ಕಾಸರಗೋಡು: ವಲಿಯಪರಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ವರು ಒಳನಾಡು ಮೀನು ಕಾರ್ಮಿಕರಿಗೆ ಮೀನುಗಾರಿಕೆ ಇಲಾಖೆ ಹಾಗೂ ವಲಿಯಪರಂಬ ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ದೋಣಿ ಮತ್ತು ಮೀನುಗಾರಿಕಾ ಬಲೆ ವಿತರಿಸಲಾಯಿತು.
ವಲಿಯಪರಂಬ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ವಿ.ಸಜೀವನ್ ವಿತರಣೆಯನ್ನು ಉದ್ಘಾಟಿಸಿದರು. ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಖಾದರ್ ಪಾಂಡ್ಯಾಳ ಅಧ್ಯಕ್ಷತೆ ವಹಿಸಿದ್ದರು. ಮೀನು ಕಾರ್ಮಿಕರಾದ ಕೆ.ರಮೇಶನ್, ಎಂ.ಕೆ.ರಜಾಕ್, ಓ.ಕೆ.ಶ್ರೀಧರನ್, ಕೆ.ಪಿ.ಸುರೇಶ್ ಬಾಬು ಅವರು ದೋಣಿ ಮತ್ತು ಮೀನಿನ ಬಲೆ ಪಡೆದುಕೊಂಡರು. ಮೀನುಗಾರಿಕೆ ಕುರಿತು ಕಾರ್ಯಕಾರಿ ಸಮಿತಿ ಅಧ್ಯಕ್ಷ ಸಿ.ದೇವರಾಜನ್ ಮೀನುಕಾರ್ಮಿಕರಿಗೆ ಮಾಹಿತಿ ನೀಡಿದರು. ತೃಕರಿಪುರ ಮತ್ಸ್ಯ ಭವನದ ಮೀನುಗಾರಿಕಾ ಅಧಿಕಾರಿ ಪಿ.ಕೆ.ವೇಣುಗೋಪಾಲನ್ ಸ್ವಾಗತಿಸಿದರು. ತ್ರಿಕರಿಪುರ ಎಂ.ಕೆ.ಪವಿತ್ರನ್ ವಂದಿಸಿದರು.
ಮೀನು ಕಾರ್ಮಿಕರಿಗೆ ದೋಣಿ ಮತ್ತು ಬಲೆ ವಿತರಣೆ
0
ಡಿಸೆಂಬರ್ 08, 2022
Tags





