ಕಾಸರಗೋಡು: ಹೆಚ್ಚುತ್ತಿರುವ ಮಾದಕದ್ರವ್ಯ ಬಳಕೆ ತಡೆಗಟ್ಟುವ ನಿಟ್ಟಿನಲ್ಲಿ ನಡೆದುಬರುತ್ತಿರುವ ಆಂದೋಲನದ ಅಂಗವಾಗಿ ಕುಂಜತ್ತೂರು ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಗೋಲು ಬಾರಿಸುವ ಮೂಲಕ ಸಾಂಕೇತಿಕ ಪ್ರತಿಭಟನೆ ಆಯೋಜಿಸಲಾಯಿತು.
ಆರೋಗ್ಯಕರ ಹಾಗೂ ಸ್ವಾಸ್ಥ್ಯಪೂರ್ಣ ಸಮಾಜ ಎಂಬ ಗುರಿಯೊಂದಿಗೆ ಸಾವಿರ ಗೋಲು ಬಾರಿಸುವ ಕಾರ್ಯಕ್ರಮ ಶಾಲಾ ವಠಾರದಲ್ಲಿ ಆಯೋಜಿಸಲಾಯಿತು. ಶಾಲಾ ಮುಖ್ಯ ಶಿಕ್ಷಕ ಬಾಲಕೃಷ್ಣ ಗೋಲು ಹೊಡೆಯುವ ಮೂಲಕ ಮಾದಕ ದ್ರವ್ಯ ವಿರುದ್ಧ ಸಾವಿರ ಗೋಲು ಕಾರ್ಯಖ್ರಮಕ್ಕೆ ಚಾಲನೆ ನೀಢಿದರು. ಶಾಲಾ ಶಿಕ್ಷಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪಿ.ಜಿ ಅನಿತಾ ನೇತೃತ್ವ ವಹಿಸಿದ್ದರು.
ಕುಂಜತ್ತೂರು ಶಾಲೆಯಲ್ಲಿ ಮಾದಕ ದ್ರವ್ಯ ವಿರುದ್ಧ ಅಭಿಯಾನ-ಸಾವಿರ ಗೋಲು ಕಾರ್ಯಕ್ರಮ
0
ನವೆಂಬರ್ 29, 2022
Tags





