ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ ನಡೆದಿದೆ. ಪಕ್ಷದ ರ್ಯಾಲಿಯಲ್ಲಿ ಇಮ್ರಾನ್ ಖಾನ್ ಅವರ ಕಾಲಿಗೆ ಗುಂಡು ತಗುಲಿದೆ. ಹಿರಿಯ ನಾಯಕರಿಗೂ ಗಾಯಗಳಾಗಿವೆ. ಇಮ್ರಾನ್ ಖಾನ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ವಜೀರಾಬಾದ್‍ನ ಜಾಫರ್ ಇಖಾನ್ ಚೌಕ್‍ನಲ್ಲಿ ಕೆಲವು ನಿಮಿಷಗಳ ಹಿಂದೆ ದಾಳಿ ನಡೆದಿದೆ. ಪೋಲೀಸರು ದಾಳಿಕೋರನನ್ನು ಬಂಧಿಸಿದ್ದಾರೆ.
ಕಂಟೈನರ್ ಟ್ರಕ್ ಮೇಲಿನಿಂದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಇಮ್ರಾನ್ ಖಾನ್ ಗೆ ಗುಂಡು ಹಾರಿಸಲಾಗಿದೆ. ಕೂಡಲೇ ಅವರನ್ನು ಬುಲೆಟ್ ಪ್ರೂಫ್ ವಾಹನಕ್ಕೆ ವರ್ಗಾಯಿಸಲಾಯಿತು. ಶೆಹಬಾಜ್ ಷರೀಫ್ ಸರ್ಕಾರದ ವಿರುದ್ಧ ಪ್ರತಿಭಟನೆಯ ಭಾಗವಾಗಿ ಇಸ್ಲಾಮಾಬಾದ್‍ಗೆ ಲಾಂಗ್ ಮಾರ್ಚ್‍ನಲ್ಲಿ ಈ ದಾಳಿ ನಡೆದಿದೆ. ಪಿಟಿಐ ಪಕ್ಷದ ನಾಲ್ವರು ಮುಖಂಡರು ಮತ್ತು ಬೆಂಬಲಿಗರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇಮ್ರಾನ್ ಖಾನ್ ಕಾಲಿಗೆ ನಾಲ್ಕು ಬಾರಿ ಗುಂಡು ಹಾರಿಸಲಾಗಿದೆ ಎಂದು ಪಿಟಿಐ ನಾಯಕ ಇಮ್ರಾನ್ ಇಸ್ಮಾಯಿಲ್ ಉಲ್ಲೇಖಿಸಿ ಪಾಕಿಸ್ತಾನ ಮಾಧ್ಯಮ ವರದಿ ಮಾಡಿದೆ. ಅಕ್ಟೋಬರ್ 28 ರಂದು ಇಮ್ರಾನ್ ಖಾನ್ ಲಾಹೋರ್‍ನಿಂದ ಇಸ್ಲಾಮಾಬಾದ್‍ಗೆ ರಿಯಲ್ ಪ್ರೀಡಂ ರ್ಯಾಲಿಯನ್ನು ಪ್ರಾರಂಭಿಸಿದರು. ಇಮ್ರಾನ್ ಖಾನ್ ಸಂದರ್ಶನ ಮಾಡುವಾಗ ವಾಹನದಿಂದ ಕೆಳಗೆ ಬಿದ್ದು ಚಾನೆಲ್ ವರದಿಗಾರ ಸಾವನ್ನಪ್ಪಿದ್ದರು. ಚಾನೆಲ್ 5 ವರದಿಗಾರ ಸದಾಫ್ ನಯೀಮ್ ಅವರ ಸಾವಿನ ನಂತರ ಲಾಂಗ್ ಮಾರ್ಚ್ ಅನ್ನು ಸಹ ಸ್ಥಗಿತಗೊಳಿಸಲಾಯಿತು.
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ
0
ನವೆಂಬರ್ 03, 2022





