HEALTH TIPS

ತಮ್ಮ ವಿರುದ್ಧ ಟ್ವೀಟ್ ಮಾಡದಂತೆ ಸಂಸದರಿಗೆ ಎಚ್ಚರಿಕೆ ನೀಡಿದ ಸ್ಪೀಕರ್ ಓಂ ಬಿರ್ಲಾ

               ವದೆಹಲಿ:ತಮ್ಮ ವಿರುದ್ಧ ಸಾಮಾಜಿಕ ಜಾಲ ತಾಣ ವೇದಿಕೆಯಲ್ಲಿ ಬರೆಯುತ್ತಿರುವ ಸಂಸದರಿಗೆ ಎಚ್ಚರಿಕೆ ನೀಡಿರುವ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಹಾಗೆ ಮಾಡದಂತೆ ಅವರಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

                  'ಕೆಲವು ಸದಸ್ಯರು ಕೆಲವು ಸಂದರ್ಭಗಳಲ್ಲಿ ಸ್ಪೀಕರ್ ತಮಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಟ್ವಿಟರ್ ನಲ್ಲಿ ಬರೆಯುತ್ತಿದ್ದಾರೆ.

ದಯವಿಟ್ಟು ಸದಸ್ಯರು ಸ್ಪೀಕರ್ ವಿರುದ್ಧ ಬರೆಯಕೂಡದು ಎಂಬ ಸಂಗತಿಯನ್ನು ತಿಳಿದಿರಬೇಕು' ಎಂದು ಅವರು ಹೇಳಿದ್ದಾರೆ.

                   ಕಲಾಪದ ಸಂದರ್ಭದಲ್ಲಿ ಬಿರ್ಲಾ ಯಾವುದೇ ಸದಸ್ಯರ ಹೆಸರನ್ನು ಪ್ರಸ್ತಾಪಿಸದಿದ್ದರೂ, ಶೂನ್ಯ ವೇಳೆಯಲ್ಲಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ನಾಗರಿಕ ವಿಮಾನ ಯಾನ ಸಚಿವಾಲಯದ ಕುರಿತ ಒಂದು ವಿಷಯದ ಬಗ್ಗೆ ಪ್ರಸ್ತಾಪಿಸಿದ ಬೆನ್ನಿಗೇ ಅವರು ಮೇಲಿನಂತೆ ಹೇಳಿದರು. ಹಿರಿಯ ನಾಗರಿಕರು ಪ್ರಯಾಣ ಬೆಳೆಸುವಾಗ ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮೊಯಿತ್ರಾ ಪ್ರಸ್ತಾಪಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries