ತಿರುವನಂತಪುರಂ: ಬಂದರು ಯೋಜನೆ ಹೆಸರಿನಲ್ಲಿ ವಿಝಿಂಜಂನಲ್ಲಿ ನಡೆದ ಗಲಭೆಯ ಹಿಂದೆ ನಿಷೇಧಿತ ಧಾರ್ಮಿಕ ಭಯೋತ್ಪಾದಕ ಸಂಘಟನೆ ಪಾಪ್ಯುಲರ್ ಫ್ರಂಟ್ ಕೈವಾಡವಿದೆ ಎಂದು ತಿಳಿದುಬಂದಿದೆ.
ಪ್ರತಿಭಟನಾಕಾರರ ನಡುವೆ ಪಾಪ್ಯುಲರ್ ಫ್ರಂಟ್ ನುಸುಳಿದೆ ಎಂದು ಗುಪ್ತಚರರು ಸೂಚಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಗುಪ್ತಚರ ಇಲಾಖೆ ವರದಿ ಹಸ್ತಾಂತರಿಸಿದೆ.
ಪಾಪ್ಯುಲರ್ ಫ್ರಂಟ್ ನ ಪರಿಸರ ಸಂಘಟನೆಯಾದ ಗ್ರೀನ್ ಮೂವ್ ಮೆಂಟ್ ನ ಸದಸ್ಯರು ಪ್ರತಿಭಟನಾಕಾರರ ಮಧ್ಯೆ ನುಸುಳಿರುವರು. ಹಿಂಸಾಚಾರವನ್ನು ಮುನ್ನಡೆಸುವವರು ಅವರೇ. ಇವುಗಳಲ್ಲದೆ ಕೆಲವು ತೀವ್ರಗಾಮಿ ಎಡಪಂಥೀಯ ಸಂಘಟನೆಗಳು(ನಕ್ಸಲ್) ಮತ್ತು ಇಸ್ಲಾಮಿಕ್ ಸಂಘಟನೆಗಳು ಪ್ರತಿಭಟನಾಕಾರರ ನಡುವೆ ನುಸುಳಿವೆ. ವಿದೇಶಿ ಸಂಪರ್ಕ ಹೊಂದಿರುವ ಪಾದ್ರಿಗಳ ನೇತೃತ್ವದಲ್ಲಿ ಗಲಭೆಗೆ ಯೋಜನೆ ರೂಪಿಸಲಾಗುತ್ತಿದೆ ಎಂದೂ ವರದಿ ತಿಳಿಸಿದೆ.
ಯೋಜಿತ ಕಾರ್ಯಾಚರಣೆಯ ಭಾಗವಾಗಿ ಪೋಲೀಸರ ಮೇಲೆ ದಾಳಿ ನಡೆಸಲಾಗಿದೆ. ಬಂದರು ನಿರ್ಮಾಣಕ್ಕೆ ಅಡ್ಡಿಪಡಿಸಲು ರಾಜ್ಯದ ವಿವಿಧೆಡೆಯಿಂದ ಜನರನ್ನು ಸಂಘಟಿಸಿ ದೊಡ್ಡ ಗಲಭೆ ಸೃಷ್ಟಿಸುವ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗಾಗಿ ಭದ್ರತೆಗಾಗಿ ವಿಶೇಷ ಪೋಲೀಸ್ ಪಡೆ ರಚನೆ ಮಾಡುವಂತೆ ಸೂಚನೆ ನೀಡಲಾಗಿದೆ.
ಪ್ರತಿಭಟನಾಕಾರರೊಳಗೆ ನುಸುಳಿದ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರ ಬಗ್ಗೆ ಗುಪ್ತಚರರು ಮಾಹಿತಿ ಸಂಗ್ರಹಿಸಿದ್ದಾರೆ. ಅವರ ಹಣಕಾಸಿನ ವಹಿವಾಟಿನ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಪ್ರತಿಭಟನಾಕಾರರನ್ನು ಬೆಂಬಲಿಸುವ ಸ್ವಯಂಸೇವಾ ಸಂಸ್ಥೆಗಳಿಗೆ ವಿದೇಶದಿಂದ ಹಣ ಬರುತ್ತಿದೆ ಎಂದು ವರದಿಯಾಗಿದೆ.
ವಿಳಿಂಜಂ ಗಲಭೆ ಹಿಂದೆ ಪಾಪ್ಯುಲರ್ ಫ್ರಂಟ್: ಗುಪ್ತಚರ ಇಲಾಖೆ: ಗುರಿ ಬಂಡಾಯ
0
ನವೆಂಬರ್ 30, 2022
Tags





