ಕೇರಳ ಪೋಲೀಸರಲ್ಲಿ ನಂಬಿಕೆ ಇದೆ: ತನಿಖೆಯನ್ನು ತಮಿಳುನಾಡು ಪೋಲೀಸರಿಗೆ ಹಸ್ತಾಂತರಿಸದಂತೆ ಮನವಿ
0
ನವೆಂಬರ್ 03, 2022
ತಿರುವನಂತಪುರ: ಪಾರಶಾಲ ಶರೋನ್ ಹತ್ಯೆ ಪ್ರಕರಣವನ್ನು ತಮಿಳುನಾಡು ಪೋಲೀಸರಿಗೆ ಹಸ್ತಾಂತರಿಸದಂತೆ ಕುಟುಂಬಸ್ಥರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.
ಪೋಷಕರು ನೇರವಾಗಿ ಸೆಕ್ರೆಟರಿಯೇಟ್‍ನಲ್ಲಿರುವ ಮುಖ್ಯಮಂತ್ರಿ ಕಚೇರಿಗೆ ತೆರಳಿ ದೂರು ನೀಡಿದರು. ಕೇರಳ ಪೋಲೀಸರು ಪ್ರಕರಣದ ತನಿಖೆ ನಡೆಸಬೇಕೆಂದು ಶರೋನ್ ಕುಟುಂಬ ವಿನಂತಿಸಿದೆ. ಕೇರಳ ಪೋಲೀಸರ ಮೇಲೆ ನಮÀಗೆ ನಂಬಿಕೆಯಿದೆ ಮತ್ತು ಪ್ರಸ್ತುತ ತನಿಖೆಯಿಂದ ತೃಪ್ತನಾಗಿದ್ದೇನೆ ಎಂದು ಶರೋನ್ ತಂದೆ ಹೇಳಿದ್ದಾರೆ. ಪ್ರಕರಣವನ್ನು ತಮಿಳುನಾಡಿಗೆ ವರ್ಗಾಯಿಸುವುದಿಲ್ಲ ಎಂದು ಮುಖ್ಯಮಂತ್ರಿ ಕಚೇರಿಯಿಂದ ಭರವಸೆ ಸಿಕ್ಕಿದೆ ಎಂದು ಕುಟುಂಬದವರು ಹೇಳಿದ್ದಾರೆ.
ಪ್ರಕರಣವನ್ನು ತಮಿಳುನಾಡು ಪೋಲೀಸರಿಗೆ ಹಸ್ತಾಂತರಿಸುವಂತೆ ತನಿಖಾ ತಂಡ ಕಾನೂನು ಸಲಹೆ ಪಡೆದಿದೆ ಎಂದು ಈ ಹಿಂದೆ ವರದಿಯಾಗಿತ್ತು. ಆರೋಪಿ ಗ್ರೀಷ್ಮಾ ಅವರ ಮನೆ ತಮಿಳುನಾಡಿನ ಗಡಿ ಭಾಗದಲ್ಲಿರುವುದರಿಂದ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಗೊಂದಲ ಉಂಟಾಗಿತ್ತು. ಇದಾದ ಬಳಿಕ ಗ್ರಾಮಾಂತರ ಎಸ್ಪಿ ಕಾನೂನು ಸಲಹೆ ಕೇಳಿದ್ದರು.
ತಮಿಳುನಾಡು ಠಾಣಾ ವ್ಯಾಪ್ತಿಯಲ್ಲಿ ಕೊಲೆಗೆ ಯೋಜನೆ ರೂಪಿಸಿ ವಿಷ ಖರೀದಿಸಲಾಗಿತ್ತು. ಹಾಗಾಗಿ ವಿಚಾರಣೆ ವೇಳೆ ಅಥವಾ ಇನ್ಯಾವುದೋ ಪ್ರಕರಣದ ಆರೋಪಿಗಳು ಕೇರಳ ಪೋಲೀಸರ ತನಿಖಾ ವ್ಯಾಪ್ತಿಯನ್ನು ಪ್ರಶ್ನಿಸುವ ಸಾಧ್ಯತೆ ಇದೆ. ಇದನ್ನು ತಪ್ಪಿಸಲು ತಮಿಳುನಾಡು ಪೋಲೀಸರಿಗೆ ಪ್ರಕರಣವನ್ನು ಹಸ್ತಾಂತರಿಸುವುದು ಉತ್ತಮ ಎನ್ನಲಾಗಿದೆ.
Tags





