HEALTH TIPS

ಮೊರ್ಬಿ ದುರ್ಘಟನೆಯನ್ನು 'ಆಯಕ್ಟ್​ ಆಫ್​ ಗಾಡ್​' ಎಂದು ಕರೆದ ಒವೆರಾ ಕಂಪೆನಿ ಮ್ಯಾನೇಜರ್​!

 

               ಮೊರ್ಬಿ: ಗುಜರಾತ್​ನ ಮೊರ್ಬಿಯಲ್ಲಿ ನಡೆದ ಸೇತವೆ ಕುಸಿತದ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ.

               ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯ ಪ್ರಕಾರ ಸೇತುವೆಗೆ ಕಟ್ಟಲಾಗಿದ್ದ ಕೇಬಲ್​ಗಳು ತುಕ್ಕು ಹಿಡಿದಿದ್ದು ನೆಲದ ಹಾಸನ್ನು ಮಾತ್ರವೇ ಬದಲಿಸಲಾಗಿತ್ತು.

                    ಅಗತ್ಯವಿದ್ದಲ್ಲಿ ಗ್ರೀಸಿಂಗ್​ ಕೂಡ ಮಾಡಿರಲಿಲ್ಲ ಎಂದು ಬೆಳಕಿಗೆ ಬಂದಿದೆ. ಸೇತುವೆ ಕಾಮಗಾರಿಯ ಗುತ್ತಿಗೆಯನ್ನು ಒವೆರಾ ಕಂಪನಿ ಗಿಟ್ಟಿಸಿಕೊಂಡಿತ್ತು.

                    'ಒವೆರಾ ಕಂಪೆನಿಯ ಬಂಧಿತ ಮ್ಯಾನೇಜರ್, ಈ ದುರ್ಘಟನೆಯನ್ನು 'ಆಯಕ್ಟ್​ ಆಫ್​ ಗಾಡ್​' ಎಂದು ಕರೆದಿದ್ದಾರೆ' ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚುವರಿ ಸರ್ಕಾರಿ ಅಭಿಯೋಜಕರು ಈ ಮಾಹಿತಿಯನ್ನು ನೀಡಿದ್ದಾರೆ. ಒವೆರಾ ಕಂಪನಿಯ ಇಬ್ಬರು ಮ್ಯಾನೇಜರ್​ರನ್ನು ಬಂಧಿಸಲಾಗಿತ್ತು. ಅವರಲ್ಲಿ ಒಬ್ಬರು ಈ ಹೇಳಿಕೆಯನ್ನು ನೀಡಿದ್ದಾರೆ.

                ಪೊಲೀಸ್ ಕಸ್ಟಡಿಗೆ ಕಳುಹಿಸಲಾದ ಆರೋಪಿಗಳ ವಿವರವನ್ನು ಕೇಳಿದಾಗ ವಕೀಲ ಪಾಂಚಾಲ್, 'ಬಂಧಿತರಲ್ಲಿ ಇಬ್ಬರು ಒರೆವಾ ಕಂಪನಿಯಲ್ಲಿ ಮ್ಯಾನೇಜರ್‌ಗಳು. ಇನ್ನಿಬ್ಬರು ಸೇತುವೆಯ ಫ್ಯಾಬ್ರಿಕೇಶನ್ ಕೆಲಸ ಮಾಡಿದವರು. ಉಳಿದ ಐವರು ಟಿಕೆಟ್ ಮಾರಾಟಗಾರರು ಮತ್ತು ಭದ್ರತಾ ಸಿಬ್ಬಂದಿಗಳಾಗಿದ್ದರು' ಎಂದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries