ಕಾಸರಗೋಡು: ಕೊಲ್ಲಂ ಜಿಲ್ಲೆಯ ತೇವಳಕರ ನಿವಾಸಿ ನಜೀಂ ಕಳಂಗರ ಎಂಬವರು ಕಾಸರಗೋಡಿನಿಂದ ಏಕಾಂಗಿಯಾಗಿ ಪ್ರತಿಭಟನಾ ಪಾದಯಾತ್ರೆ ಆರಂಭಿಸಿದ್ದಾರೆ. ನಿತ್ಯೋಪಯೋಗಿ ಸಾಮಗ್ರಿ ಬೆಲೆ ಕಡಿತಗೊಳಿಸಬೇಕು, ಆರೋಗ್ಯ ವಲಯದ ಉನ್ನತೀಕರಣ, ಬಡ ರೋಗಿಗಳಿಗೆ ಪಿಎಚ್‍ಸಿಯಿಂದ ತೊಡಗಿ ವೈದ್ಯಕೀಯ ಕಾಲೇಜು ವರೆಗಿನ ಎಲ್ಲ ಆಸ್ಪತ್ರೆಗಳಲ್ಲಿ ಎಲ್ಲಾ ಔಷಧ ಲಭ್ಯವಾಗುವಂತೆ ಮಾಡಬೇಕು ಎಂಬ ಬೇಡಿಕೆಗಳೊಂದಿಗೆ ಯಾತ್ರೆ ಆರಂಭಿಸಲಾಗಿದೆ. ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ವಠಾರದಿಂದ ಮಂಗಳವಾರ ಪಾದಯಾತ್ರೆ ಆರಂಭಿಸಿದ್ದಾರೆ.
ಒಟ್ಟು 60ದಿವಸಗಳ ವರೆಗೆ ಪಾದಯಾತ್ರೆ ನಡೆಯಲಿದೆ.
ಬೆಲೆಯೇರಿಕೆ ಖಂಡಿಸಿ ನಜೀಂ ಕಳಂಗರ ಅವರಿಂದ ಕಾಲ್ನಡೆ ಪ್ರತಿಭಟನೆ
0
ಡಿಸೆಂಬರ್ 28, 2022
Tags

