ಮಂಜೇಶ್ವರ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಉಪ್ಪಳ ಘಟಕದ ವತಿಯಿಂದ ಬಾಳಿಯೂರು ಅಯ್ಯಪ್ಪ ಮಂದಿರದ ಸಹಯೋಗದೊಂದಿಗೆ ಕಳೆದ ಎರಡು ವರ್ಷಗಳಿಂದ ಉಚಿತ ಯಕ್ಷಗಾನ ನಾಟ್ಯ ತರಬೇತಿ ಪಡೆದ ಪುಟಾಣಿಗಳಿಂದ ರಂಗಪ್ರವೇಶ ಹಾಗೂ ಏಕಾದಶಿದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಿತು.
ಕಾರ್ಯಕ್ರಮವನ್ನು ಶ್ರೀಮದ್ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವದಿಸಿ ಉದ್ಘಾಟಿಸಿದರು.
ಸಮಾರಂಭದಲ್ಲಿ ಬಾಳಿಯೂರು ಅಯ್ಯಪ್ಪ ಮಂದಿರದ ಸಂಚಾಲಕ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಅರಸು ಸಂಕಲ ದೈವಕ್ಷೇತ್ರ ಸಂತಡ್ಕ ಸೇವಾ ಸಮಿತಿ ಅಧ್ಯಕ್ಷ ಡಾ.ಶ್ರೀಧರ ಭಟ್, ಯಕ್ಷಧ್ರುವ ಪಟ್ಲ ಫೌಂಡೇಶನ್ ಉಪ್ಪಳ ಘಟಕದ ಸಂಚಾಲಕ ಯೋಗೀಶ ರಾವ್ ಚಿಗುರುಪಾದೆ, ಯಕ್ಷಗಾನ ಗುರುಗಳಾದ ಶೇಖರ ಶೆಟ್ಟಿ ಬಾಯಾರು, ದೇವಕಾನ ಶ್ರೀಕೃಷ್ಣ ಭಟ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಬಾಳಿಯೂರಲ್ಲಿ ಯಕ್ಷಗಾನ ರಂಗಪ್ರವೇಶ “ಏಕಾದಶಿದೇವಿಮಹಾತ್ಮೆ” ಯಕ್ಷಗಾನ: ಎಡನೀರು ಶ್ರೀ ಆಶೀರ್ವಚನ
0
ಡಿಸೆಂಬರ್ 22, 2022
Tags




.jpg)
