ಮಂಜೇಶ್ವರ: ಉಡುಪಿ ಅದೋಕ್ಷಜ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ತಾರೀಕು ಬುಧವಾರ ಶ್ರೀ ಕ್ಷೇತ್ರ ಕಣ್ವತೀರ್ಥ ಬ್ರಹ್ಮೇಶ್ವರ ರಾಮಾಂಜನೇಯ ಕ್ಷೇತ್ರಕ್ಕೆ ಭೇಟಿ ನೀಡಿದರು. ಈ ಸಂದರ್ಭ ರಾಮಾಂಜನೇಯ ಕ್ಷೇತ್ರದ ಸುತ್ತು ಪೌಳಿ ಜೀರ್ಣೋದ್ಧಾರದ ಬಗ್ಗೆ ಸಮಾಲೋಚನೆ ನಡೆಸಿದರು. ಶಿಲ್ಪಿ ಕೃಷ್ಣರಾಜ ತಂತ್ರಿ ಕುಡುಪು, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು ನೆತ್ಯ, ಮಧುಸೂದನ ಆಚಾರ್ಯ, ವೆಂಕಟೇಶ್ ಭಟ್ ತಲಪಾಡಿ, ಮಧುಸೂದನ ಬಲ್ಲಕ್ಕುರಾಯ, ರಮೇಶ್ ಉಪಾಧ್ಯಾಯ, ಆಡಳಿತ ಅಧಿಕಾರಿ ಸುಬ್ರಹ್ಮಣ್ಯ ಭಟ್, ಪ್ರಬಂಧಕ ಇಂದುಶೇಖರ ಭಟ್ ಉಪಸ್ಥಿತರಿದ್ದರು. ಶ್ರೀಗಳು ಶೀಘ್ರ ಜೀರ್ಣೋದ್ದಾರ ಚಟುವಟಿಕೆಗಳು ನೆರವೇರಲಿ ಎಂದು ಶುಭ ಆಶೀರ್ವಾದ ನೀಡಿದರು.
ಪೇಜಾವರ ಶ್ರೀ ಕಣ್ವತೀರ್ಥಕ್ಕೆ ಭೇಟಿ
0
ನವೆಂಬರ್ 10, 2022
Tags




.jpg)
