HEALTH TIPS

ವಿಶ್ವದಾದ್ಯಂತ ಕೋವಿಡ್ ಉಲ್ಬಣ: ಹೊಸ ವರ್ಷದಲ್ಲಿ ಈ 7 ದೇಶಗಳಿಗೆ ಪ್ರಯಾಣಿಸುವುದನ್ನು ತಪ್ಪಿಸಿ

 

       ನವದೆಹಲಿ: ಜಾಗತಿಕವಾಗಿ ಕೋವಿಡ್ ಪ್ರಕರಣಗಳ ಉಲ್ಬಣದ ನಡುವೆ, ಹೊಸ ವರ್ಷದ ಪ್ರವಾಸಕ್ಕೆ ಯೋಜಿಸುತ್ತಿರುವ ಪ್ರಯಾಣಿಕರು ಕನಿಷ್ಠ ಏಳು ದೇಶಗಳಿಂದ ದೂರ ಉಳಿಯಬೇಕಾಗುತ್ತದೆ. ಹಲವಾರು ದೇಶಗಳು ಸೋಂಕುಗಳು ಹೆಚ್ಚಾಗುವುದನ್ನು ತಡೆಯಲು ಹೊಸ ವರ್ಷದಲ್ಲಿ ಪ್ರಯಾಣ ನಿರ್ಬಂಧಗಳನ್ನು ವಿಧಿಸುವ ನಿರೀಕ್ಷೆಯಿದೆ.

               ಚೀನಾದಲ್ಲಿ ದಾಖಲೆ ಸಂಖ್ಯೆಯ ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದು, ಪ್ರಯಾಣಿಕರು ತಪ್ಪಿಸಬೇಕಾದ ದೇಶಗಳ ಪೈಕಿ ಚೀನಾ ಮೊದಲ ಸ್ಥಾನದಲ್ಲಿದೆ. ಡಿಸೆಂಬರ್ ತಿಂಗಳ ಮೊದಲ 20 ದಿನಗಳಲ್ಲಿ ಸುಮಾರು 250 ಮಿಲಿಯನ್ ಜನರು (ಜನಸಂಖ್ಯೆಯ 18ರಷ್ಟು ಪ್ರತಿಶತ) ಕೋವಿಡ್-19ಗೆ ತುತ್ತಾಗಿದ್ದಾರೆ ಎಂದು ಚೀನಾದ ಅಧಿಕಾರಿಗಳು ಅಂದಾಜಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಇದ್ದ ನಿರ್ಬಂಧವನ್ನು ತೆರವುಗೊಳಿಸಲಾಗಿದೆ. ಆದರೆ, ದೇಶದಲ್ಲಿ ಕೋವಿಡ್ ಪ್ರಕರಣಗಳ ಏರಿಕೆ ಹೆಚ್ಚಾಗಿದೆ.

      ಭಾರತ ಸೇರಿದಂತೆ ವಿವಿಧ ದೇಶಗಳು ಚೀನಾದಿಂದ ಬರುವ ಪ್ರಯಾಣಿಕರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲು ಮುಂದಾಗಿವೆ.

                 ಜಪಾನ್ ಸದ್ಯ ಪ್ರತಿದಿನ 2 ಲಕ್ಷಕ್ಕೂ ಹೆಚ್ಚು ಹೊಸ ಕೋವಿಡ್ ಪ್ರಕರಣಗಳನ್ನು ವರದಿ ಮಾಡುತ್ತಿದೆ. ಹೀಗಾಗಿ ನಿಮ್ಮ ಪ್ರಯಾಣದ ಪಟ್ಟಿಯಿಂದ ಈ ದೇಶವನ್ನು ಕೂಡ ತೆಗೆದುಹಾಕಿ.

               ಒಂದೇ ದಿನದಲ್ಲಿ ದೇಶದಲ್ಲಿ ಕೋವಿಡ್‌ನಿಂದಾಗಿ 371 ಜನರು ಸಾವಿಗೀಡಾಗಿದ್ದಾರೆ. ಇದು 2020ರಲ್ಲಿ ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ದಿನವೊಂದರಲ್ಲಿ ಅತಿ ಹೆಚ್ಚು ಎನಿಸಿದೆ ಎಂದು ಜಪಾನ್‌ನ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಜಪಾನ್ ಸಾಂಕ್ರಾಮಿಕ ರೋಗದ ಎಂಟನೇ ಅಲೆಯಿಂದ ತತ್ತರಿಸಿದೆ.

              ಕಳೆದ 28 ದಿನಗಳಲ್ಲಿ ದೇಶದಲ್ಲಿ 15 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದರಿಂದ ಅಮೆರಿಕ ಕೂಡ ಕೋವಿಡ್‌ ಹಠಾತ್ ಉಲ್ಬಣವನ್ನು ಕಂಡಿದೆ. ಡಿಸೆಂಬರ್ 21ರಂದು ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 100 ಮಿಲಿಯನ್ ದಾಟಿದೆ.

               ದಕ್ಷಿಣ ಕೊರಿಯಾದಲ್ಲಿ ಡಿ. 23 ರಂದು 68,000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಕ್ರಿಸ್‌ಮಸ್ ವಾರಾಂತ್ಯದ ಅಂಗವಾಗಿ ಕಡಿಮೆ ಕೋವಿಡ್ ಪರೀಕ್ಷೆಯಿಂದಾಗಿ ಹೊಸ ಕೋವಿಡ್-19 ಪ್ರಕರಣಗಳ ಸಂಖ್ಯೆ ಸೋಮವಾರ 30 ಸಾವಿರಕ್ಕಿಂತ ಕಡಿಮೆಯಾಗಿದೆ.

           ದೇಶದಲ್ಲಿ 25,545 ಹೊಸ ಕೊರೊನಾವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 67 ಮಂದಿ ವಿದೇಶದಿಂದ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 28,684,600 ಕ್ಕೆ ತಲುಪಿದೆ ಎಂದು ಕೊರಿಯಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಏಜೆನ್ಸಿಯನ್ನು (ಕೆಡಿಸಿಎ) ಉಲ್ಲೇಖಿಸಿ ಯೋನ್‌ಹಾಪ್ ಸುದ್ದಿಸಂಸ್ಥೆ ವರದಿ ಮಾಡಿದೆ.

                ಮಾಧ್ಯಮ ವರದಿಗಳ ಪ್ರಕಾರ, ಬ್ರೆಜಿಲ್‌ನಲ್ಲಿ ಕೂಡ ಹೆಚ್ಚಿನ ಸಂಖ್ಯೆಯ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಆದರೆ, ಜರ್ಮನ್‌ನಲ್ಲಿ ಕಳೆದ ಕೆಲವು ದಿನಗಳಲ್ಲಿ ಪ್ರತಿದಿನ 40,000ಕ್ಕೂ ಅಧಿಕ ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಕಳೆದ 28 ದಿನಗಳಲ್ಲಿ ಫ್ರಾನ್ಸ್‌ನಲ್ಲಿ 10 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ. ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ.

         ಈಮಧ್ಯೆ, ದೇಶದಲ್ಲಿ ಡಿಸೆಂಬರ್ 27ರಂದು 157 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ನೀಡಿರುವ ಅಂಕಿಅಂಶಗಳು ತಿಳಿಸಿವೆ.


 

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries