HEALTH TIPS

5 ರಾಜ್ಯಗಳ ಉಪ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್‌ಗೆ ತಲಾ 2 ಸ್ಥಾನ

                ಹಮದಾಬಾದ್:ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆಯ ಚುನಾವಣೆಯ ಫಲಿತಾಂಶದ ಜೊತೆಗೇ, ಐದು ರಾಜ್ಯಗಳ 6 ವಿಧಾನಸಭಾ ಕ್ಷೇತ್ರಗಳು ಮತ್ತು ಒಂದು ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆಯೂ ನಡೆಯುತ್ತಿದೆ.

        ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಮತ್ತು ಕಾಂಗ್ರೆಸ್‌ ತಲಾ 2 ಸ್ಥಾನಗಳಲ್ಲಿ ಮುಂದಿವೆ.

ಇನ್ನುಳಿದಂತೆ, ರಾಷ್ಟ್ರೀಯ ಜನತಾದಳ, ಬಿಜು ಜನತಾದಳ ಒಂದೊಂದು ಸ್ಥಾನ ಪಡೆದುಕೊಂಡಿವೆ.

                ಉತ್ತರ ಪ್ರದೇಶ ಮೈನ್‌ಪುರಿ ಲೋಕಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಡಿಂಪಲ್‌ ಯಾದವ್‌ ಅವರು ಗೆಲುವಿನತ್ತ ದಾಪುಗಾಲು ಹಾಕಿದ್ದಾರೆ.

ವಿಧಾನಸಭಾ ಕ್ಷೇತ್ರಗಳು
ಬಿಹಾರ
ಕುರ್ಹಾನಿ- ಬಿಜೆಪಿ
ಬಿಜೆಪಿಯ ಕೇದಾರ್‌ ಪ್ರಸಾದ್‌ಗುಪ್ತ 76,722 ಮತ ಪಡೆದು ಮುಂದಿದ್ದಾರೆ. ಜೆಡಿಯುನ ಮನೋಜ್‌ ಸಿಂಗ್‌ 73,073 ಮತ ಗಳಿಸಿದ್ದು, ನಿಕಟ ಪೈಪೋಟಿ ನೀಡಿದ್ದಾರೆ.

ಚತ್ತೀಸಗಡ
ಭಾನುಪ್ರತಾಪಪುರ- ಕಾಂಗ್ರೆಸ್‌
ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ಸಾವಿತ್ರಿ ಮನೋಜ್‌ ಮಾಡವೀಯ ಅವರು 65,479 ಮತ ಗಳಿಸಿದ್ದು, ಸಮೀಪ ಸ್ಪರ್ಧಿ, ಬಿಜೆಪಿಯ ಭ್ರಹ್ಮಾನಂದ ನೇತಾಮ್‌ (44,308) ಅವರಿಗಿಂತ 21,171 ಮತ ಮುಂದಿದ್ದಾರೆ.

ಒಡಿಶಾ
ಪದಮ್‌ಪುರ- ಬಿಜು ಜನತಾದಳ
ಬಿಜೆಡಿಯ ಬರ್ಷ ಸಿಂಗ್‌ ಬರಿಹಾ ಅವರು 1,09,879 ಮತ ಗಳಿಸಿ ಮುನ್ನಡೆ ಸಾಧಿಸಿದ್ದಾರೆ. ಅವರಿಗೆ ಪೈಪೋಟಿ ನೀಡಿರುವ ಬಿಜೆಪಿಯ ಪ್ರದೀಪ್‌ ಪುರೋಹಿತ್‌ ಅವರು 71,627 ಮತ ಗಳಿಸಿದ್ದಾರೆ.

ರಾಜಸ್ಥಾನ
ಸರ್ದರ್ಶಹಾರ - ಕಾಂಗ್ರೆಸ್‌
ಕಾಂಗ್ರೆಸ್‌ನ ಅಭ್ಯರ್ಥಿಯಾಗಿರುವ ಅನಿಲ್‌ ಕುಮಾರ್‌ ಶರ್ಮಾ ಅವರು 90,915 ಮತ ಪಡೆದಿದ್ದು, ಬಿಜೆಪಿಯ ಅಶೋಕ್‌ ಕುಮಾರ್‌ (64,219) ಅವರಿಗಿಂತಲೂ 26,696 ಮತ ಮುಂದಿದ್ದಾರೆ.

ಉತ್ತರ ಪ್ರದೇಶ
ಖತೌಲಿ - ಆರ್‌ಎಲ್‌ಡಿ
ಖತೌಲಿಯಲ್ಲಿ ರಾಷ್ಟ್ರೀಯ ಲೋಕದಳದ ಅಭ್ಯರ್ಥಿ ಮದನ್‌ ಬೈಯ್ಯಾ ಅವರು 97,071 ಪಡೆದು ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಯ ರಾಜಕುಮಾರಿ 74,906 ಮತ ಪಡೆದು ಹಿಂದಿದ್ದಾರೆ.

ರಾಮಪುರ - ಬಿಜೆಪಿ
ರಾಮಪುರದಲ್ಲಿ ಬಿಜೆಪಿಯ ಆಕಾಶ್‌ ಸಕ್ಸೇನಾ (ಹನಿ) 80,964 ಮತ ಪಡೆದಿದ್ದು, ತಮ್ಮ ಪ್ರತಿಸ್ಪರ್ಧಿ, ಸಮಾಜವಾದಿ ಪಕ್ಷದ ಮೊಹಮದ್‌ ಅಸಿಮ್‌ ರಾಜಾ ಅವರಿಗಿಂತಲೂ ಮುಂದಿದ್ದಾರೆ. ಅಸಿಮ್‌ ರಾಜಾ ಅವರು 47,262 ಮತ ಪಡೆದಿದ್ದಾರೆ. ಇಬ್ಬರ ನಡುವಿನ ಅಂತರ 33,702 ಮತಗಳಾಗಿವೆ.

ಲೋಕಸಭಾ ಕ್ಷೇತ್ರ
ಉತ್ತರ ಪ್ರದೇಶ

ಮೈನ್‌ಪುರಿ - ಸಮಾಜವಾದಿ ಪಕ್ಷ
ಮುಲಾಯಂ ಸಿಂಗ್‌ ಅವರ ನಿಧನದಿಂದ ತೆರವಾಗಿದ್ದ ಮೈನ್‌ಪುರಿ ಲೋಕಸಭಾ ಕ್ಷೇತ್ರದಲ್ಲಿ ಅಖಿಲೇಶ್‌ ಯಾದವ್‌ ಅವರ ಪತ್ನಿ ಡಿಂಪಲ್‌ 2,88,461 ಮತಗಳ ಭಾರಿ ಮುನ್ನಡೆ ಸಾಧಿಸಿದ್ದಾರೆ. ಇತ್ತೀಚಿನ ಮಾಹಿತಿಯ ಪ್ರಕಾರ ಡಿಂಪಲ್‌ 6,18,120 ಮತ ಗಳಿಸಿದ್ದರೆ, ಸಮೀಪ ಸ್ಪರ್ಧಿ ಬಿಜೆಪಿಯ ರಘುರಾಜ್ ಸಿಂಗ್ ಶಾಕ್ಯಾ 3,29,659 ಮತ ಪಡೆದಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries