ಬದಿಯಡ್ಕ: ಕೇಂದ್ರ ರಾಜ್ಯ ಸರ್ಕಾರಗಳ ಕೃಷಿ ವಿರೋಧಿ ನೀತಿಗೆ ಎದುರಾಗಿ ಬದಿಯಡ್ಕ ಮಂಡಲ ಕಾಂಗ್ರೆಸ್ ನೇತೃತ್ವದಲ್ಲಿ ಕೃಷಿ ಭವನ ಮಾರ್ಚ್ ಧರಣಿ ನಡೆಯಿತು.
ಡಿಸಿಸಿ ಪ್ರಧಾನ ಕಾರ್ಯದರ್ಶಿ ಕುಂಞಂಬು ನಾಯರ್ ಉದ್ಘಾಟಿಸಿದರು. ಬದಿಯಡ್ಕ ಮಂಡಲ ಅಧ್ಯಕ್ಷ ಎಂ ನಾರಾಯಣ ಮಣಿಯಾಣಿ ಅಧ್ಯಕ್ಷತೆ ವಹಿಸಿದರು. ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪಿ.ಜಿ. ಚಂದ್ರಹಾಸ ರೈ, ಕುಂಜಾರ್ ಮೊಹಮ್ಮದ್ ಹಾಜಿ, ಖಾದರ್ ಮಾನ್ಯ, ಶ್ಯಾಮ್ ಪ್ರಸಾದ್ ಮಾನ್ಯ, ಪಂಚಾಯತಿ ಉಪಾಧ್ಯಕ್ಷ ಅಬ್ಬಾಸ ಎಂ ಮೊದಲಾದವರು ಮಾತನಾಡಿದರು. ಸಿರಿಲ್ ಡಿಸೋಜ, ಐತಪ್ಪ ಪಟ್ಟಾಜೆ, ಚಂದ್ರಹಾಸ ಮಾಸ್ತರ್, ಪಂಚಾಯತಿ ಸದಸ್ಯರಾದ ಜಯಶ್ರೀ, ಅನಸೂಯಾ ಮಾನ್ಯ, ಅಬೂಬಕ್ಕರ್ , ಶ್ರೀನಾಥ, ಕೃಷ್ಣಕುಮಾರ್, ಬದಿಯಡ್ಕ, ಇಬ್ರಾಹಿಂ ಗೋಳಿಯಡ್ಕ ಮೊದಲಾದವರು ನೇತೃತ್ವ ನೀಡಿದರು.




.jpg)
.jpg)
