HEALTH TIPS

ಭಾರತದಲ್ಲಿ 100 ವರ್ಷ ಮೇಲ್ಪಟ್ಟ 2.49 ಲಕ್ಷ ಮತದಾರರು: ಸಿಇಸಿ

 

          ಪುಣೆ: ಭಾರತದಲ್ಲಿ 100 ವರ್ಷ ಮೇಲ್ಪಟ್ಟ 2.49 ಲಕ್ಷ ಮತದಾರರಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.

              ಮಹಾರಾಷ್ಟ್ರದ ಪುಣೆ ನಗರದಲ್ಲಿ ಮತದಾರ ಪಟ್ಟಿಗೆ ಹೆಸರನ್ನು ಸೇರಿಸುವ ಕುರಿತಂತೆ ಜನಜಾಗೃತಿ ಮೂಡಿಸಲು ಹಮ್ಮಿಕೊಳ್ಳಲಾಗಿದ್ದ ಸೈಕಲ್ ರ್‍ಯಾಲಿ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ 1.80 ಕೋಟಿ ಮತದಾರರು 80 ವರ್ಷ ಮೇಲ್ಪಟ್ಟವರು ಎಂದು ಹೇಳಿದ್ದಾರೆ.

               ಮತದಾರ ಪಟ್ಟಿಗೆ ಸೇರ್ಪಡೆ ಚಟುವಟಿಕೆ ವೇಗಗೊಳಿಸುವ ಕುರಿತು ಮಾತನಾಡಿದ ಅವರು, ಹಿಮಾಲಯದಿಂದ ದಕ್ಷಿಣದ 6,000 ಕಿಮೀ ಕರಾವಳಿ, ಪಶ್ಚಿಮ ಮತ್ತು ಪೂರ್ವದ ಮರುಭೂಮಿಗಳು ಸೇರಿ ನಮ್ಮ ಪಟ್ಟಿಯಲ್ಲಿ ಸುಮಾರು 2.49 ಲಕ್ಷ ಮತದಾರರು 100 ವರ್ಷ ದಾಟಿದ್ದಾರೆ. ಅವರ ಜೊತೆ ಮಾತನಾಡಿದಾಗ, ಅವರು ತಮ್ಮ ಜೀವನದುದ್ದಕ್ಕೂ ಮತ ಚಲಾಯಿಸುತ್ತಿರುವುದನ್ನು ಕೇಳಿ ಸಮಾಧಾನ ಮತ್ತು ಸಂತೋಷವಾಗುತ್ತದೆ'ಎಂದು ಹೇಳಿದರು.

          ಇತ್ತೀಚೆಗೆ ನಿಧನರಾದ ಭಾರತದ ಮೊದಲ ಮತದಾರ 106 ವರ್ಷದ ಶ್ಯಾಮ್ ಸರನ್ ನೇಗಿ ಅವರು ಸಾಯುವ ಮೂರು ದಿನಗಳ ಮೊದಲು ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಿದ್ದರು ಎಂದು ಸಿಇಸಿ ಹೇಳಿದರು. ಅಲ್ಲದೆ, ನೇಗಿ ಅವರು ದೇಶದ ಮತದಾರರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಅವರು ಹೇಳಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries