HEALTH TIPS

ಈ ವರ್ಷ ಶಿಕ್ಷಣ ಉದ್ದೇಶಕ್ಕಾಗಿ ವಿದೇಶಕ್ಕೆ ತೆರಳಿದ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು ಗೊತ್ತೇ?

              ವದೆಹಲಿ :ಈ ವರ್ಷದ ಮೊದಲ 11 ತಿಂಗಳುಗಳಲ್ಲಿ ಸುಮಾರು 6.5 ಲಕ್ಷ ಭಾರತೀಯ ವಿದ್ಯಾರ್ಥಿಗಳು ವಿದೇಶಗಳಿಗೆ ಶಿಕ್ಷಣ ಉದ್ದೇಶಕ್ಕಾಗಿ ತೆರಳಿದ್ದಾರೆ. ಈ ಸಂಖ್ಯೆ ಕಳೆದ ಐದು ವರ್ಷಗಳಲ್ಲಿಯೇ ಗರಿಷ್ಠವಾಗಿದೆ ಎಂದು ಬ್ಯುರೋ ಆಫ್ ಇಮಿಗ್ರೇಶನ್ ಅಂಕಿಸಂಖ್ಯೆಗಳಿಂದ ತಿಳಿದು ಬಂದಿದೆ.

                  ಸರಕಾರ ಸಂಸತ್ತಿಗೆ ನೀಡಿದ ಮಾಹಿತಿ ಪ್ರಕಾರ ಈ ವರ್ಷದ ನವೆಂಬರ್ 30ರ ತನಕ 6,48,678 ವಿದ್ಯಾರ್ಥಿ ವೀಸಾಗಳನ್ನು ನೀಡಲಾಗಿದೆ. ಕೇವಲ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುವುದಕ್ಕಾಗಿ ನೀಡಲಾದ ವೀಸಾ ಸಂಖ್ಯೆ ಸಾಂಕ್ರಾಮಿಕ ಪೂರ್ವ ಮಟ್ಟಕ್ಕೆ ಬಂದಿದೆ ಎಂದು ವರದಿಯೊಂದು ಹೇಳಿದೆ.
ಈ ವರ್ಷದ ಜನವರಿಯಿಂದ ನವೆಂಬರ್ 30 ರ ತನಕ ಒಟ್ಟು 1.83 ಕೋಟಿ ಭಾರತೀಯರು ವಿವಿಧ ಉದ್ದೇಶಗಳಿಗೆ ವಿದೇಶಕ್ಕೆ ತೆರಳಿದ್ದು ಕಳೆದ ವರ್ಷಕ್ಕೆ ಹೋಲಿಸಿದಾಗ ಈ ಬಾರಿ ಈ ಸಂಖ್ಯೆ ಶೇ 137 ರಷ್ಟು ಏರಿಕೆಯಾಗಿದೆ.
                 ಆದರೆ ಕೋವಿಡ್ ಸಾಂಕ್ರಾಮಿಕ ಬಾಧಿಸುವ ಮುಂಚಿನ ವರ್ಷ, ಅಂದರೆ 2019 ರಲ್ಲಿ ವಿದೇಶಕ್ಕೆ ತೆರಳಿದ ಭಾರತೀಯರ ಸಂಖ್ಯೆ 2.52 ಕೋಟಿ ಆಗಿತ್ತು.
                  ಕೆನಡಾಗೆ 2019 ರಲ್ಲಿ 6.17 ಲಕ್ಷ ಭಾರತೀಯರು ತೆರಳಿದ್ದರೆ ಈ ವರ್ಷದ ಮೊದಲ 11 ತಿಂಗಳಿನಲ್ಲಿ 6.60 ಲಕ್ಷ ಮಂದಿ ಈ ದೇಶಕ್ಕೆ ತೆರಳಿದ್ದಾರೆ. ಇಂಗ್ಲೆಂಡ್ಗೆ ಸ್ಟೂಡೆಂಟ್ ವೀಸಾದ ಮೇಲೆ 2019 ರಲ್ಲಿ 7.45 ಲಕ್ಷ ಮಂದಿ ತೆರಳಿದ್ದರೆ ಈ ವರ್ಷ ನವೆಂಬರ್ 30ರ ತನಕ ಈ ಸಂಖ್ಯೆ 7.54 ಲಕ್ಷ ಆಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries