ಕಾಸರಗೋಡು: ತಳಂಗರ ಮಾಲಿಕ್‍ದೀನಾರ್ ಗ್ರಾಂಡ್ ಜುಮಾಅತ್ ಮಸೀದಿಯಲ್ಲಿ ಹಜರತ್ ಮಾಲಿಕ್‍ದೀನಾರ್(ರ.ಅ)ಅವರ ಆಧ್ಯಾತ್ಮಿಕ ಪರಿಶುದ್ಧತೆ ಹಾಗೂ ಶ್ರದ್ಧಾಭಕ್ತಿಯ ಉರುಸ್ ಸಮಾರಂಭಕ್ಕೆ ಧ್ವಜಾರೋಹಣ ನಡೆಸಲಾಯಿತು. ಸಮಸ್ತ ಕೇರಳ ಜಮೀಯತುಲ್ ಉಲೇಮಾ ಹಾಗೂ ಕಾಸರಗೋಡು ಸಂಯುಕ್ತ ಜಮಾಅತ್‍ನ ಪ್ರಧಾನ ಕಾರ್ಯದರ್ಶಿ ಪ್ರೊ. ಕೆ. ಆಲಿಕುಟ್ಟಿ ಮುಸ್ಲಿಯಾರ್ ಧ್ವಜಾರೋಹಣ ನಡೆಸಿದರು.
ಕೀಯೂರು-ಮಂಗಳೂರು ಜಂಟಿ ಜಮಾತ್ ಖಾಸಿ ತ್ವಾಖಾ ಅಹ್ಮದ್ ಮೌಲವಿ ಮುಖ್ಯ ಅತಿಥಿಯಾಗಿದ್ದರು. ಸಮಿತಿ ಉಪಾಧ್ಯಕ್ಷ ಮಹಮ್ಮದ್ ಬಶೀರ್ ಅಧ್ಯಕ್ಷತೆ ವಹಿಸಿದ್ದರು. ಖತೀಬ್ ಕೆ.ಎಂ.ಅಬ್ದುಲ್ ಮಜೀದ್ ಬಾಕವಿ ಕೊಡುವಲಿ, ಕೋಶಾಧಿಕಾರಿ ಪಿ.ಎ.ಸತ್ತಾರ್ ಹಾಜಿ, ಕಾರ್ಯದರ್ಶಿಗಳಾದ ಕೆ.ಎಂ.ಅಬ್ದುಲ್ ರಹ್ಮಾನ್, ಟಿ.ಎ.ಶಾಫಿ, ಮಲಿಕ್‍ದೀನಾರ್ ಅಕಾಡೆಮಿ ಸಂಚಾಲಕ ಅಬ್ದುಲ್ ಬಾರಿ ಹುದವಿ, ಚೆಂಗಳಂ ಅಬ್ದುಲ್ಲಾ ಫೈಝಿ ಮುಂತಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಎ. ಅಬ್ದುಲ್ ರಹಮಾನ್ ಸ್ವಾಗತಿಸಿದರು.
ಡಿ. 15ರ ರಾತ್ರಿ ಉರುಸ್ ಅಂಗವಾಗಿ ಧಾರ್ಮಿಕ ಉಪನ್ಯಾಸಗಳ ಸರಣಿ ಆರಂಭವಾಗಲಿದೆ. ಉರುಸ್‍ನ ಮುಖ್ಯ ಕಾರ್ಯಕ್ರಮಗಳು ಜನವರಿ 5 ರಂದು ಪ್ರಾರಂಭವಾಗಲಿದ್ದು, 15 ರಂದು ಸಾಮೂಹಿಕ ತುಪ್ಪದ ಅನ್ನ ಸಂತರ್ಪಣೆಯೊಂದಿಗೆ ಉರುಸ್ ಸಮಾರೋಪಗೊಳ್ಳಲಿದೆ.
ತಳಂಗರೆ ಹಜರತ್ ಮಲಿಕ್‍ದಿನಾರ್ ಉರುಸ್ ಸಮಾರಂಭಕ್ಕೆ ಧ್ವಜಾರೋಹಣ
0
ಡಿಸೆಂಬರ್ 11, 2022
Tags





