ಕಾಸರಗೋಡು: ಬೇಕಲ ಅಂತರಾಷ್ಟ್ರೀಯ ಬೀಚ್ ಫೆಸ್ಟಿವಲ್ ದಿನಕಳೆದಂತೆ ರಂಗೇರತೊಡಗಿದೆ. ಬೀಚ್ ಫೆಸ್ಟಿವಲ್ ಅಂಗವಾಗಿ ಆಯೋಜಿಸಲಾಗುತ್ತಿರುವ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಿದ್ದು, ಬೇಕಲ ಪರಿಸರದಲ್ಲಿ ಉತ್ಸವದ ವಾತಾವರಣ ಮೂಡಿಸಿದೆ.
ಸಿತಾರ ಪ್ರಾಜೆಕ್ಟ್ ಮಲಬಾರಿಕಸ್ ಮ್ಯೂಸಿಕ್ ಬ್ಯಾಂಡ್ ನೇತೃತ್ವದಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಸಿತಾರಾ ಕೃಷ್ಣಕುಮಾರ್ ಅವರು ನಡೆಸಿಕೊಟ್ಟ ಸಂಗೀತ ಸಂಜೆ ಬೇಕಲ ಕಡಲತೀರದ ಪ್ರವಾಸಿಗರಲ್ಲಿ ಹೊಸ ಉತ್ಸಾಹಕ್ಕೆ ಕಾರಣವಾಯಿತು. ಸಿತಾರಾ ಕೃಷ್ಣಕುಮಾರ್ ಅವರೊಂದಿಗೆ ಗಾಯಕ ನಿರಂಜ್ ಸುರೇಶ್ ಕೂಡ ವೇದಿಕೆ ಹಂಚಿಕೊಮಡರು. ಬಿ.ಕೆ.ಹರಿನಾರಾಯಣ್ ಅವರ ಸಾಹಿತ್ಯ ಮತ್ತು ಸಿತಾರಾ ಅವರೇ ಬರೆದಿರುವ 'ಓರೋ ಋತುವಿನುಳ್ಳಿಲ್..' ಹಾಡಿನೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಕೊನೆವರೆಗೂ ಕರತಾಡನ ಮುಗಿಲು ಮುಟ್ಟುವಂತಾಗಿತ್ತು. ವೇದಿಕೆಯಲ್ಲಿ ಗಾಯಕರ ಸುಮಧುರ ಕಂಠದ ಹಾಡಿಗೆ ಸಭಿಕರು ಹೆಜ್ಜೆ ಹಾಕುವ ಮೂಲಕ ಸಂಗೀತ ರಾತ್ರಿಗೆ ಕಳೆ ತುಂಬಿದರು.
ಇತಿಹಾಸ ಪುಟ ಸೇರಿದ ಉತ್ಸವ:
ಬೇಕಲ್ ಫೆಸ್ಟ್ ಕಾಸರಗೋಡಿನ ಇತಿಹಾಸದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ಕಾಸರಗೋಡಿನ ಚರಿತ್ರೆ ದಾಖಲಾತಿ ಸಂದರ್ಭ ಬೇಕಲ್ ಫೆಸ್ಟ್ ಉಲ್ಲೇಖಿಸದಿದ್ದಲ್ಲಿ, ಭವಿಷ್ಯದಲ್ಲಿ ಕಾಸರಗೋಡಿನ ಇತಿಹಾಸ ಅಪೂರ್ಣವಾಗಲಿದೆ ಎಂದು ಶಾಸಕ ಎನ್.ಎ.ನೆಲ್ಲಿಕುನ್ನು ಹೇಳಿದರು. ಬೈಕಲ್ ಅಂತರಾಷ್ಟ್ರೀಯ ಬೀಚ್ ಉತ್ಸವದ ಪ್ರಯುಕ್ತ ಆಯೋಜಿಸಿದ್ದ ಸಾಂಸ್ಕøತಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಕಾಸರಗೋಡು ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ ಎಂಬ ಅಂಶವನ್ನು ¥ಬೇಕಲ್ ಉತ್ಸವ ಸಾಬೀತುಪಡಿಸಿದೆ. ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾದ ನೆಲದಲ್ಲಿ ಹೊಸ ಇತಿಹಾಸ ಬರೆಯಲಾಗುತ್ತಿದೆ ಎಂದು ತಿಳಿಸಿದರು. ಕಾಞಂಗಾಡು ಬ್ಲಾಕ್ ಪಂಚಾಐಇತಿ ಅಧ್ಯಕ್ಷ ಕೆ. ಮಣಿಕಂಠನ್ ಅಧ್ಯಕ್ಷತೆ ವಹಿಸಿದ್ದರು. ಹಲವು ಮಂದಿ ಗಣ್ಯರು ಪಾಲ್ಗೊಂಡಿದ್ದರು.
ಬೇಕಲ ಅಂತಾರಾಷ್ಟ್ರೀಯ ಬೀಚ್ ಉತ್ಸವ-ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಪ್ರೇಕ್ಷಕರ ದಟ್ಟಣೆ
0
ಡಿಸೆಂಬರ್ 28, 2022
Tags


