ತಿರುವನಂತಪುರ: ಇರುಮುಡಿ ಕಟ್ಟುಗಳಲ್ಲಿ ತೆಂಗಿನಕಾಯಿಯೊಂದಿಗೆ ವಿಮಾನದಲ್ಲಿ ಪ್ರಯಾಣಿಸುವುದಕ್ಕೆ ಇದ್ದ ನಿಷೇಧವನ್ನು ತೆರವುಗೊಳಿಸಲಾಗಿದೆ.
ಈ ಸಂಬಂಧ ನಾಗರಿಕ ವಿಮಾನಯಾನ ಖಾತೆ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಶಬರಿಮಲೆಯಲ್ಲಿ ಮಂಡಲ- ಮಕರ ಬೆಳಕು ತೀರ್ಥಯಾತ್ರೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮಕರ ಬೆಳಕು ಉತ್ಸವದ ವರೆಗೆ ವಿನಾಯಿತಿ ನೀಡಲಾಗಿದೆ.
ಈ ವರೆಗೆ ಇರುಮುಡಿ ಕಟ್ಟುಗಳಲ್ಲಿ ತೆಂಗಿನಕಾಯಿಯೊಂದಿಗೆ ವಿಮಾನ ಹತ್ತಲು ಅನುಮತಿ ಇರಲಿಲ್ಲ. ಸುರಕ್ಷತೆಯ ಕಾರಣದಿಂದ ಕ್ಯಾಬಿನ್‍ನಲ್ಲಿ ತೆಂಗಿನಕಾಯಿಯನ್ನು ಅನುಮತಿಸಲಾಗಿಲ್ಲ. ಆದರೆ ಯಾತ್ರಾರ್ಥಿಗಳಿಗೆ ಆಗುವ ಅನಾನುಕೂಲವನ್ನು ಪರಿಗಣಿಸಿ ನಿರ್ಬಂಧವನ್ನು ಸಡಿಲಿಸಲಾಗಿದೆ. ಇದೇ ವೇಳೆ ವಿಸ್ತೃತ ತಪಾಸಣೆ ನಡೆಸಿ ಇರುಮುಡಿ ಕಟ್ಟಿನಲ್ಲಿ ತೆಂಗಿನಕಾಯಿಯೊಂದಿಗೆ ವಿಮಾನಯಾನದ ಮೂಲಕ ಪ್ರಯಾಣಿಸಲು ಅನುಮತಿ ನೀಡಲಾಗುವುದು ಎಂದು ನಾಗರಿಕ ವಿಮಾನಯಾನ ನಿರ್ದೇಶಕರು ತಿಳಿಸಿದ್ದಾರೆ.
ಇರುಮುಡಿ- ತೆಂಗಿನಕಾಯಿಯೊಂದಿಗೆ ವಿಮಾನದಲ್ಲಿ ಇನ್ನು ಪ್ರಯಾಣಿಸಬಹುದು: ಮಕರ ಬೆಳಕಿನವರೆಗೆ ಮಾತ್ರ ರಿಯಾಯಿತಿ; ಅಯ್ಯಪ್ಪ ಭಕ್ತರಿಗೆ ಅನುಕೂಲಕರ ಆದೇಶ
0
ನವೆಂಬರ್ 22, 2022
Tags





