲಿ ವ್ಯತ್ಯಾಸವಾಗುತ್ತಿದೆ. ಇನ್ನು ಮುಂದೆ ತಮ್ಮ ಟ್ವಿಟರ್ ಖಾತೆಯಲ್ಲಿ ಬ್ಲೂ ಟಿಕ್ (Blue Tick) ಲಭ್ಯವಾಗಬೇಕೆಂದರೆ ಬಳಕೆದಾರರು ಚಂದದಾರರಾಗಬೇಕೆಂಬ ಎಂಬ ಮಾಹಿತಿ ಹೊರಬಿದ್ದಿದೆ.

                  ವರದಿಯ ಪ್ರಕಾರ, ಇನ್ನು ಮುಂದೆ ಟ್ವಿಟರ್​ನ ಸೀಮಿತ ಬಳಕೆದಾರರಿಗೆ ಮಾತ್ರ ಬ್ಲೂ ಟಿಕ್ ಲಭಿಸಲಿದೆ. ಜತೆಗೆ ಬ್ಲೂ ಟಿಕ್​ಗಾಗಿ ಬಳಕೆಗಾಗಿ ಪ್ರತಿ ತಿಂಗಳು (Blue Tick) 1600 ರೂ. ಮೊತ್ತವನ್ನು ಟ್ವಿಟರ್ ನಿಗದಿಪಡಿಸಿದೆ. ಇನ್ನು ಮುಂದೆ ಟ್ವಿಟರ್​ಗೆ ಚಂದದಾರರಾದರೆ ಮಾಡಿರುವ ಟ್ವೀಟ್​​ನ್ನು ಎಡಿಟ್ ಮತ್ತು ಅಳಿಸಿ (Undo) ಹಾಕುವ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ವರದಿಯಾಗಿದೆ.

               ಈಗಾಗಲೇ ಬ್ಲೂ ಟಿಕ್ (Blue Tick) ಹೊಂದಿರುವ ಬಳಕೆದಾರರು 90 ದಿನಗಳ ಒಳಗಾಗಿ ನಿಗದಿತ ಮೊತ್ತ ಪಾವತಿಸಿ ಬ್ಲೂ ಟಿಕ್ (Blue Tick) ಮುಂದುವರಿಸಬಹುದಾಗಿದೆ. ಈ ಬಗ್ಗೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮವನ್ನು ಟ್ವಿಟರ್ ಜಾರಿಗೊಳಿಸುವ ಸಾಧ್ಯತೆ ಹೆಚ್ಚಿದೆ ಎಂದು ವರದಿಯಾಗಿದೆ. ಸದ್ಯ ಎಲಾನ್ ಮಸ್ಕ್ ಟ್ವಿಟರ್​ನ್ನು ಖರೀದಿಸುತ್ತಿದ್ದಂತೆ ಟ್ವಿಟರ್​ನ ಪರಿಶೀಲನಾ ಪ್ರಕ್ರಿಯೆ ನಡೆಯುತ್ತಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries