HEALTH TIPS

ಉಪ್ಪಳದಲ್ಲಿ ಮಧ್ಯವಯಸ್ಸಿನ ಕೊಂದ ಪ್ರಕರಣದಲ್ಲಿ ಪೆÇಲೀಸರು ಕಣ್ಣಾಮುಚ್ಚಾಲೆ: ಆರೋಪ


              ಕುಂಬಳೆ: ಮಸೀದಿಗೆ ತೆರಳುತ್ತಿದ್ದ ವೇಳೆ ಸ್ಕೂಟರ್ ನಿಲ್ಲಿಸಿ ಐವರ ತಂಡ ಹಲ್ಲೆಗೈದ  ಪ್ರಕರಣದ ಆರೋಪಿಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದರೂ ಪೋಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ ಎಂದು ಸಂತ್ರಸ್ಥರೊಬ್ಬರು ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
        ತನ್ನ ಸೊಸೆಯ ವಿವಾಹ ಸಮಸ್ಯೆಗೆ ಸಂಬಂಧಿಸಿದಂತೆ ಹಲವಾರು ಮಧ್ಯಸ್ಥಿಕೆ ಪ್ರಯತ್ನಗಳ ನೇತೃತ್ವ ವಹಿಸಿದ್ದ ಅಶ್ರಫ್ ಎಂಬವರಿಗೆ ಹಲ್ಲೆನಡೆಸಲಾಗಿದೆ. ಅಶ್ರಫ್ ಅವರ ಸಹೋದರಿಯ ಪುತ್ರಿಯ ಪತಿ ಶೌಕತಲಿ ನೇತೃತ್ವದ ಐವರು ಸದಸ್ಯರ ತಂಡ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವರು. ಆಸ್ಪತ್ರೆಗೆ ಆಗಮಿಸಿದ್ದ ಪೋಲೀಸರು ಹೇಳಿಕೆ ಪಡೆದರೂ ಪ್ರಕರಣದಲ್ಲಿ ಮುಂದಿನ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.
       ಅಶ್ರಫ್ ಅವರ ಸೊಸೆ ರಿಹಾನಾ ಬಾನು 2000 ರಲ್ಲಿ ಚೂರಿ ಪಾಚ್ಚಕಟ್ಟೆ ಇಶಾಕ್ ಮತ್ತು ಜಮೀಲಾ ದಂಪತಿಯ ಪುತ್ರ ಶೌಕತಾಲಿಯೊಂದಿಗೆ ವಿವಾಹವಾಗಿದ್ದರು. ರಿಹಾನಾಬಾನು ತನ್ನ ಪತಿಯಿಂದ ಹತ್ತು ವರ್ಷಗಳಿಗೂ ಹೆಚ್ಚು ಕಾಲಗಳಿಂದ ಕ್ರೂರ ಕಿರುಕುಳ ಎದುರಿಸಬೇಕಾಯಿತು. ಅಶ್ರಫ್ ಕುಟುಂಬದೊಳಗಿನ ಸಮಸ್ಯೆಯನ್ನು ಪೋಲೀಸರು ಮತ್ತು ನ್ಯಾಯಾಲಯಕ್ಕೆ ಕೊಂಡೊಯ್ಯುವ ಬದಲು ಪರಿಹರಿಸುವ ಭಾಗವಾಗಿ ಹಲವಾರು ಬಾರಿ ಮಧ್ಯಸ್ಥಿಕೆ ಪ್ರಯತ್ನಗಳನ್ನು ನಡೆಸಿದ್ದರು.
          ಶೌಕತಲಿಗೆ ವಿವಾಹ ಸಂದರ್ಭದಲ್ಲಿ ನೀಡಿದ್ದ 80 ಪವನ್ ಚಿನ್ನಾಭರಣವನ್ನು ಪುಣೆಯ ಎರಡನೇ ಪತ್ನಿಗೆ ನೀಡಿ ಮನೆ, ವಾಹನ ಮಾರಾಟ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ಶೌಕತಲಿ ಪತ್ನಿಗೆ ಜೀವನಾಂಶ ನೀಡುತ್ತಿಲ್ಲ. ಈ ಸಂಬಂಧ ಕಾಸರಗೋಡು ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ ಎಂದೂ ಅಶ್ರಫ್ ಹೇಳಿದ್ದಾರೆ.  ತನ್ನ ಮಾರಣಾಂತಿಕ ºಲ್ಲೆಗೆ  ಕಾರಣರಾದವರನ್ನು ತಕ್ಷಣ ಬಂಧಿಸಬೇಕು ಮತ್ತು ತನ್ನ  ಸೊಸೆಗೆ ನ್ಯಾಯ ನೀಡಬೇಕು ಎಂದು ಒತ್ತಾಯಿಸಿದರು. ಈ ನಿಟ್ಟಿನಲ್ಲಿ ಪೋಲೀಸರು ನಿರ್ಲಕ್ಷ್ಯ ಮುಂದುವರಿಸಿದರೆ ಕುಟುಂಬ ಉಪವಾಸ ಬೀಳಲಿದೆ ಎಂದು ಅಶ್ರಫ್  ಹೇಳಿಕೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ರಿಹಾನಾ ಬಾನು ಅವರ ತಂದೆ ಮೊಹಮ್ಮದ್ ರಫೀಕ್ ಉಪಸ್ಥಿತರಿದ್ದರು.



      


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries