HEALTH TIPS

ಮಹಿಳೆಯರ ಸಮಸ್ಯೆ ಪರಿಹಾರಕ್ಕೆ ಜಾಗೃತಸಮಿತಿ ಮುಂದಾಗಬೇಕು-ಮಹಿಳಾ ಆಯೋಗ


 

           ಕಾಸರಗೋಡು: ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಆರಂಭದಲ್ಲೇ ಗುರುತಿಸಿ ಜಾಗೃತ ಸಮಿತಿಗಳು ಮಧ್ಯ ಪ್ರವೇಶಿಸಿ ಪರಿಹಾರಕ್ಕೆ ಯತ್ನಿಸಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪಿ. ಸತಿದೇವಿ ತಿಳಿಸಿದ್ದಾರೆ.
           ಅವರು ಮಡಿಕೈ ಮೇಕಾತ್‍ನ ಜಾಗೃತ ಸಮಿತಿ ಸದಸ್ಯರಿಗಾಗಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೋವಿಡ್ ಕಾಳಘಟ್ಟದಲ್ಲಿ ಕೌಟುಂಬಿಕ ದೌರ್ಜನ್ಯ ಹೆಚ್ಚಾಗಿದೆ. ಕುಟುಂಬ ಸಂಬಂಧಗಳು ಸ್ನೇಹಪರ ಹಾಗೂ ಆರೋಗ್ಯಪೂರ್ಣವಾಗಿಸಲು ಸಹಕಾರಮನೋಭಾವ ಅಗತ್ಯವಾಗಿದೆ.  ಇತ್ತೀಚಿನ ದಿನಗಳಲ್ಲಿ ಮಕ್ಕಳಂತೆ ಗೃಹಿಣಿಯರೂ ಸಾಮಾಜಿಕ ಜಾಲತಾಣಗಳಿಗೆ ಬಲಿಯಾಗುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಜಾಗೃತ ಸಮಿತಿಗಳು ಮಧ್ಯಪ್ರವೇಶಿಸಬೇಕು ಎಂದು ತಿಳಿಸಿದರು.
          ಜಿವಿಎಚ್ ಎಸ್ ಮೇಕಾಟ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೈ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್. ಪ್ರೀತಾ ಅಧ್ಯಕ್ಷತೆ ವಹಿಸಿದ್ದರು. ಆಯೋಗದ ಸದಸ್ಯೆ, ವಕೀಲೆ ಪಿ. ಕುಞËಯಿಷ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಞಂಗಾಡ್ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಕೆ.ವಿ.ಶ್ರೀಲತಾ, ಕಾಞಂಗಾಡ್ ಬ್ಲಾಕ್ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಗೂ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಟಿ. ರಾಜನ್,  ಜಿಲ್ಲಾ ಜಾಗೃತ ಸಮಿತಿ ಸಲಹೆಗಾರ ಪಿ. ಸುಕುಮಾರ್ ಅವರು ಜಾಗೃತ ಸಮಿತಿಗಳ ಕಾರ್ಯವೈಖರಿ ಕುರಿತು ಉಪನ್ಯಾಸ ನೀಡಿದರು ಮಟಿಕೈ ಪಂಚಾಯಿತಿ ಉಪಾಧ್ಯಕ್ಷ ವಿ. ಪ್ರಕಾಶ್ ಸ್ವಾಗತಿಸಿದರು. ಕೆ.ಆರ್.ರೇಷ್ಮಾ ವಂದಿಸಿದರು.




 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries