HEALTH TIPS

ಚಳಿಗಾಲದಲ್ಲಿ ಕಿವಿ ನೋವು, ಸೋಂಕು ಉಂಟಾಗದಿರಲು ಈ ಟಿಪ್ಸ್ ಅನುಸರಿಸಿ

 ಕಿವಿ ನೋವು ಚಳಿಗಾಲದಲ್ಲಿ ಸರ್ವೇಸಾಮಾನ್ಯ. ನೋವು ಕಿವಿಯೊಳಗೆ ತೀವ್ರವಾಗಿದ್ದು, ಕಿವಿಯ ಸುತ್ತಲೂ ನೋವು ಹರಡಿ, ಇರುಸು ಮುರುಸು ಉಂಟಾಗಿ ಕೊನೆಗೆ ಮೆದುಳನ್ನು ತಲುಪಬಹುದು. ಇಂತಹ ತೊಂದರೆಗಳಿಂದ ಪಾರಾಗಲು ಪರಿಹಾರಗಳು ಅಗತ್ಯ ಆದರೆ ಆ ತೊಂದರೆಗಳು ಉಂಟಾಗಲು ಕಾರಣಗಳೇನು ಎಂದು ತಿಳಿಯುವುದೂ ಅತ್ಯಗತ್ಯ. ಕಾರಣಗಳನ್ನು ತಿಳಿದಾಗ ಆ ತೊಂದರೆ ಉಂಟಾಗದಂತೆ ನೋಡಿಕೊಳ್ಳಬಹುದು.ಇ ಎನ್ ಟಿ ತಜ್ಞರು ಕಿವಿ ನೋವಿಗೆ ಕಾರಣಗಳು ಮತ್ತು ಉಪಶಮನಗಳನ್ನು ನೀಡಿದ್ದಾರೆ. ಅವರ ಸಲಹೆಗಳನ್ನು ಅನುಸರಿಸಿ ನಿಮ್ಮ ಕಿವಿಗಳನ್ನು ರಕ್ಷಿಸಿಕೊಳ್ಳಿ

ಚಳಿಗಾಲದಲ್ಲಿ ಕಿವಿ ನೋವು ಉಂಟಾಗಲು ಕಾರಣಗಳೇನು ?

ನಮ್ಮ ಕಿವಿಗಳ ಆಂತರಿಕ ರಚನೆಯು,ಮೆದುಳು ಮತ್ತು ಗಂಟಲಿಗೆ ಸಂಪರ್ಕಿಸುವ ಸೂಕ್ಷ್ಮವಾದ ಜೀವಕೋಶಗಳು, ನರ ತುದಿಗಳು ಮತ್ತು ರಕ್ತನಾಳಗಳಿಂದ ಮಾಡಲ್ಪಟ್ಟಿದೆ. ಈ ಪ್ರದೇಶವು ಹೊರಗಿನ ಪರಿಸರಕ್ಕೆ ಭಾಗಶಃ ತೆರೆದುಕೊಳ್ಳುತ್ತದೆ, ಆದ್ದರಿಂದ ಅವು ಶೀತ ಮತ್ತು ತಂಪಾದ ಗಾಳಿಯಿಂದ ಪ್ರಭಾವಿತವಾಗುತ್ತದೆ. ಇದು ಸಣ್ಣ ಕಿರಿಕಿರಿಯಿಂದ ಹಿಡಿದು ದೊಡ್ಡ ಸೋಂಕಿನ ತನಕ ಎಡೆಮಾಡಿ ಕೊಡಬಹುದು.

 ಚಳಿಗಾಲದಲ್ಲಿ ಉಂಟಾಗಬಹುದಾದ ಕಿವಿ ನೋವಿಗೆ ಕೆಲವು ಕಾರಣಗಳು

1. ಸೋಂಕು

ನೆಗಡಿ ಇರುವ ಕೆಲವರಿಗೆ ಕಿವಿನೋವು ಕೂಡ ಕಾಣಿಸಿಕೊಳ್ಳುತ್ತದೆ. ಕಿವಿಗೆ ಸಂಪರ್ಕಿಸುವ ಯುಸ್ಟಾಚಿಯನ್ ಟ್ಯೂಬ್, ಬ್ಯಾಕ್ಟೀರಿಯಾವನ್ನು ಗಂಟಲಿನಿಂದ ಮಧ್ಯದ ಕಿವಿಗೆ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ, ಇದು ಪ್ರಾಥಮಿಕವಾಗಿ ಹಂತಕ್ಕೆ ಕಾರಣ. ಈ ರೀತಿ ಆದಲ್ಲಿ ಅಥವಾ ಕಿವಿಯ ಸೋಂಕಿನಿಂದ ಮಧ್ಯಮ ಕಿವಿಯಲ್ಲಿ ದ್ರವದ ಶೇಖರಣೆ ಆದಲ್ಲಿ ತಕ್ಷಣದ ವೈದ್ಯರನ್ನು ಭೇಟಿ ಮಾಡಿ.

2. ಮೂಗು ಕಟ್ಟುವುದು

ಕೆಲವೊಮ್ಮೆ, ನಮ್ಮ ಗಂಟಲನ್ನು ಕಿವಿಗೆ ಸಂಪರ್ಕಿಸುವ ಯುಸ್ಟಾಚಿಯನ್ ಟ್ಯೂಬ್‌ನಲ್ಲಿ ಏನಾದರೂ ಕಟ್ಟಿ ಕೊಂಡಿದ್ದಲ್ಲಿ ನೋವನ್ನು ಉಂಟುಮಾಡುತ್ತದೆ ಮತ್ತು ಇದು ಚಳಿಗಾಲದಲ್ಲಿ ಕಂಡುಬರುತ್ತದೆ.

3. ನೆಗಡಿ ಮತ್ತು ಕೆಮ್ಮು ಪದೇ ಪದೇ ಉಂಟಾಗುವುದು

ನೀವು ಸೀನಿದಾಗ ಅಥವಾ ಕೆಮ್ಮಿದಾಗ ಕಿವಿಯ ಒಳಗಡೆ ಸಣ್ಣ ಒತ್ತಡವು ಭಾಸವಾಗಬಹುದು. ಒಂದೇ ಸಮ ಕಾಡುವ ಶೀತದಿಂದ ಕೂಡ ಆ ರೀತಿಯ ಒತ್ತಡವು ಕಿವಿಯ ನೋವು ಅಥವಾ ಕಿರಿಕಿರಿಯನ್ನು ಉಂಟುಮಾಡುತ್ತದೆ.

4. ಸೈನಸ್ ಯಾರಿಗೆ ಪದೇ ಪದೇ ಸೈನಸ್ ತೊಂದರೆ ಉಂಟಾಗುವುದೊ ಅವರಿಗೆ ಚಳಿಗಾಲದಲ್ಲಿ ಕಿವಿ ನೋವು ಉಂಟಾಗಬಹುದು. ಏಕೆಂದರೆ ಸೈನಸ್ ಸಮಸ್ಯೆಯಿಂದ ಬಳಲುವವರು ಸೀನುವುದು ಮತ್ತು ಕೆಮ್ಮುವುದನ್ನು ಪದೇಪದೇ ಮಾಡಿದಾಗ ಕಿವಿಯಲ್ಲಿ ಒತ್ತಡವು ಅಧಿಕವಾಗುತ್ತದೆ.

5. ಶೀತದ ಗಾಳಿ ಥಂಡಿ ಗಾಳಿಯಲ್ಲಿ ಓಡಾಡಿ ಬಂದಾಗ ನಿಮ್ಮ ಕಿವಿಗಳಲ್ಲಿ ನೋವು ಉಂಟಾಗಬಹುದು. ಏಕೆಂದರೆ ಕಿವಿಯ ಕಾಲುವೆಯ ನರಗಳು ಕೂಡ ಶೀತದ ಗಾಳಿಗೆ ಒಡ್ಡಲ್ಪಟ್ಟಿರುತ್ತವೆ. ಅದರ ಪರಿಣಾಮವಾಗಿ ಕಿವಿ ಮತ್ತು ಸುತ್ತಮುತ್ತಲಿನ ಜಾಗಗಳಲ್ಲಿ ಹೆಚ್ಚಾಗಿ ನೋವು ಕಾಣಿಸಿಕೊಳ್ಳುತ್ತದೆ.

6. ಈ ಟಿಪ್ಸ್ ಗಳಿಂದ ಚಳಿಗಾಲದಲ್ಲಿ ಉಂಟಾಗುವ ಕಿವಿ ನೋವುಗಳನ್ನು ತಡೆಗಟ್ಟಬಹುದು ಮೊಟ್ಟ ಮೊದಲು ಕಿವಿಗಳನ್ನು ಕ್ಲೀನ್ ಆಗಿ ಇಟ್ಟುಕೊಳ್ಳುವುದು ಅತ್ಯಗತ್ಯ, ಇಲ್ಲದಿದ್ದಲ್ಲಿ ಸೋಂಕುಗಳು ಹೆಚ್ಚಾಗುತ್ತದೆ ಎಂದು ಇ ಎನ್ ಟಿ ಡಾಕ್ಟರ್ ಗಳು ಸಲಹೆ ನೀಡುತ್ತಾರೆ. ಅಂತೆಯೇ ಈ ಕೆಳಗಿನ ಟಿಪ್ಸ್ ಗಳನ್ನು ಅನುಸರಿಸಿ :

ಚಳಿಗಾಲದಲ್ಲಿ ಕಿವಿ ನೋವು ಬರದಿರಲು ಈ ಟಿಪ್ಸ್‌ ಅನುಸರಿಸಿ:

1. ನಿಮ್ಮ ಕಿವಿಗಳನ್ನು ಮುಚ್ಚಿಟ್ಟುಕೊಳ್ಳಿ. ಥಂಡಿ ಗಾಳಿಗೆ ಅವುಗಳನ್ನು ತೆರೆದಿಡಬೇಡಿ.

2. ಸೈನಸ್ ತೊಂದರೆ ಇರುವವರು, ನೆಗಡಿ ಮತ್ತು ಕೆಮ್ಮಿನಿಂದ ಹೆಚ್ಚಾಗಿ ಬಳಲುವವರು ಸ್ವಲ್ಪ ಹೆಚ್ಚಾಗಿ ಮುತುವರ್ಜಿ ವಹಿಸಿ. ನೀವು ಅದಕ್ಕಾಗಿ ಬಳಸುವ ಔಷಧಿಗಳನ್ನು ಮಿಸ್ ಮಾಡಿಕೊಳ್ಳಬೇಡಿ.

3. ಕಿವಿಗಳನ್ನು ಕ್ಲೀನ್ ಮಾಡಲು ಹೇರ್ ಪಿನ್ ಗಳು ಅಥವಾ ಬೆಂಕಿಕಡ್ಡಿಗಳನ್ನು ಖಂಡಿತ ಬಳಸಬೇಡಿ. ಬೇಕೆನಿಸಿದಲ್ಲಿ ಇಯರ್ ಬಡ್ ಗಳಿಂದ ಮಾತ್ರ ಕ್ಲೀನ್ ಮಾಡಿ.

4. ಡಾಕ್ಟರ್ ಸಲಹೆ ಇಲ್ಲದೆ ಯಾವುದೇ ಡ್ರಾಪ್ ಗಳನ್ನು ಬಳಸಬೇಡಿ.

5. ಸಣ್ಣ ಕಿರಿಕಿರಿ ಅಥವಾ ತೊಂದರೆ ಉಂಟಾದರೂ ಆಲಕ್ಷಿಸದೆ ಈ ಇಎನ್ ಟಿ ತಜ್ಞರನ್ನು ಭೇಟಿ ಮಾಡಿ, ಇಲ್ಲದಿದ್ದಲ್ಲಿ ಸೋಂಕು ಹೆಚ್ಚಾಗಿ ಶ್ರವಣ ಸಾಮರ್ಥ್ಯದಲ್ಲಿ ತೊಂದರೆಗಳು ಉಂಟಾಗಬಹುದು.

7. ಚಳಿಗಾಲದಲ್ಲಿ ಕಿವಿ ನೋವು ಬರದಿರಲು ಈ ಟಿಪ್ಸ್‌ ಅನುಸರಿಸಿ:

6. ಈ ಮೇಲಿನ ಅಷ್ಟೂ ಅಂಶಗಳನ್ನು ಮಕ್ಕಳು ತಪ್ಪದೇ ಅನುಸರಿಸುವಂತೆ ಗಮನವಹಿಸಿ.

7. ಪೇನ್ ಕಿಲ್ಲರ್ ಗಳು,ಅಲರ್ಜಿ ಔಷಧಿಗಳು ಮತ್ತು ಆಂಟಿಬಯಾಟಿಗಳು ಪರಿಣಾಮಕಾರಿಯಾಗಿ ಸಹಾಯ ಮಾಡಬಹುದು. ಡಾಕ್ಟರ್ ಸಲಹೆಯ ಮೇರೆಗೆ ಮಾತ್ರ ಅನುಸರಿಸಿ.

8. ಶೀತ ವಾತಾವರಣದಿಂದ ಕಿವಿ ನೋವು ಉಂಟಾಗಿದ್ದಲ್ಲಿ ಬೆಚ್ಚಗಿನ ಬಟ್ಟೆಯನ್ನು ಇಟ್ಟುಕೊಳ್ಳುವುದರಿಂದ ಕೂಡ ಕಿವಿ ನೋವು ಕಡಿಮೆಯಾಗಬಹುದು.

9. ಕಿವಿಯಲ್ಲಿ ನೀರು ಸೇರಿದರು ಕೂಡ ಕಿವಿ ನೋವು ಬರುವ ಸಾಧ್ಯತೆಗಳಿರುವುದರಿಂದ ಕಿವಿಯನ್ನು ಸದಾ ಒಣಗಿರುವಂತೆ ಮತ್ತು ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ.

10. ಚಳಿಗಾಲದಲ್ಲಿ ಶೀತದ ಗಾಳಿಯಲ್ಲಿ ಓಡಾಡುವ ಸಂದರ್ಭಗಳಲ್ಲಿ ಟೋಪಿ, ಸ್ಕಾರ್ಫ್, ಹೆಡ್ ಬ್ಯಾಂಡ್ ಮುಂತಾದವುಗಳಿಂದ ಕಿವಿಗಳನ್ನು ಸಂರಕ್ಷಿಸಿ

 

Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries