HEALTH TIPS

ಪೌಷ್ಟಿಕಾಂಶದ ಸೂಪರ್ ಮಾರ್ಕೆಟ್ ಬೆಂಡೆ: ಮೊಡವೆಯಿಂದ ಮಧುಮೇಹದವರೆಗೆ, ದೃಷ್ಟಿ ಮತ್ತು ಫಲವತ್ತತೆ ವರೆಗೂ ಬಹೂಪಯೋಗಿ


        ಬೆಂಡೆಕಾಯಿ ನಮ್ಮ ಕರಾವಳಿಯ ವಾತಾವರಣದಲ್ಲಿ ಚೆನ್ನಾಗಿ ಬೆಳೆಯುವ ತರಕಾರಿಯಾಗಿದೆ. ಆದರೂ ಇತ್ತೀಚೆಗೆ ಜನರಿಗೆ ಹೆಚ್ಚು ಆಸಕ್ತಿಯಿಲ್ಲದ ತರಕಾರಿಯೂ ಹೌದು. ನಾಟಿ ಸಮಯ ಫೆಬ್ರವರಿ-ಮಾರ್ಚ್, ಜೂನ್-ಜುಲೈ ಮತ್ತು ಅಕ್ಟೋಬರ್-ನವೆಂಬರ್.
          ಇದರ ವಿಶೇಷತೆ ಎಂದರೆ ನಿತ್ಯ ಇಳುವರಿ ಕೊಡುವ ತರಕಾರಿ ಮಾತ್ರವಲ್ಲ ಪೆÇೀಷಕಾಂಶಗಳ ಆಗರವಾಗಿರುವ ಬೆಂಡೆಕಾಯಿ ಹಲವು ರೋಗಗಳಿಗೆ ನಿರೋಧಕವಾಗಿದೆ.
        ಬೆಂಡೆಕಾಯಿಯ ಪ್ರಯೋಜನಗಳೇನು ಎಂಬುದನ್ನು ನೋಡೋಣ.:
   ಬೆಂಡೆಕಾಯಿ ಖನಿಜಗಳು, ವಿಟಮಿನ್ ಎ ಮತ್ತು ಆಂಟಿಆಕ್ಸಿಡೆಂಟ್‍ಗಳಾದ ಬೀಟಾ ಕ್ಯಾರೋಟಿನ್ ಮತ್ತು ಲುಟೀನ್ ಅನ್ನು ಹೊಂದಿರುತ್ತದೆ. ಇದನ್ನು ಸೇವಿಸುವುದರಿಂದ ದೃಷ್ಟಿ ನಷ್ಟ, ಕಣ್ಣಿನ ಪೊರೆ ಮತ್ತು ರೆಟಿನಾದ ಹಾನಿಯನ್ನು ತಡೆಯಲು ಸಹಾಯ ಮಾಡುತ್ತದೆ.ವಿಟಮಿನ್ ಎ ಮತ್ತು ಉತ್ಕರ್ಷಣ ನಿರೋಧಕಗಳು ಚರ್ಮದ ಆರೋಗ್ಯಕ್ಕೆ ಪರಿಣಾಮಕಾರಿ. ಮೊಡವೆ, ಕಲೆಗಳು ಮತ್ತು ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ತಲೆಹೊಟ್ಟು, ಶುಷ್ಕತೆ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.
          ಬೆಂಡೆ ಜೀರ್ಣಾಂಗ ವ್ಯವಸ್ಥೆಗೆ ಅಚ್ಚುಮೆಚ್ಚಿನವಾಗಿದೆ ಏಕೆಂದರೆ ಇದು ಆಹಾರದಲ್ಲಿ ಫೈಬರ್ ಅಂಶವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಕರುಳಿನ ಚಲನೆಯನ್ನು ಸಾಮಾನ್ಯಗೊಳಿಸುತ್ತದೆ ಮತ್ತು ಹೊಟ್ಟೆಯ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಪೆÇಟ್ಯಾಸಿಯಂ ಸಮೃದ್ಧವಾಗಿದೆ. ಪೆÇಟ್ಯಾಸಿಯಮ್ ದೇಹದಲ್ಲಿನ ನೀರಿನ ಪ್ರಮಾಣವನ್ನು ನಿಯಂತ್ರಿಸುತ್ತದೆ. ಪೆÇಟ್ಯಾಸಿಯಮ್ ರಕ್ತನಾಳಗಳು ಮತ್ತು ಅಪಧಮನಿಗಳನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುವ ಮೂಲಕ ಹೃದಯಕ್ಕೆ ವಿಶ್ರಾಂತಿ ನೀಡುತ್ತದೆ.
           ಪ್ರತಿದಿನ ಬೆಳಿಗ್ಗೆ ಬಲಿಯದ ಬೆಂಡೆ ಸೇವಿಸಿದರೆ, ಅದು  ದೇಹವನ್ನು ಪೆÇೀಷಿಸುತ್ತದೆ. ಬೇಯಿಸಿದ ಬಲಿಯದ ಬೆಂಡೆ ಮತ್ತು ಅದರ ಆವಿಯು ಕೆಮ್ಮು, ಗಂಟಲ ಒರಟುತನ ಮತ್ತು ಶೀತಕ್ಕೆ ಪರಿಣಾಮಕಾರಿಯಾಗಿದೆ. ಬೆಂಡೆಯ ಸೂಪ್ ಅತಿಸಾರಕ್ಕೆ ಒಳ್ಳೆಯದು.
        ಬೆಂಡೆ ಸಸಿಯ ಎಲೆ ಮತ್ತು ಹಣ್ಣನ್ನು ಅರೆದು ಗಾಯದ ಭಾಗಕ್ಕೆ ಹಚ್ಚಿದರೆ ಉತ್ತಮ ಫಲಿತಾಂಶ ಸಿಗುತ್ತದೆ.ಒಣಗಿಟ್ಟು ಪುಡಿಮಾಡಿದ ಬೆಂಡೆಯ ಬೇರನ್ನು ಒಂದು ಚಮಚ ತೆಗೆದುಕೊಂಡು ಅದಕ್ಕೆ ತಲಾ ಒಂದು ಚಮಚ ಜೇನುತುಪ್ಪ ಬೆರೆಸಿ ರಾತ್ರಿ ಸೇವಿಸಬಹುದು. ದೇಹದಲ್ಲಿ ಖನಿಜ ಪೆÇೀಷಣೆಯನ್ನು ಪಡೆಯಲು ಶುದ್ಧ ಹಾಲಿನೊಂದಿಗೆ ಬೆರೆಸಿ ಸೇವಿಸಬಹುದು.  ಮಧುಮೇಹದ ವಿರುದ್ಧ ಹೋರಾಡಲು ಬೆಂಡೆ ತುಂಬಾ ಒಳ್ಳೆಯದು, ಮೊದಲ ದಿನ, ಬೆಂಡೆ ಕತ್ತರಿಸಿ ಒಂದು ಲೋಟ ನೀರಿಗೆ ಹಾಕಿ ಮರುದಿನ ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಕುಡಿಯುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.
      ಬೆಂಡೆ  ಗರ್ಭಿಣಿಯರಿಗೆ ಒಳ್ಳೆಯದು.ಗರ್ಭಿಣಿಯರು ಶಿಶುಗಳ ಮಿದುಳಿನ ಬೆಳವಣಿಗೆಗೆ ಮತ್ತು ನರನಾಳವನ್ನು ಹಾನಿಯಾಗದಂತೆ ರಕ್ಷಿಸಲು ಪೋಲಿಕಾಸಿಡ್ ಅವಶ್ಯಕವಾಗಿದೆ. ಬೆಂಡೆಯಲ್ಲಿದು  ಸಮೃದ್ಧವಾಗಿದೆ. ಗರ್ಭಾವಸ್ಥೆಯ 4-12 ವಾರಗಳಲ್ಲಿ ಪೋಲಿಕಾಸಿಡ್ ಅಗತ್ಯವಿದೆ. ಬೆಂಡೆಯಲ್ಲಿ ಕಬ್ಬಿಣ ಮತ್ತು ಪೋಲೇಟ್ ಹಿಮೋಗ್ಲೋಬಿನ್ ಉತ್ಪಾದನೆಯನ್ನು ವೇಗಗೊಳಿಸುತ್ತದೆ.ಗರ್ಭಾವಸ್ಥೆಯಲ್ಲಿ ರಕ್ತಹೀನತೆಯನ್ನು ತಡೆಯಲು ಇದು ಸಹಕಾರಿಯಾಗಿದೆ. ಆದ್ದರಿಂದ ಗರ್ಭಿಣಿಯರ ಆಹಾರದಲ್ಲಿ ಬೆಂಡೆ ನಿಯಮಿತವಾಗಿ ಸೇರಿಸಬೇಕು.
          ಆದರೆ ಯಾವುದೇ ಆಹಾರವನ್ನು ಸೇವಿಸುವಂತೆಯೇ ಅತಿಯಾದ ಬೆಂಡೆ ಬಳಕೆ ಕೂಡ ಅಪಾಯಕಾರಿ. ಬೆಂಡೆಯಲ್ಲಿರುವ ಆಕ್ಸಾಲಿಕ್ ಆಮ್ಲವು ಮೂತ್ರಪಿಂಡದ ಕಲ್ಲುಗಳನ್ನು ಉಂಟುಮಾಡುತ್ತದೆ ಎಂದು ಕೆಲವು ಅಧ್ಯಯನಗಳಲ್ಲಿ ತೋರಿಸಲಾಗಿದೆ. ಇದನ್ನು ಮಿತವಾಗಿ ಬಳಸುವುದರಿಂದ ಆರೋಗ್ಯವನ್ನು ಕಾಪಾಡಬಹುದು.
    ಯಾವ ಬಳಕೆಗೂ ಮುನ್ನ ಹಿರಿಯ ಆರೋಗ್ಯ ತಜ್ಞರು, ಗ್ರಾಮೀಣ ವೈದ್ಯರ ಸಲಹೆ-ಸೂಚನೆ ಪಡೆಯಬೇಕು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries