ತಿರುವನಂತಪುರ: ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ರಾಜ್ಯ ಸರ್ಕಾರದ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರಿಸಿದ್ದಾರೆ. ವಿಶ್ವವಿದ್ಯಾನಿಲಯಗಳಲ್ಲಿ ಹಿಂಬಾಗಿಲ ನೇಮಕಾತಿಗೆ ಸÀರ್ಕಾರ ಹರಸಾಹಸ ಮಾಡುತ್ತಿದೆ ಎಂದು ಆರೋಪಿಸಿದ ಅವರು, ವಿಶ್ವವಿದ್ಯಾನಿಲಯಗಳಲ್ಲಿ ಸ್ವಜನಪಕ್ಷಪಾತ ಇರಬಾರದು, ವಿವಿಗಳ ಮುಖ್ಯಸ್ಥರೇ ಕುಲಪತಿಗಳು ಎಂದು ಗುಡುಗಿರುವರು.
ಕುಲಪತಿ ಸ್ಥಾನ ಬದಲಾವಣೆ ವಿಧೇಯಕ ಯುಜಿಸಿ ನಿಯಮದ ಪ್ರಕಾರ ಆಗುತ್ತಿಲ್ಲ ಎಂದು ಆರೋಪಿಸಿದರು. ಸರ್ಕಾರದ ಅಸಮಾಧಾನ ವಿಧೇಯಕದಲ್ಲಿ ಎದ್ದುಕಾಣುತ್ತಿದ್ದು, ನಾವು ಹೋರಾಟಕ್ಕಿಳಿದಿದ್ದೇವೆ ಎಂದು ಕಾರ್ಯಕರ್ತರಿಗೆ ತೋರಿಸುವುದೇ ಸರ್ಕಾರದ ನಡೆ. ಹೈಕೋರ್ಟ್ ತೀರ್ಪಿನ ನಂತರ ವಿಸಿ ನೇಮಕ ಮಾಡಲಾಗುವುದು ಎಂದು ರಾಜ್ಯಪಾಲರು ಸ್ಪಷ್ಟಪಡಿಸಿದರು.ವಿಶ್ವವಿದ್ಯಾಲಯದ ವಿಚಾರದಲ್ಲಿ ಕಾನೂನು ಸಲಹೆಗೆ ಸರಿಯಾಗಿ 35 ಲಕ್ಷ ಖರ್ಚು ಮಾಡಲಾಗಿದೆ ಎಂದರು.
ವಿಝಿಂಜಂನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸÀರ್ಕಾರ ಪ್ರಯತ್ನಿಸುತ್ತಿಲ್ಲ.ವಿಝಿಂಜಂ ಮುಷ್ಕರವನ್ನು ಅಂತ್ಯಗೊಳಿಸಲು ಸರ್ಕಾರ ಪ್ರಯತ್ನಿಸಿಲ್ಲ ಎಂದು ರಾಜ್ಯಪಾಲರು ಆರೋಪಿಸಿದರು. ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರಕ್ಕೆ ಸಮಯವಿಲ್ಲ, ವಿಶ್ವವಿದ್ಯಾಲಯಗಳ ನಿಯಂತ್ರಣಕ್ಕೆ ಸರ್ಕಾರ ಹೆಚ್ಚು ಆಸಕ್ತಿ ವಹಿಸುತ್ತಿದೆ’ ಎಂದು ಟೀಕಿಸಿದರು.
ಸರ್ಕಾರಕ್ಕೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇಲ್ಲ, ಅಧಿಕಾರವೇ ಅವರ ಗುರಿ ಎಂದು ಆರೋಪಿಸಿದರು. ಕಣ್ಣೂರು ವಿಸಿ ಸಾಮಾನ್ಯ ಅಪರಾಧಿ ಎಂದು ರಾಜ್ಯಪಾಲರು ಪುನರುಚ್ಚರಿಸಿದರು.
ಹಿಂಬಾಗಿಲ ನೇಮಕಾತಿಯೊಂದೇ ಸರ್ಕಾರದ ಲಕ್ಷ್ಯ: ಮಸೂದೆ ಅಶಾಂತಿಯನ್ನು ಬಿಂಬಿಸುತ್ತದೆ: ರಾಜ್ಯಪಾಲರು
0
ಡಿಸೆಂಬರ್ 01, 2022





