HEALTH TIPS

ಶಬರಿಮಲೆಯಲ್ಲಿ ಕಿಕ್ಕಿರಿದ ಭಕ್ತರು: ಅವ್ಯವಸ್ಥೆಗಳಿಂದ ಕಂಗಾಲು: ಮಧ್ಯ ಪ್ರವೇಶಿಸಿದ ಹೈಕೋರ್ಟ್

              
              ಎರ್ನಾಕುಳಂ: ಶಬರಿಮಲೆಯಲ್ಲಿ ಭಕ್ತಾದಿಗಳ ನೂಕುನುಗ್ಗಲು ಮಧ್ಯೆ ಹೈಕೋರ್ಟ್ ಮಧ್ಯ ಪ್ರವೇಶಿಸಿದೆ. ದಟ್ಟಣೆ ನಿಯಂತ್ರಣಕ್ಕೆ ಸೂಚನೆ ನೀಡಲಾಗಿದೆ.
        ಆನದಟ್ಟಣೆಯ  ದಿನಗಳಲ್ಲಿ ಅಷ್ಟಾಭಿμÉೀಕಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಸೇರಿದಂತೆ ನ್ಯಾಯಾಲಯವು ಸಲಹೆಗಳನ್ನು ನೀಡಿದೆ.
            ಕಳೆದ ಕೆಲವು ದಿನಗಳಿಂದ ಶಬರಿಮಲೆಯಲ್ಲಿ ಭಕ್ತರ ದಂಡೇ ಹರಿದು ಬರುತ್ತಿದೆ. ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ. ಆರು ಗಂಟೆಗೂ ಹೆಚ್ಚು ಕಾಲ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನಕ್ಕೆ ಸಾಧ್ಯವಾಗುತ್ತಿದೆ. ಶಬರಿಮಲೆಯಲ್ಲಿನ ಅನಾನುಕೂಲತೆಗಳು ಅಯ್ಯಪ್ಪ ಭಕ್ತರನ್ನು ಮತ್ತಷ್ಟು ಸಂಕಷ್ಟಕ್ಕೀಡುಮಾಡಿದೆ. ಈ ವಿಷಯ ನ್ಯಾಯಾಲಯದ ಗಮನಕ್ಕೆ ಬಂದಿತ್ತು. ಈ ಸಂದರ್ಭದಲ್ಲಿ ಟ್ರಾಫಿಕ್ ನಿಯಂತ್ರಿಸಲು ಕೋರ್ಟ್ ಸೂಚನೆ ನೀಡಿತು. ಶಬರಿಮಲೆ ವಿಶೇಷ ಆಯುಕ್ತರು, ದೇವಸ್ವಂ ಮಂಡಳಿ ಅಧ್ಯಕ್ಷರು, ಜಿಲ್ಲಾ ಪೋಲೀಸ್ ಮುಖ್ಯಸ್ಥರು ಮತ್ತು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
           ಎಲ್ಲರಿಗೂ ಸುಗಮ ಯಾತ್ರೆ ನಡೆಯುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇದಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ನಿಲಕ್ಕÀಲ್‍ನಿಂದ ಪಂಬಾವರೆಗೆ ಮಾತ್ರ ಯಾತ್ರಾರ್ಥಿಗಳಿಗೆ ಕೆ.ಎಸ್.ಆರ್.ಟಿ.ಸಿ. ಸರಣಿ ಸೇವೆ ಇದೆ. ಇದರ ತೈಲ ಕೊರತೆ ದೊಡ್ಡ ಸಮಸ್ಯೆ ಸೃಷ್ಟಿಸುತ್ತಿದೆ ಎಂದು ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು. ಈ ಪರಿಸ್ಥಿತಿಯಲ್ಲಿ ಪಂಬಾ-ನಿಲಕ್ಕಲ್ ಚೈನ್ ಸರ್ವೀಸ್‍ಗೆ ಅಗತ್ಯ ಬಸ್‍ಗಳನ್ನು ಖಚಿತಪಡಿಸಿಕೊಳ್ಳುವಂತೆ ಪತ್ತನಂತಿಟ್ಟ ಜಿಲ್ಲಾಧಿಕಾರಿಗೆ ಸೂಚಿಸಲಾಯಿತು.
        ಆನದಟ್ಟಣೆ ಹಿನ್ನೆಲೆಯಲ್ಲಿ ನಿರ್ಬಂಧಗಳನ್ನು ವಿಧಿಸಿದರೆ ಸಾರ್ವಜನಿಕ ವ್ಯವಸ್ಥೆಗಳ ಮೂಲಕ ಭಕ್ತರಿಗೆ ತಿಳಿಸಬೇಕು. ಎಲ್ಲರಿಗೂ ಆಹಾರ ಲಭಿಸಬೇಕು. ಅಷ್ಟಾಭಿಷೇಕವನ್ನು ದಿನಕ್ಕೆ 15ಕ್ಕೆ ಇಳಿಸಬೇಕು. ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವಂತೆಯೂ ನ್ಯಾಯಾಲಯ ಸೂಚಿಸಿದೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries