ಬದಿಯಡ್ಕ: ಕೇರಳ ಸ್ಥಳೀಯ ಆಡಳಿತ ಸಂಸ್ಥೆ ನಡೆಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಪಾಲಕ್ಕಾಡ್ನಲ್ಲಿ ಭಾಗವಹಿಸಿ ನವಜೀವನ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳಾದ ದೇವಿಕ ಮೋಹನ್ ಮತ್ತು ಆರ್ಯ ಪಿವಿ. ದ್ವಿತೀಯ ಸ್ಥಾನವನ್ನು ಪಡೆದು ನವಜೀವನ ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ.
ಬದಿಯಡ್ಕ ಗ್ರಾಮ ಪಂಚಾಯತಿ ನೇತೃತ್ವದಲ್ಲಿ ಅಭಿನಂದನಾ ಕಾರ್ಯಕ್ರಮ ನವಜೀವನ ಶಾಲೆಯಲ್ಲಿ ಜರಗಿತು. ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾಂತ.ಬಿ. ಅಧ್ಯಕ್ಷತೆ ವಹಿಸಿದರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ವಿದ್ಯಾರ್ಥಿಗಳನ್ನು ಅಭಿನಂದಿಸಿ ಸ್ಮರಣೆಕೆ ನೀಡಿ ಮಾತನಾಡಿ, ನವಜೀವನ ಶಾಲೆಯ ವಿದ್ಯಾರ್ಥಿಗಳು ಶಾಲೆಯ ಕೀರ್ತಿಯನ್ನು ರಾಜ್ಯಮಟ್ಟದಲ್ಲಿ ಪ್ರಸರಿಸಿ ಜಿಲ್ಲೆ ಸಹಿತ ಗ್ರಾಮ ಪಂಚಾಯತಿಗೆ ಹೆಮ್ಮೆ ತಂದಿರುತ್ತಾರೆ. ಅತ್ಯಂತ ಇತಿಹಾಸವಿರುವ ನವಜೀವನ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಲಿ ಎಂದರು.
ಗ್ರಾಮ ಪಂಚಾಯತಿ ಉಪಾಧ್ಯಕ್ಷ ಅಬ್ಬಾಸ್ ಎಂ, ಮುಖ್ಯೋಪಾಧ್ಯಾಯನಿ ಮಿನಿ ಟೀಚರ್, ಯೋಜನಾ ಆಯೋಗದ ಉಪಾಧ್ಯಕ್ಷ ಮಾಹಿನ್ ಕೇಳೋಟ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶಾಫಿ ಚೂರಿಪಳ್ಳ, ಪಂಚಾಯಿತಿ ಸದಸ್ಯ ಶ್ಯಾಮ್ ಪ್ರಸಾದ್ ಮಾನ್ಯ, ಡಿ ಶಂಕರ, ಹಮೀದ್ ಪಳ್ಳತಡ್ಕ, ಕಾರ್ಯದರ್ಶಿ ರಾಜೇಂದ್ರನ್ ಶುಭ ಹಾರೈಸಿದರು. ಹಿರಿಯ ಅಧ್ಯಾಪಕಿಯರಾದ ಪ್ರಭಾವತಿ ಕೆದಿಲಾಯ, ಊರ್ಮಿಳಾ ಟೀಚರ್, ಮಾಲತಿ ಟೀಚರ್ ಉಪಸ್ಥಿತರಿದ್ದರು.
ರಸಪ್ರಶ್ನೆ ಸ್ಪರ್ಧೆ: ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನಗಳಿಸಿದ ನವಜೀವನ ಶಾಲೆ
0
ನವೆಂಬರ್ 29, 2022




.jpg)
