HEALTH TIPS

ಮೇಯರ್ ಕಚೇರಿಯಲ್ಲಿದ್ದ ಹಾರ್ಡ್ ಡಿಸ್ಕ್ ಧ್ವಂಸ? ಪತ್ರದ ಬಗ್ಗೆ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ ಬಿಜೆಪಿ ರಾಜ್ಯ ಪ್ರಭಾರಿ ಪ್ರಕಾಶ್ ಜಾವಡೇಕರ್


          ತಿರುವನಂತಪುರ: ಪಾಲಿಕೆಯ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಪಕ್ಷದ ಸದಸ್ಯರನ್ನು ಸೇರಿಸುವ ಉದ್ದೇಶದಿಂದ ಮೇಯರ್ ಆರ್ಯ ರಾಜೇಂದ್ರನ್ ಅವರು ಕಳುಹಿಸಿರುವ ಪತ್ರದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕೆಂದು ಬಿಜೆಪಿ ಆಗ್ರಹಿಸಿದೆ.
           ಬಿಜೆಪಿ ರಾಜ್ಯ ಪ್ರಭಾರಿ  ಪ್ರಕಾಶ್ ಜಾವಡೇಕರ್ ಮಾತನಾಡಿ, ಹೈಕೋರ್ಟ್‍ನ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಅಪರಾಧ ವಿಭಾಗದ ತನಿಖೆ ಸಾಕ್ಷ್ಯ ನಾಶಪಡಿಸಲಿರುವ ತಂತ್ರ ಎಂದಿರುವರು.
          ಅವರು ಮೂರು ದಿನಗಳ ಭೇಟಿಗಾಗಿ ತಿರುವನಂತಪುರಂಗೆ ಇಂದು ಆಗಮಿಸಿದಾಗ ಮಾತನಾಡಿದರು.  ಮೇಯರ್ ಕಚೇರಿಯಲ್ಲಿದ್ದ ಹಾರ್ಡ್ ಡಿಸ್ಕ್ ನಾಶವಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ. ವಿದ್ಯಾವಂತ ಯುವಕರಿಗೆ ಸರ್ಕಾರಿ ಸೇವೆಯಲ್ಲಿ ಉದ್ಯೋಗ ಪಡೆಯುವ ಅವಕಾಶವನ್ನು ಸಿಪಿಎಂ ನಿರಾಕರಿಸುತ್ತಿದೆ ಎಂದು ತಿಳಿಸಿದರು.
          ಘಟನೆಯ ಕುರಿತು ಹೈಕೋರ್ಟ್‍ನ ಹಾಲಿ ನ್ಯಾಯಾಧೀಶರು ತನಿಖೆ ನಡೆಸಬೇಕು. ಈ ನಿಟ್ಟಿನಲ್ಲಿ ನ್ಯಾಯಾಲಯ ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳಬೇಕು. ಸಿಪಿಎಂ ಸರಕಾರಕ್ಕೆ ಭ್ರμÁ್ಟಚಾರ ಹೊಸದಲ್ಲ. ಸಿಪಿಎಂ ಚಿನ್ನದ ಹಗರಣ, ಲಾಟರಿ ಹಗರಣ, ಮದ್ಯ ಹಗರಣ, ಡ್ರಗ್ ಹಗರಣ ಹೀಗೆ ಭ್ರμÁ್ಟಚಾರದ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಪ್ರಕಾಶ್ ಜಾವಡೇಕರ್ ವ್ಯಂಗ್ಯವಾಡಿದರು.
          ಶಾಂತಿಯುತ ಪ್ರತಿಭಟನೆಗಳ ವಿರುದ್ಧ ಪೋಲೀಸರು ಯಾವುದೇ ಪ್ರಚೋದನೆ ಇಲ್ಲದೆ ಕ್ರೂರ ಹಿಂಸಾಚಾರ ನಡೆಸುತ್ತಿದ್ದಾರೆ. ರಾಸಾಯನಿಕ ಅಶ್ರುವಾಯು ಮತ್ತು ಗ್ರೆನೇಡ್‍ಗಳನ್ನು ಬಳಸಲಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿಯುತ ಪ್ರತಿಭಟನೆಗಳನ್ನು ಎದುರಿಸಲು ಇಂತಹ ಕ್ರಮ ಸರಿಯಲ್ಲ. ಪೋಲೀಸರ ಕ್ರಮವನ್ನು ಖಂಡಿಸುತ್ತೇವೆ. ಇದಕ್ಕೆ ಕಾರಣರಾದ ಪೋಲೀಸರನ್ನು ಅಮಾನತುಗೊಳಿಸಬೇಕು ಎಂದು ಪ್ರಕಾಶ್ ಜಾವಡೇಕರ್ ಆಗ್ರಹಿಸಿದ್ದಾರೆ.

          ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 295 ಹುದ್ದೆಗಳಿಗೆ ಪಕ್ಷದ ಸದಸ್ಯರನ್ನು ನೇಮಕ ಮಾಡಲು ಆದ್ಯತೆಯ ಪಟ್ಟಿ ನೀಡುವಂತೆ ಆರ್ಯ ರಾಜೇಂದ್ರನ್ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಅಣವೂರು ನಾಗಪ್ಪನವರಿಗೆ ಪತ್ರ ಕಳುಹಿಸಿದ್ದಾರೆ. ವಾಟ್ಸಾಪ್ ಗ್ರೂಪ್ ಒಂದರಿಂದ ಸೋರಿಕೆಯಾಗಿ ಮಾಧ್ಯಮಗಳಲ್ಲಿ ಸುದ್ದಿಯಾಯಿತು. ಮೇಯರ್ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿದ್ದರೂ ರಾಜೀನಾಮೆ ನೀಡುವುದಿಲ್ಲ ಎಂಬ ನಿಲುವಿನಲ್ಲಿ ಆರ್ಯ ರಾಜೇಂದ್ರನ್ ಇದ್ದಾರೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries