ತಿರುವನಂತಪುರ: ರಾಜ್ಯಪಾಲರು ಆರ್.ಎಸ್.ಎಸ್ ನಿರ್ದೇಶನ ಅನುಸಾರ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಆರೋಪಕ್ಕೆ ಪುರಾವೆ ನೀಡುವಂತೆ ಸಿಎಂಗೆ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಹೇಳಿದ್ದಾರೆ.
ಕಣ್ಣೂರು ವಿ.ಸಿ. ನೇಮಕದಲ್ಲಿ ಮುಖ್ಯಮಂತ್ರಿ ಮಧ್ಯಪ್ರವೇಶಿಸಿದಾಗ ತಾನು ಆ ಬಗ್ಗೆ ಗಮನಿಸಿದೆ. ತನಗೆ ಆರ್‍ಎಸ್‍ಎಸ್ ಸಂಪರ್ಕವಿದ್ದರೆ ಅದನ್ನು ಸಾಬೀತುಪಡಿಸಲಿ ಎಂದು ರಾಜ್ಯಪಾಲರು ಸವಾಲು ಹಾಕಿದ್ದಾರೆ. ಆರೆಸ್ಸೆಸ್ ಹಸ್ತಕ್ಷೇಪ ಸಾಬೀತಾದರೆ ಆ ಕ್ಷಣವೇ ಹುದ್ದೆಗೆ ರಾಜೀನಾಮೆ ನೀಡುತ್ತೇನೆ. ಇಲ್ಲದೇ ಹೋದರೆ ಮುಖ್ಯಮಂತ್ರಿ ರಾಜೀನಾಮೆಗೆ ಸಿದ್ಧರಿರುವರೇ? ಎಂದು ರಾಜ್ಯಪಾಲರು ಪ್ರಶ್ನಿಸಿದರು. ರಾಜ್ಯದಲ್ಲಿ ಸಮಾನಾಂತರ ಆಡಳಿತ ನಡೆಸಲು ಯತ್ನಿಸುತ್ತಿದ್ದಾರೆ ಎಂಬ ಮುಖ್ಯಮಂತ್ರಿಯವರ ಟೀಕೆಗೆ ಪ್ರತಿಕ್ರಿಯೆಯಾಗಿ ಈ ಹೇಳಿಕೆ ನೀಡಿದ್ದಾರೆ.
ಇಲ್ಲಿ, ವಿಶ್ವವಿದ್ಯಾನಿಲಯಗಳು ಸೇರಿದಂತೆ, ರಾಜ್ಯಪಾಲರ ಹಕ್ಕುಗಳನ್ನು ತಳ್ಳಲಾಗುತ್ತಿದೆ. ಮುಖ್ಯಮಂತ್ರಿಗಳ ಕಚೇರಿಯಲ್ಲಿರುವವರು ಕಳ್ಳಸಾಗಾಣಿಕೆಯಲ್ಲಿ ತೊಡಗಿದ್ದರೆ ಮುಖ್ಯಮಂತ್ರಿಯೂ ಅದರಲ್ಲಿ ಭಾಗಿಯೆಂಬುದು ನಿರ್ವಿವಾದ. ಅನರ್ಹರನ್ನು ನೇಮಿಸಲು ಮುಂದಾದರೂ ಅದಕ್ಕೆ ಅಡ್ಡಿಯಾದೆ. ರಾಜಭವನ ಯಾವ ಅಕ್ರಮ ನೇಮಕಾತಿ ಮಾಡಿದೆ? ಆರ್‍ಎಸ್‍ಎಸ್ ನಾಮನಿರ್ದೇಶಿತ ವ್ಯಕ್ತಿಯನ್ನು ರಾಜಭವನದಲ್ಲಿ ನೇಮಿಸಿಲ್ಲ. ಅನಾವಶ್ಯಕವಾಗಿ ಒಂದು ಬಾರಿಯಾದರೂ ನೇಮಕ ಮಾಡಿರುವುದು ಸಾಬೀತಾದರೆ ರಾಜೀನಾಮೆ ನೀಡುತ್ತೇನೆ ಎಂದು ಸವಾಲೆಸೆದಿರುವರು.
ರಾಜ್ಯಪಾಲರು ಸಚಿವ ಬಾಲಗೋಪಾಲ್ ಅವರನ್ನು ಮತ್ತೊಮ್ಮೆ ಟೀಕಿಸಿದರು. ಸಚಿವರು ರಾಷ್ಟ್ರೀಯ ಏಕತೆಗೆ ಸವಾಲು ಹಾಕಲು ಪ್ರಯತ್ನಿಸಿದರು. ಆದರೆ ಸಚಿವರನ್ನು ವಜಾ ಮಾಡಿ ಎಂದು ಹೇಳಿಲ್ಲ ಎಂದರು. ಮಾಧ್ಯಮದವರು ನನ್ನಲ್ಲಿ ಪ್ರಶ್ನೆಗಳನ್ನು ಕೇಳಲು ನಾನು ಉತ್ಸುಕನಾಗಿದ್ದೇನೆ. ಮುಖ್ಯಮಂತ್ರಿಯಿಂದ ಯಾರೂ ಏನನ್ನೂ ಕೇಳುವುದಿಲ್ಲ. ಮುಖ್ಯಮಂತ್ರಿಗಳ ಮುಂದೆ ಮಾಧ್ಯಮಗಳು ಮೌನವಹಿಸುತ್ತಿವೆ. ವಿಸಿಗಳ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಉತ್ತರ ನೀಡಲು ಇದೇ ತಿಂಗಳ 7ರವರೆಗೆ ಕಾಲಾವಕಾಶ ನೀಡಿರುವುದಾಗಿ ರಾಜ್ಯಪಾಲರು ತಿಳಿಸಿದ್ದಾರೆ.
ಆರ್ ಎಸ್ ಎಸ್ ಹಸ್ತಕ್ಷೇಪ ಸಾಬೀತಾದರೆ ರಾಜೀನಾಮೆ ನೀಡುವೆ: ರಾಜ್ಯಪಾಲರಿಂದ ಮುಖ್ಯಮಂತ್ರಿಗೆ ಸವಾಲು
0
ನವೆಂಬರ್ 03, 2022





