ಬದಿಯಡ್ಕ: ಗೋಳಿಯಡ್ಕ ಶ್ರೀ ವಿಷ್ಣುಮೂರ್ತಿ, ಕೋಮರಾಯ ಚಾಮುಂಡಿ ಹಾಗೂ ಬ್ರಹ್ಮಶ್ರೀ ಮೊಗೇರ ದೈವಗಳ ಜೀರ್ಣೋದ್ಧಾರ ಸಮಾಲೋಚನಾ ಸಭೆ ಭಾನುವಾರ ಜರಗಿತು. ಶ್ರೀ ವಿಷ್ಣುಮೂರ್ತಿ ಸೇವಾಸಮಿತಿಯ ಅಧ್ಯಕ್ಷ ಸತ್ಯನಾರಾಯಣ ಜಿ. ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಮುಂದಾಳು ಬಿ.ವಸಂತ ಪೈ ಬದಿಯಡ್ಕ ಉಪಸ್ಥಿತರಿದ್ದು ಮಾತನಾಡಿ ಊರಿನ ಜನರು ಒಗ್ಗಟ್ಟಿನಿಂದ ಇಂತಹ ಪುಣ್ಯಕಾರ್ಯದಲ್ಲಿ ಭಾಗವಹಿಸಬೇಕು. ನಮ್ಮ ಪಾಲಿಗೆ ಬಂದೊದಗಿದ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಜೀವನವನ್ನು ಪಾವನಗೊಳಿಸಬೇಕು. ಎಲ್ಲವನ್ನೂ ನೀಡುವ ಭಗವಂತನಿಗೆ ನಾವು ಕಿಂಚಿತ್ತಾದರೂ ನೀಡಬೇಕು. ಧಾರ್ಮಿಕ ಕ್ಷೇತ್ರಗಳ ಪುನರುದ್ಧಾರದಿಂದ ನಾಡು ಸಮೃದ್ಧಿಯನ್ನು ಹೊಂದಲಿದೆ ಎಂದರು.
ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರು, ಸಾಮಾಜಿಕ ಮುಂದಾಳು ನಾರಾಯಣ ಮಣಿಯಾಣಿ ನೀರ್ಚಾಲು, ಉಪ್ಲೇರಿ ಮಂತ್ರಮೂರ್ತಿ ಗುಳಿಗ ಸನ್ನಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು, ನಿವೃತ್ತ ಗ್ರಾಮಾಧಿಕಾರಿ ಕೃಷ್ಣ ಡಿ.ದರ್ಬೆತ್ತಡ್ಕ, ಜನಪ್ರತಿನಿಧಿಗಳಾದ ರವಿಕುಮಾರ್ ರೈ ಪೆರಡಾಲಗುತ್ತು ಹಾಗೂ ಡಿ.ಶಂಕರ ದರ್ಬೆತ್ತಡ್ಕ, ಕೃಷ್ಣಪ್ರಸಾದ ರೈ ಪೆರಡಾಲ, ಶಂಕರ ಅರ್ತಿಪಳ್ಳ, ಐ. ಲಕ್ಷ್ಮಣ ಪೆರಿಯಡ್ಕ, ಧರ್ಮದರ್ಶಿ ಬಾಬು ಯು ಪಚ್ಲಂಪಾರೆ, ಅಂಗಾರ ಅಜಕ್ಕೋಡು ವೇದಿಕೆಯಲ್ಲಿ ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪ್ರತಿಷ್ಠಾ ಮಹೋತ್ಸವ ಸಮಿತಿಯನ್ನು ರೂಪಿಸಲಾಯಿತು. ಗೌರವಾಧ್ಯಕ್ಷರಾಗಿ ಉಮೇಶ ಗೋಳಿಯಡ್ಕ, ಅಧ್ಯಕ್ಷರಾಗಿ ಗಂಗಾಧರ ಗೋಳಿಯಡ್ಕ, ಕಾರ್ಯದರ್ಶಿಯಾಗಿ ಸೋಮನಾಥ, ಖಜಾಂಜಿಯಾಗಿ ಬಾಬು ಜಿ.ಕೆ. ಅವರನ್ನು ಆರಿಸಲಾಯಿತು. ಉಪಾಧ್ಯಕ್ಷರಾಗಿ ಸುಂದರ ಮಾಸ್ತರ್, ನಾರಾಯಣ ಡ್ರೈವರ್, ಸುಕುಮಾರ, ಜೊತೆ ಕಾರ್ಯದರ್ಶಿಗಳಾಗಿ ಪ್ರಶಾಂತ ಜಿ., ಸಂತೋಷ್ ಕುಮಾರ್, ರಾಜೇಶ್ ಜಿ ಹಾಗೂ ಇತರ ಸದಸ್ಯರನ್ನೊಳಗೊಂಡ ಸಮಿತಿಯನ್ನು ರೂಪಿಸಲಾಯಿತು. ಗಂಗಾದರ ಗೋಳಿಯಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸೋಮನಾಥ ಸ್ವಾಗತಿಸಿ, ಸುಂದರ ಮಾಸ್ತರ್ ವಂದಿಸಿದರು.
ಗೋಳಿಯಡ್ಕ: ದೈವಗಳ ಪ್ರತಿಷ್ಠಾ ಸಮಿತಿ ರೂಪೀಕರಣ ಸಭೆ
0
ನವೆಂಬರ್ 21, 2022
Tags




.jpg)
