HEALTH TIPS

ಗೂಗಲ್​ ಪೇನಲ್ಲಿ 2 ರೂ. ಪಾವತಿಸಿ 45 ಸಾವಿರ ಕಳ್ಕೊಂಡ ಉದ್ಯೋಗಿ! ಸೈಬರ್ ಕಳ್ಳರ ಹೊಸ ಟೆಕ್ನಿಕ್​ ಕಂಡು ಪೊಲೀಸರೇ ಶಾಕ್​​

 

            ಅಲುವಾ: ದಿನದಿಂದ ದಿನಕ್ಕೆ ಸೈಬರ್ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಎಷ್ಟೇ ಚುರುಕಾಗಿ ಕೆಲಸ ಮಾಡಿದರೂ, ಎಲ್ಲೋ ಕೂತು ನಡೆಯುವ ಸೈಬರ್​ ವಂಚನೆಯನ್ನು ಭೇಧಿಸುವುದು ಮಾತ್ರ ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

              ಫೋನ್ ಕರೆ ಮಾಡಿ ಒಟಿಪಿ ಹೇಳುವಂತೆ ಒತ್ತಾಯಿಸುವುದು, ಆನ್ಲೈನ್ ವಂಚನೆ, ಫೇಸ್​ಬುಕ್ ಹ್ಯಾಕ್ ಮಾಡಿ ಹಣ ಕೇಳುವುದು, ಬ್ಯಾಂಕ್​ನಿಂದ ಕರೆ ಮಾಡಿದ್ದೇವೆ ಎಂದು ಹೇಳಿ ಎಟಿಎಮ್​​ ಪಾಸ್​ವರ್ಡ್​ ಕೇಳುವುದು.ಖಾಸಗಿ ಮಾಹಿತಿಗಳನ್ನು ಪಡೆದುಕೊಂಡು ವಂಚನೆ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೀಗ ಆನ್ಲೈಲ್ ಖದೀಮರು ಹೊಸದೊಂದು ವಂಚನೆಗೆ ಇಳಿದಿದ್ದಾರೆ. ಕೊರಿಯರ್​ ಟ್ರ್ಯಾಕಿಂಗ್​ ಸರ್ವೀಸ್​ ಅಂತಾ ಹೇಳಿ ಅಕೌಂಟ್​ ಹಣ ಹಾಕಿಸಿಕೊಂಡು ಬ್ಯಾಂಕ್​ ಖಾತೆಗೆ ಖನ್ನ ಹಾಕುತ್ತಿದ್ದಾರೆ ಸೈಬರ್ ಕಳ್ಳರು.

             ಹೌದು, ಸೈಬರ್​ ಖದೀಮರು ಕೊರಿಯರ್​ ಹೆಸರಿನಲ್ಲಿ ಮೆಡಿಕಲ್​ ಸಂಸ್ಥೆಗೆ ನಕಲಿ ಮೆಸೇಜ್​ ಕಳುಹಿಸಿ, ಸಂಸ್ಥೆಯ ಉದ್ಯೋಗಿ ಖಾತೆಯಿಂದ 45 ಸಾವಿರ ರೂಪಾಯಿ ಹಣ ಎಗರಿಸಿರುವ ಘಟನೆ ಕೇರಳದ ಅಲುವಾದಲ್ಲಿ ನಡೆದಿದೆ. ಕಿಝಾಕ್ಕೆ ಕಡುಂಗಲ್ಲೂರು ಮೂಲದ ಅಮಲ್​ ಎಸ್​ ಕುಮಾರ್​ ಹಣ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.

                  ಸಂತ್ರಸ್ತ ಅಮಲ್​, ಅಲುವಾದ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದ ಬಳಿ ಇರುವ ರತ್ನಂ ಮತ್ತು ಕಂಪನಿಯ ಉದ್ಯೋಗಿ. ಸೋಮವಾರ 6287655632 ನಂಬರ್​ನಿಂದ ಅಮಲ್​ ಫೋನ್​ಗೆ ಕರೆಬಂದಿದೆ. ನಿಮಗೊಂದು ಕೊರಿಯರ್​ ಬಂದಿದೆ ಎಂದು ಹೇಳಿದ್ದಾರೆ. ಸ್ಥಳದ ನಿಖರವಾದ ಮಾಹಿತಿಗಾಗಿ ಅರ್ಜಿ ಭರ್ತಿ ಮಾಡಿ ವಾಟ್ಸ್​ಆಯಪ್​ನಲ್ಲಿ ಮೂಲಕ ಕಳುಹಿಸುವಂತೆ ಹೇಳಿದ್ದಾರೆ. ಕೊರಿಯರ್​ ಮೂಲಕವೇ ಅನೇಕ ಮೆಡಿಸಿನ್​ ಸ್ವೀಕರಿಸಿದ್ದರಿಂದ ಅಮಲ್​ಗೆ ಯಾವುದೇ ಅನುಮಾನ ಬರಲಿಲ್ಲ.

                  ಫಾಸ್ಟರ್​ ಕೊರಿಯರ್​ ಹೆಸರಿನಲ್ಲಿ ಫೋನ್​ ಮಾಡಿದ್ದರು. ಅಲ್ಲದೆ, ವಿಳಾಸ ಮತ್ತು ಮೊಬೈಲ್​ ನಂಬರ್​ ಸಹ ನಮೂದಿಸಿದ್ದರು. ಕೊರಿಯರ್​ ಟ್ರ್ಯಾಕಿಂಗ್ ಸರ್ವೀಸ್​ ಎಂದು ಹೇಳಿ 2 ರೂಪಾಯಿ ಗೂಗಲ್​ ಪೇ ಮಾಡುವಂತೆ ಹೇಳಿದ್ದರು. ಯಾವಾಗ ಅಮಲ್​ ಹಣ ಪಾವತಿಸಿದನೋ ಆ ದಿನ ಸಂಜೆಯೇ ಆತನ ಅಲುವಾ ಶಾಖೆಯ ಎಚ್​ಡಿಎಫ್​ಸಿ ಬ್ಯಾಂಕ್​ ಖಾತೆಯಿಂದ 45 ಸಾವಿರ ರೂಪಾಯಿ ಹಣ ಕಡಿತಗೊಂಡಿದೆ​.

                  ಮೋಸ ಹೋಗಿರುವುದು ಗೊತ್ತಾಗುತ್ತದಂತೆ ಅಮಲ್​, ಅಲುವಾದಲ್ಲಿರುವ ಸೈಬರ್​ ಕೇಂದ್ರ ಮತ್ತು ಸರ್ಕಲ್​ ಇನ್ಸ್​ಪೆಕ್ಟರ್​ಗೆ ದೂರು ದಾಖಲಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries