ತಿರುವನಂತಪುರಂ: ರಾಜ್ಯದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸುವ ರೈಲುಗಳ ವೇಗ ಹೆಚ್ಚಿಸುವ ಕುರಿತು ಕಾರ್ಯಸಾಧ್ಯತಾ ಅಧ್ಯಯನ ನಡೆಸಲು ರೈಲ್ವೆ ಇಲಾಖೆ ಮುಂದಾಗಿದೆ.
ತಿರುವನಂತಪುರಂ-ಮಂgಐUಡಿu ಮಾರ್ಗದಲ್ಲಿ ಅಲಪ್ಪುಳ ಮತ್ತು ಕೊಟ್ಟಾಯಂ ಮೂಲಕ ಸಂಚರಿಸುವ ರೈಲುಗಳ ವೇಗವನ್ನು ಗಂಟೆಗೆ 130ರಿಂದ 160 ಕಿ.ಮೀ.ಗೆ ಹೆಚ್ಚಿಸುವ ಕುರಿತು ಅಧ್ಯಯನ ನಡೆಸಲಾಗುತ್ತಿದೆ.
ಇದರ ಭಾಗವಾಗಿ ತಿರುವನಂತಪುರಂ-ಕಾಯಂಕುಳಂ ಮಾರ್ಗದಲ್ಲಿ ಗರಿಷ್ಠ ವೇಗವನ್ನು ಗಂಟೆಗೆ 100 ಕಿ.ಮೀ.ನಿಂದ 110 ಕಿ.ಮೀ.ಗೆ, ತುರವೂರ್-ಎರ್ನಾಕುಳಂ ಮಾರ್ಗದಲ್ಲಿ 110 ಕಿ.ಮೀ ಮತ್ತು ಎರ್ನಾಕುಳಂ-ಶೋರ್ನೂರ್ ಮಾರ್ಗದಲ್ಲಿ ಮೊದಲ ಹಂತದಲ್ಲಿ ಗಂಟೆಗೆ 90 ಕಿ.ಮೀ. ಹೆಚ್ಚಿಸಲು ಚಿಂತನೆ ನಡೆದಿದೆ.
ಮುಂದಿನ ಹಂತದಲ್ಲಿ ವೇಗವನ್ನು ಗಂಟೆಗೆ 130 ರಿಂದ 160 ಕಿ.ಮೀ.ಗೆ ಹೆಚ್ಚಿಸಲಾಗುವುದು. ಅಗತ್ಯ ನಿರ್ಮಾಣ ಕಾಮಗಾರಿಗಳು ನಡೆಯುತ್ತಿವೆ ಎಂದು ರೈಲ್ವೆ ತಿಳಿಸಿದೆ.
ರಾಜ್ಯದಲ್ಲಿ ರೈಲುಗಳ ವೇಗ ಹೆಚ್ಚಿಸಲು ಸಿದ್ದತೆ: ಗಂಟೆಗೆ 160 ಕಿ.ಮೀ ವೇಗ ಹೆಚ್ಚಿಸುವ ಅಧ್ಯಯನದಲ್ಲಿ ಭಾರತೀಯ ರೈಲ್ವೇ
0
ನವೆಂಬರ್ 30, 2022
Tags





