HEALTH TIPS

'ಭಾರತದ ಉಕ್ಕಿನ ಮನುಷ್ಯ' ಖ್ಯಾತಿಯ ಜಮ್ಶೆಡ್ ಜೆ ಇರಾನಿ ನಿಧನ

 

           ನವದೆಹಲಿ: ಸ್ಟೀಲ್ ಮ್ಯಾನ್ ಆಫ್ ಇಂಡಿಯಾ (ಭಾರತದ ಉಕ್ಕಿನ ಮನುಷ್ಯ) ಖ್ಯಾತಿಯ ಜಮ್ಶೆಡ್‌ ಜೆ ಇರಾನಿ ಅವರು ಸೋಮವಾರ ರಾತ್ರಿ ನಿಧನರಾದರು ಎಂದು ಟಾಟಾ ಸ್ಟೀಲ್‌ ತಿಳಿಸಿದೆ.

                     ಇರಾನಿ ಅವರಿಗೆ 86 ವರ್ಷ ವಯಸ್ಸಾಗಿತ್ತು. ಅವರ ನಿಧನ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಟಾಟಾ ಸ್ಟೀಲ್‌, 'ಭಾರತದ ಉಕ್ಕಿನ ಮನುಷ್ಯ ನಿಧನರಾಗಿದ್ದಾರೆ.

ಪದ್ಮಭೂಷಣ ಡಾ. ಜಮ್ಶೆಡ್ ಜೆ ಇರಾನಿ ಅವರ ನಿಧನದ ಸುದ್ದಿಯನ್ನು ಟಾಟಾ ಸ್ಟೀಲ್ ತೀವ್ರ ದುಃಖದೊಂದಿಗೆ ತಿಳಿಸುತ್ತಿದೆ' ಎಂದು ಹೇಳಿದೆ.

                    ಜೆಮ್ಶೆಡ್‌ಪುರದಲ್ಲಿರುವ ಟಾಟಾ ಆಸ್ಪತ್ರೆಯಲ್ಲಿ ಅಕ್ಟೋಬರ್‌ 31ರ ರಾತ್ರಿ 10ರ ವೇಳೆಗೆ ಇರಾನಿ ನಿಧನರಾದರು ಎಂದೂ ಉಲ್ಲೇಖಿಸಿದೆ.

              43 ವರ್ಷಗಳ ಕಾಲ ಕಂಪನಿಯ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದ ಇರಾನಿ ಅವರು, 2011ರ ಜೂನ್‌ನಲ್ಲಿ ಕಂಪನಿಯ ಮಂಡಳಿಯಿಂದ ನಿವೃತ್ತರಾಗಿದ್ದರು.

                ಅವರು ಜಿಜಿ ಇರಾನಿ ಮತ್ತು ಖೋರ್ಶೆಡ್‌ ಇರಾನಿ ದಂಪತಿಯ ಮಗನಾಗಿ 1936ರ ಜೂನ್‌ 2ರಂದು ನಾಗ್ಪುರದಲ್ಲಿ ಜನಿಸಿದ್ದರು. ನಾಗ್ಪುರದ ವಿಜ್ಞಾನ ಕಾಲೇಜಿನಲ್ಲಿ 1956ರಲ್ಲಿ ಬಿಎಸ್‌ಸಿ ಮತ್ತು ನಾಗ್ಪುರ ವಿಶ್ವವಿದ್ಯಾಲಯದಲ್ಲಿ 1958ರಲ್ಲಿ ಭೂವಿಜ್ಞಾನ ವಿಷಯದಲ್ಲಿ ಎಂಎಸ್‌ಸಿ ಪದವಿ ಪಡೆದಿದ್ದರು.

              ಬಳಿಕ ಜೆಎನ್ ಟಾಟಾ ವಿದ್ಯಾರ್ಥಿ ವೇತನ ಪಡೆದು ಇಂಗ್ಲೆಂಡ್‌ ತೆರಳಿ ಶೆಫಿಲ್ಡ್‌ ವಿಶ್ವವಿದ್ಯಾಲಯದಲ್ಲಿ ಲೋಹಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ (1960) ಮತ್ತು ಪಿಎಚ್‌ಡಿ (1963) ಪೂರ್ಣಗೊಳಿಸಿದ್ದರು.

            ಇಂಗ್ಲೆಂಡ್‌ನ ಶೆಫೀಲ್ಡ್‌ನಲ್ಲಿರುವ 'ಬ್ರಿಟಿಷ್ ಐರನ್ ಮತ್ತು ಸ್ಟೀಲ್ ರಿಸರ್ಚ್ ಅಸೋಸಿಯೇಷನ್‌'ಗೆ ಸೇರುವ ಮೂಲಕ 1963ರಲ್ಲಿ ವೃತ್ತಿ ಜೀವನ ಆರಂಭಿಸಿದರು. ಬಳಿಕ ಸಂಶೋಧನೆ ಮತ್ತು ಅಭಿವೃದ್ಧಿಯ ಉಸ್ತುವಾರಿ ನಿರ್ದೇಶಕರ ಸಹಾಯಕರಾಗಿ 'ಟಾಟಾ ಐರನ್ ಮತ್ತು ಸ್ಟೀಲ್ ಕಂಪನಿ'ಗೆ (ಈಗ ಟಾಟಾ ಸ್ಟೀಲ್) ಸೇರುವ ಮೂಲಕ 1968ರಲ್ಲಿ ಭಾರತಕ್ಕೆ ವಾಪಸ್ ಆದರು.

               1978ರಲ್ಲಿ ಜನರಲ್‌ ಸೂಪರಿಂಟೆಂಡೆಂಟ್‌, 1979ರಲ್ಲಿ ಪ್ರಧಾನ ವ್ಯವಸ್ಥಾಪಕರು ಮತ್ತು 1985ರಲ್ಲಿ ಟಾಟಾ ಸ್ಟೀಲ್‌ ಅಧ್ಯಕ್ಷ ಸ್ಥಾನಕ್ಕೇರಿದರು. 1988ರಲ್ಲಿ ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡರು. 1992ರಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕವಾಗಿ 2001ರಲ್ಲಿ ನಿವೃತ್ತರಾಗುವ ವರೆಗೆ ಕರ್ತವ್ಯ ನಿರ್ವಹಿಸಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries