HEALTH TIPS

ಭಾರತೀಯ ಏರೋಸ್ಪೇಸ್ ಉದ್ಯಮವು ಸ್ವಾವಲಂಬಿ ಆತ್ಮ ನಿರ್ಭರ್ ಭಾರತವಾಗಿ ಬೆಳೆಯುತ್ತಿದೆ: ವಾಯುಪಡೆ ಮುಖ್ಯಸ್ಥ

 

                ಬೆಂಗಳೂರು: ಭಾರತೀಯ ಏರೋಸ್ಪೇಸ್ ಉದ್ಯಮವು ಸ್ವಾವಲಂಬಿಯಾಗುತ್ತಿದ್ದು, 'ಆತ್ಮ ನಿರ್ಭರ್ ಭಾರತ್​' ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿದೆ. ಸುಧಾರಿತ ತಂತ್ರಜ್ಞಾನಗಳ ಸಮಗ್ರ ಸಂಯೋಜನೆ, ದೇಶೀಯ ಉತ್ಪಾದನೆಗೆ ಉತ್ತೇಜನ, ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಹೆಚ್ಚಿಸುವುದು ಮತ್ತು ರಕ್ಷಣಾ ವಲಯದಲ್ಲಿ ಒಟ್ಟಾರೆ ಸ್ಥಳೀಯ ಘಟಕ ಹೆಚ್ಚಿಸುವ ಗುರಿಯನ್ನು ಹೊಂದಿದ್ದು, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಅಭಿಯಾನ 'ಸ್ವಾವಲಂವಿ ಭಾರತ' ಅಭೂತಪೂರ್ವ ಯಶಸ್ವಿ ಕಾಣುತ್ತಿದೆ ಎಂದು ವಾಯುಪಡೆ ಮುಖ್ಯಸ್ಥ ವಿ.ಆರ್​. ಚೌಧರಿ ಹೇಳಿದರು.


                   ಭಾರತೀಯ ವಾಯುಪಡೆಯ ವಿಶಿಷ್ಟ ಮತ್ತು ಪ್ರಧಾನ ಘಟಕವಾದ 'ಏರ್‌ಕ್ರಾಫ್ಟ್ ಸಿಸ್ಟಮ್ಸ್ ಆಯಂಡ್ ಟೆಸ್ಟಿಂಗ್ ಎಸ್ಟಾಬ್ಲಿಷ್‌ಮೆಂಟ್(ASTE)ನ ಸುವರ್ಣ ಮಹೋತ್ಸವದ ಹಿನ್ನೆಲೆ ಇಂದು(ಶುಕ್ರವಾರ) ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ 'ಅಂತಾರಾಷ್ಟ್ರೀಯ ವಿಮಾನ ಪರೀಕ್ಷಾ ವಿಚಾರ ಸಂಕಿರಣ'ದಲ್ಲಿ ಮಾತನಾಡಿದ ವಾಯುಪಡೆ ಮುಖ್ಯಸ್ಥರು, ಭಾರತೀಯ ಏರೋಸ್ಪೇಸ್ ಉದ್ಯಮದಲ್ಲಿ ಆತ್ಮ ನಿರ್ಭರ್ ಭಾರತ್​ ಕುರಿತು ಪ್ರಸ್ತಾಪಿಸಿದರು. ಫ್ಲೈಟ್ ಟೆಸ್ಟ್ ಸಿಬ್ಬಂದಿ, ರಕ್ಷಣಾ ಸಂಶೋಧನೆ ಮತ್ತು ಉತ್ಪಾದನಾ ಏಜೆನ್ಸಿಗಳು, ಶೈಕ್ಷಣಿಕ ಸಂಸ್ಥೆಗಳಿಗೆ ಪ್ರಖ್ಯಾತ ವಿದ್ವಾಂಸರು, ವಿಮಾನ ಪರೀಕ್ಷೆಯಲ್ಲಿ ತೊಡಗಿರುವ ಅಂತರಾಷ್ಟ್ರೀಯ ಏಜೆನ್ಸಿಗಳ ಪ್ರತಿನಿಧಿಗಳು ಈ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು.

           ಭಾರತೀಯ ವಾಯುಪಡೆಯ ಸಾಮರ್ಥ್ಯ ವರ್ಧನೆಗಾಗಿ ವಿಮಾನಗಳ ಅಭಿವೃದ್ಧಿ, ಶಸ್ತ್ರಾಸ್ತ್ರ, ಅಪ್‌ಗ್ರೇಡ್ ಕಾರ್ಯಕ್ರಮಗಳಲ್ಲಿ ಹಳೇ ವಿದ್ಯಾರ್ಥಿಗಳು ನೀಡಿದ ಅಪಾರ ಕೊಡುಗೆಯನ್ನು ಶ್ಲಾಘಿಸಿದರು. LCA ತೇಜಸ್, ALH ಧ್ರುವ್ ಮತ್ತು LCH ಪ್ರಚಂದ್‌ ನಂತಹ ಯಶಸ್ವಿ ಶಸ್ತ್ರವೇದಿಕೆಗಳ ವಿನ್ಯಾಸ, ಅಭಿವೃದ್ಧಿ ಮತ್ತು ಕಾರ್ಯಾಚರಣೆಯಲ್ಲಿ ಭಾರತೀಯ ವಿಮಾನ ಪರೀಕ್ಷಾ ಭ್ರಾತೃತ್ವದ ಪ್ರಯತ್ನಗಳು ಹಾಗೂ ಭಾರತೀಯ ರಕ್ಷಣಾ ಏರ್ ಸ್ಪೇಸ್ ಇಕೋ ಸಿಸ್ಟಮ್, ಮಿಲಿಟರಿ ವಾಯುಯಾನ ಕ್ಷೇತ್ರದಲ್ಲಿ ಸ್ವಾವಲಂಬನೆಯ ಅಗತ್ಯತೆ ಹಾಗೂ ASTE ನ ಪ್ರಾಮುಖ್ಯತೆ ಬಗ್ಗೆಯೂ ತಿಳಿಸಿದರು. ಹಿಂದಿನ ಅನುಭವಗಳಿಂದ ಪಾಠ ಕಲಿಯುತ್ತಾ ರಚನಾತ್ಮಕವಾಗಿ ದಕ್ಷತೆ ಹೆಚ್ಚಿಸುವ ಅಗತ್ಯತೆ ಬಗ್ಗೆಯೂ ಕಿವಿಮಾತು ಹೇಳಿದರು.

          'ನಿಖರತೆ ಮತ್ತು ಉತ್ಕೃಷ್ಟತೆ' ಎಂಬ ಧ್ಯೇಯವಾಕ್ಯಕ್ಕೆ ಅನುಗುಣವಾಗಿ ASTE ಕಾರ್ಯ ನಿರ್ವಹಿಸುತ್ತಿದೆ. ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ LCA ತೇಜಸ್, ALH ಧ್ರುವ ಮತ್ತು LCH ಪ್ರಚಂದ್ ಸೇರಿದಂತೆ ಹಲವು ಯುದ್ಧ ವಿಮಾನಗಳು ಹಾರಾಟ ಪರೀಕ್ಷೆ ಮತ್ತು ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿವೆ. ಭಾರತೀಯ ಈ ಮಹತ್ವದ ವರ್ಷದಲ್ಲಿ ವಿವಿಧ ಸ್ಮರಣಾರ್ಥ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಳೆದ ಐದು ದಶಕಗಳಲ್ಲಿ ASTE ಸಕ್ರಿಯವಾಗಿ ಕೊಡುಗೆ ನೀಡಿದೆ ಎಂದು ವಾಯುಪಡೆ ಮುಖ್ಯಸ್ಥರು ಶ್ಲಾಘಿಸಿದರು.

                ಈ ವಿಶೇಷ ಸಂದರ್ಭದ ಸ್ಮರಣಾರ್ಥವಾಗಿ ಭಾರತೀಯ ಅಂಚೆ 'ವಿಶೇಷ ಕವರ್' ಅನ್ನು ವಾಯುಪಡೆಯ ಮುಖ್ಯಸ್ಥರು ಬಿಡುಗಡೆ ಮಾಡಿದರು. ASTE ಏರ್ ಮಾರ್ಷಲ್ ಬಿ.ಆರ್.ಕೃಷ್ಣ, ಡಿಸಿಎಎಸ್ ಏರ್ ಮಾರ್ಷಲ್ ಎನ್. ತಿವಾರಿ, ಎಎಸ್‌ಟಿಇ ಎವಿಎಂ ಕಮಾಂಡೆಂಟ್ ಜೆ.ಮಿಶ್ರಾ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries