HEALTH TIPS

ನನ್ನ ಸಮಾಧಿ ಬಳಿ ಕುರಾನ್ ಪಠಿಸಬೇಡಿ, ಸಾವನ್ನು ಸಂಭ್ರಮಿಸಿ', ಇರಾನ್‌ನಲ್ಲಿ ಗಲ್ಲಿಗೇರುವ ಮುನ್ನ 23ರ ಯುವಕನ ಕೊನೆಯ ಆಸೆ

 

            ಇರಾನ್‌:ಇರಾನ್‌ನಲ್ಲಿ ಹಿಜಾಬ್ ಮತ್ತು ಸರ್ಕಾರಿ ವಿರೋಧಿ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಮರಣದಂಡನೆಗೆ ಗುರಿಯಾದ 23 ವರ್ಷದ ಮಜಿದ್ರೇಜಾ ರಹ್ನಾವಾರ್ಡ್ ಅವರ ಕೊನೆಯ ಆಸೆ ಎಂತವರ ಮನಸನ್ನು ಕದಡಿಸಿಬಿಡುತ್ತದೆ.

          . ಮಜಿದ್ರೇಜಾ ತನ್ನ ಸಾವಿಗೆ ಯಾರೂ ದುಃಖಿಸಬಾರದು. ನನ್ನ ಸಮಾಧಿ ಬಳಿ ಕುರಾನ್ ಪಠಿಸಬಾರದು. ಆದರೆ ನನ್ನ ಸಾವನ್ನು ವಿಜಯವನ್ನಾಗಿ ಸಂಭ್ರಮಿಸಿ ಎಂದು ಹೇಳಿದ್ದಾನೆ. ಮಶ್ಹದ್ ನಗರದಲ್ಲಿ ಸೋಮವಾರ ಮಜಿದ್ರೇಜಾ ರಹ್ನವರದ್ ಅವರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಯಿತು. ಅವರ ಕೊನೆಯ ಆಸೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

           ಕಳೆದ ಡಿಸೆಂಬರ್ 8ರಂದು ಇರಾನ್‌ನಲ್ಲಿ ಅಂತಾರಾಷ್ಟ್ರೀಯ ಪ್ರತಿಭಟನೆಗಳನ್ನು ಲೆಕ್ಕಿಸದೆ 23 ವರ್ಷದ ಮೊಹ್ಸೆನ್ ಶೆಕ್ರಿ ಅವರನ್ನು ಗಲ್ಲಿಗೇರಿಸಲಾಯಿತು. ಇರಾನ್‌ನಲ್ಲಿ ಹಿಜಾಬ್ ಮತ್ತು ಸರ್ಕಾರಿ ವಿರೋಧಿ ಪ್ರತಿಭಟನಾಕಾರರಿಗೆ ಮರಣದಂಡನೆ ವಿಧಿಸಿದ ಮೊದಲ ಪ್ರಕರಣ ಇದಾಗಿತ್ತು. ನಾಲ್ಕು ದಿನಗಳ ನಂತರ, ಡಿಸೆಂಬರ್ 12ರಂದು 23 ವರ್ಷದ ಮಾಜಿದ್ರೆಜಾ ರಹ್ನವರದ್ ಅವರನ್ನು ಸಾರ್ವಜನಿಕವಾಗಿ ಕ್ರೇನ್‌ನಲ್ಲಿ ನೇಣು ಹಾಕಲಾಯಿತು. ಇಬ್ಬರು ಭದ್ರತಾ ಪಡೆಗಳ ಹತ್ಯೆಗೆ ಒಂದು ತಿಂಗಳಿಗಿಂತ ಕಡಿಮೆ ಅವಧಿಯ ಜೈಲುವಾಸದ ನಂತರ ಮಾಜಿದ್ರೇಜಾ ಅವರನ್ನು ಗಲ್ಲಿಗೇರಿಸಲಾಯಿತು. ಇದೀಗ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಮಾಜಿದ್ರೇಜಾ ತಮ್ಮ ಕೊನೆಯ ಆಸೆಯನ್ನು ಹೇಳಿಕೊಂಡಿದ್ದಾರೆ.


            ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಮಜಿದ್ರೇಜಾ ಕಣ್ಣುಮುಚ್ಚಿ ಇಬ್ಬರು ಮುಸುಕುಧಾರಿ ಗಾರ್ಡ್‌ಗಳಿಂದ ಸುತ್ತುವರೆದಿರುವಾಗ ಕ್ಯಾಮೆರಾದೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. ಅದರಲ್ಲಿ ಇಂಗ್ಲಿಷ್ ಉಪಶೀರ್ಷಿಕೆಗಳಲ್ಲಿ ಬರೆಯಲಾಗಿದೆ. 'ತನ್ನ ಸಾವಿಗೆ ಯಾರೂ ದುಃಖಿಸಬಾರದು. ನನ್ನ ಸಮಾಧಿ ಬಳಿ ಕುರಾನ್ ಪಠಿಸುವುದು ನನಗೆ ಇಷ್ಟವಿಲ್ಲ. ಕೇವಲ ಆಚರಿಸಿ ಮತ್ತು ಸಂಗೀತದೊಂದಿಗೆ ಆಚರಿಸಿ ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಬೆಲ್ಜಿಯಂ ಸಂಸದೆ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆ ದರಿಯಾ ಸಫಾಯಿ ಸೇರಿದಂತೆ ಹಲವಾರು ಜನರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ಇರಾನ್‌ನಲ್ಲಿ ಮಹ್ಸಾ ಅಮಿನಿಯ ಕಸ್ಟಡಿಯಲ್ ಸಾವು ಮತ್ತು ಹಿಜಾಬ್ ವಿರೋಧಿ ಪ್ರತಿಭಟನಾಕಾರರ ಹತ್ಯೆಯ ಬಗ್ಗೆ ಗಮನ ಸೆಳೆಯಲು ಬೆಲ್ಜಿಯಂ ಸಂಸತ್ತಿನಲ್ಲಿ ತನ್ನ ಕೂದಲನ್ನು ಕತ್ತರಿಸಿಕೊಂಡಿದ್ದ ಸಂಸದೆ ಇದೇ ದರಿಯಾ ಸಫಾಯಿ.

            ಭದ್ರತಾ ಪಡೆಗಳ ಇಬ್ಬರು ಸದಸ್ಯರನ್ನು ಇರಿದು ಕೊಂದು ಇತರ ನಾಲ್ವರನ್ನು ಗಾಯಗೊಳಿಸಿದ್ದಕ್ಕಾಗಿ ಮಜಿದ್ರೇಜಾ ಅವರಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ಓಸ್ಲೋ ಮೂಲದ ಗುಂಪಿನ ಇರಾನ್ ಮಾನವ ಹಕ್ಕುಗಳ ನಿರ್ದೇಶಕ ಮಹಮೂದ್ ಅಮಿರಿ-ಮೊಗದ್ದಮ್, ತಪ್ಪೊಪ್ಪಿಗೆಯನ್ನು ಒತ್ತಾಯಿಸಿದ ನಂತರ ಮಜಿದ್ರೇಜಾನನ್ನು ಗಲ್ಲಿಗೇರಿಸಲಾಯಿತು ಎಂದು ಹೇಳಿದ್ದಾರೆ.
Just before he’s hanged on Dec.12 by Iran's regime,they interrogate #MajidrezaRahnavard His last words:I don't want Quran to be read or prayed on my grave,just celebrate Sharia law is the reason he’s gone His verdict:War with Allah Only because he demonstrated for his rights

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries