HEALTH TIPS

ಚೆಂಬರಿಕೆ ಖಾಸಿ ಹತ್ಯೆ; ಪ್ರಕರಣ: ಸಮುದಾಯ ನಾಯಕತ್ವ ಮೌನ ಮುರಿಯಬೇಕು: ಪಿಡಿಪಿ


          ಕುಂಬಳೆ: ಸಮಸ್ತ ಕೇರಳ ಜಮೀಯ್ಯತುಲ್ ಉಲಮಾ ಪಂಡಿತಸಭಾದ ಉಪಾಧ್ಯಕ್ಷ ಹಾಗೂ ಖ್ಯಾತ ಪಂಡಿತರಾಗಿದ್ದ ಖಾಸಿ ಚೆಂಬರಿಕ ಸಿ.ಎಂ.ಅಬ್ದುಲ್ಲಾ ಮೌಲವಿ ಹತ್ಯೆಯಾಗಿ ದಶಕ ಕಳೆದರೂ ಹತ್ಯೆಗೈದವರನ್ನು ಈವರೆಗೆ ಪತ್ತೆಮಾಡದಿರುವುದು ಅತ್ಯಂತ ಗಂಭೀರ ಹಾಗೂ ಆತಂಕಕಾರಿ ಎಂದು ಪಿಡಿಪಿ ಮುಖಂಡರು ಕುಂಬಳೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
        ಅಧಿಕೃತ ಪಂಡಿತರ ಮನೆಗಳು, ಸಮುದಾಯ ರಾಜಕೀಯ ಚಳುವಳಿಗಳು ಮತ್ತು ಇತರ ಸಮುದಾಯದ ಮುಖಂಡರು ನ್ಯಾಯಕ್ಕಾಗಿ ಹೋರಾಟಗಳನ್ನು ಮಾಡಿಲ್ಲ. ಚುನಾವಣೆಯಲ್ಲಿ ಸಮಸ್ತ ಕೇರಳ ಜಮೀಯತುಲ್ ಉಲೇಮಾದ ಅನುಯಾಯಿಗಳ ಬೆಂಬಲವನ್ನು ಪಡೆಯುವ ಸಲುವಾಗಿ ಸಮುದಾಯದ ಪ್ರೀತಿ ಮತ್ತು ಸಮುದಾಯದ ಏಕಸ್ವಾಮ್ಯವನ್ನು ಪ್ರತಿಪಾದಿಸುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಾಯಕತ್ವವು ಚೆಂಬರಿಕಾರ ಬಗ್ಗೆ ತಳೆದಿರುವ ಮೌನ ಅಕ್ಷಮ್ಯ ಅಪರಾಧವಾಗಿದೆ ಎಂದು ಪಿಡಿಪಿ ಮುಖಂಡರು ಆರೋಪಿಸಿದರು.
       ಸಿಎಂ ಅಬ್ದುಲ್ಲಾ ಮೌಲವಿ ಹತ್ಯೆ ವಿಚಾರವಾಗಿ ಸಿಎಂ ಅಬ್ದುಲ್ಲಾ ಮೌಲವಿ ಹಂತಕರನ್ನು ಪತ್ತೆಹಚ್ಚಿ ನ್ಯಾಯ ದೊರಕಿಸಿಕೊಡಲು ಹೋರಾಟ ನಡೆಸುತ್ತಿರುವ ಕುಟುಂಬಕ್ಕೆ ಪಿಡಿಪಿ ಬೆಂಬಲ ಘೋಷಿಸಿದ್ದು,  ಹೋರಾಟ ಮುಂದುವರಿಯಲಿದೆ. ಸಿಎಂ ಅಬ್ದುಲ್ಲಾ ಮೌಲ್ವಿ ಹತ್ಯೆಯ ನಂತರ ಮೌಲ್ವಿಯವರ ಕುಟುಂಬ ಎದುರಿಸುತ್ತಿರುವ ಸಂಕಷ್ಟವನ್ನು ಸಾರ್ವಜನಿಕವಾಗಿ ಸಮುದಾಯಕ್ಕೆ ಮನವರಿಕೆ ಮಾಡಿದರೂ  ಸಮುದಾಯದ ನಾಯಕತ್ವ ಯಾವುದೇ ಕ್ರಮ ಕೈಗೊಳ್ಳದಿರುವುದು ಕಳವಳಕಾರಿಯಾಗಿದೆ. ಮೌಲವಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳೆಲ್ಲರನ್ನು ಕಾನೂನಿನ ಮುಂದೆ ತರುವ ಹಂತದಲ್ಲಿ  ತನಿಖೆ ತಿರುವು ಪಡೆದು ಆರೋಪಿಗಳು ಪರಾರಿಯಾಗುವ ಹೊಸ ಬೆಳವಣಿಗೆಗಳು, ಸನ್ನಿವೇಶಗಳು ಕಂಡು ಬರುತ್ತಿವೆ. ಇನ್ನು ಮುಂದೆ ಇಂತಹ ಸನ್ನಿವೇಶಗಳಿಗೆ ಅವಕಾಶ ನೀಡಬಾರದು ಮತ್ತು ಈ ಪ್ರಕರಣದ ತಪ್ಪಿತಸ್ಥರನ್ನು ಕಾನೂನಿನ ಮುಂದೆ ತರಲಾಗುವುದು ಎಂಬ ಭರವಸೆಯನ್ನು ಹುಟ್ಟುಹಾಕಿದರೂ, ಸೂಕ್ತ ತನಿಖೆ ಅಗತ್ಯ ಎಂದು ಪಿಡಿಪಿ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
         ಸುದ್ದಿಗೋಷ್ಠಿಯಲ್ಲಿ ಪಿಡಿಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಆಜಾದ್, ಎಸ್ ಎಂ ಬಶೀರ್ ಅಹಮದ್, ಯೂನಸ್ ತಳಂಗರ, ಜಸ್ಸಿ ಪೊಸೋಟ್, ಇಬ್ರಾಹಿಂ ತೋಕೆ ಹಾಗೂ ಕೆ.ಪಿ.ಮುಹಮ್ಮದ್ ಉಪ್ಪಳ ಉಪಸ್ಥಿತರಿದ್ದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries