ಕಾಸರಗೋಡು: ಕಳೆದ ಸಾಂಸ್ಥಿಕ ವರ್ಷದಲ್ಲಿ ಐಎಂಎಯ ಕಾಸರಗೋಡು ಶಾಖೆಯ ಅಧ್ಯಕ್ಷರಾಗಿದ್ದ ಡಾ.ಬಿ.ನಾರಾಯಣ ನಾಯ್ಕ್ ಹಾಗೂ ಕಾರ್ಯದರ್ಶಿ ಡಾ.ಟಿ.ಕಾಸಿಂ ಅವರಿಗೆ ಐಎಂಎ ಅಧ್ಯಕ್ಷರ ರಾಷ್ಟ್ರೀಯ ಪ್ರಶಂಸಾ ಪುರಸ್ಕಾರಕ್ಕೆ ಉತ್ತಮ ಶಾಖೆಯ ಅಧ್ಯಕ್ಷ ಹಾಗೂ ಶಾಖಾ ಕಾರ್ಯದರ್ಶಿ ಪ್ರಶಸ್ತಿ ಲಭಿಸಿದೆ.
ಪ್ರಯಾಗದಲ್ಲಿ (ಅಲಹಬಾದಿ) ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರು ಡಾ. ನಾರಾಯಣ ನಾಯ್ಕ್ ಹಾಗೂ ಡಾ.ಟಿ.ಕಾಸಿಂ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕಾಸರಗೋಡು ಶಾಖೆಯ ಪ್ರತಿನಿಧಿಗಳಿಗೆ ಇದೇ ಮೊದಲ ಬಾರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಕಳೆದ ವರ್ಷ ತಮ್ಮ ಸಂಸ್ಥೆಯು ಕಾಸರಗೋಡು ಶಾಖೆಯ ಸುವರ್ಣ ಮಹೋತ್ಸವಕ್ಕೆ ಸಂಬಂಧಿಸಿದಂತೆ ಹಲವು ಚಟುವಟಿಕೆಗಳು ಇವರ ನೇತೃತ್ವದಲ್ಲಿ ನಡೆದಿತ್ತು.
ಡಾ ನಾರಾಯಣ ನಾಯ್ಕ್ ಕಳೆದ ಎರಡು ವರ್ಷಗಳಿಂದ ಐಎಂಎಯ ಕಾಸರಗೋಡು ಶಾಖೆಯ ಅಧ್ಯಕ್ಷರಾಗಿದ್ದಾರೆ. ಐಎಂಎ ಕಾಸರಗೋಡು ಶಾಖೆಯ ಕಾರ್ಯದರ್ಶಿಯಾಗಿ ಟಿ ಕಾಸಿಂ ಮುಂದುವರಿದಿದ್ದಾರೆ.
ಕಾಸರಗೋಡಿನ ವೈದ್ಯರಿಗೆ ಐಎಂಎ ರಾಷ್ಟ್ರೀಯ ಪುರಸ್ಕಾರ
0
ಡಿಸೆಂಬರ್ 28, 2022
Tags


