ಕುಂಬಳೆ: ಕುಂಬಳೆ ಕೊಟ್ಯ ಶ್ರೀಕುಪ್ಪೆಪಂಜುರ್ಲಿ ಭಂಡಾರದ ಜೀರ್ಣೋದ್ದಾರ, ಪುನಃಪ್ರತಿಷ್ಠೆ ಹಾಗೂ ಕಲಶಾಭಿಷೇಕದ ವಿಜ್ಞಾಪನಾಪತ್ರವನ್ನು ಭಾನುವಾರ ವೇದಮೂರ್ತಿ ಕೇಶವ ಅಡಿಗ ಕುಂಬಳೆ ಅವರು ಭಂಡಾರ ಕೊಟ್ಯ ಪರಿಸರದಲ್ಲಿ ಬಿಡುಗಡೆಗೊಳಿಸಿದರು.
ಮಂಜುನಾಥ ಆಳ್ವ ಮಡ್ವ ಅಧ್ಯಕ್ಷತೆ ವಹಿಸಿದ್ದರು. ಚಂದ್ರ ಕಾಜೂರು, ಆನಂದ ರೈ.ಕಾಜೂರು, ಗ್ರಾ.ಪಂ.ಸದಸ್ಯರಾದ ರವಿರಾಜ್, ಪುಷ್ಪಲತಾ ಕಾಜೂರು, ಮುಖಂಡರಾದ ಚೆರಿಯಪ್ಪ ಬೆಳ್ಚಪ್ಪಾಡ, ಕುಶಲ ಶೆಟ್ಟಿ ಕಾಜೂರು ಉಪಸ್ಥಿತರಿದ್ದರು. ಈ ಸಂದರ್ಭ ಧನಸಂಗ್ರಹಕ್ಕೆ ಚಾಲನೆ ನೀಡಲಾಯಿತು. ಪುಂಡರೀಕಾಕ್ಷ ಕೆ.ಎಲ್.ಸ್ವಾಗತಿಸಿ, ಸಂಜೀವ ಮರಿಕ್ಕೆ ನಿರೂಪಿಸಿ, ವಂದಿಸಿದರು.
ಕುಂಬಳೆ ಕೊಟ್ಯ: ವಿಜ್ಞಾಪನಾಪತ್ರ ಬಿಡುಗಡೆ
0
ನವೆಂಬರ್ 21, 2022
Tags





