ಕಾಸರಗೋಡು: ಅವಿಭಜಿತ ಕಣ್ಣೂರು ಹಾಗೂ ದಕ್ಷಿಣ ಕರ್ನಾಟಕದಾದ್ಯಂತ ಖ್ಯಾತಿ ಗಳಿಸಿರುವ ನ್ಯಾಯ ದೇಗುಲ ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದಲ್ಲಿ ಕಳಿಯಾಟ ಮಹೋತ್ಸವ ಡಿ. 29ರಿಂದ ಜ. 2ರ ವರೆಗೆ ಜರುಗಲಿರುವುದಾಗಿ ಕ್ಷೇತ್ರದ ಆಡಳಿತ ಸಮಿತಿ ಮೊಕ್ತೇಸರ ಪ್ರೊ. ಕೆ.ಪಿ ಮಾಧವನ್ ನಾಯರ್ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ. ಶ್ರೀ ರಕ್ತೇಶ್ವರೀ, ಚಾಮುಂಡಿ ದೈವ, ವಿಷ್ಣುಮೂರ್ತಿ, ಪಂಜುರ್ಲಿ ಒಳಗೊಂಡ ನಾಲ್ವರ್ ದೈವಗಳೊಂದಿಗೆ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಗಳು ಈರ್ವರ್ ದೈವಗಳ ಹೆಸರಲ್ಲಿ ಆರಾಧನೆ ನಡೆಯುತ್ತಿದೆ. 29ರಂದು ಸಂಜೆ ಶ್ರೀದೈವಗಳ ಭಂಡಾರದ ಅಗಮನ, ರಾತ್ರಿ ಎಳೆಯೋರ್ ದೈವ, 30ರಂದು ಬೆಳಗ್ಗೆ ಚಾಮುಂಡಿ ದೈವ, ಪಂಜುರ್ಲಿ(ಉಗ್ರಮೂರ್ತಿ)ದೈವ, ಸಂಜೆ ಮೂತೋರ್ ದೈವ, ರಾತ್ರಿ ಸುಡುಮದ್ದು ಪ್ರದರ್ಶನ, ಬಂಬೇರಿಯಾ, ಮಾಣಿಚ್ಚ ದೈವ ಕೋಲ ನಡೆಯುವುದು.
31ರಂದು ಬೆಳಗ್ಗೆ ಚಾಮುಂಡಿ ದೈವ, ಕುಂಡಕಲೆಯ ದೈವಗಳ ಸಂಚಾರ, ಶ್ರೀ ಪಂಜುರ್ಲಿ, ರಾತ್ರಿ ಪಾಶಾಣಮೂರ್ತಿ ದೈವಕೋಲ ನಡೆಯುವುದು. ಜ.1ರಂದು ಬೆಳಗ್ಗೆ ಶ್ರೀ ರಕ್ತೇಶ್ವರೀ ದೈವ, ತುಲಾಭಾರ ಸೇವೆ, ಸಂಜೆ ಶ್ರೀ ವಿಷ್ಣುಮೂರ್ತಿ ದೈವ ಕೋಲ, ಪ್ರೇತ ವಿಮೋಚನೆ, 2ರಂದು ಬೆಳಗ್ಗೆ ರಕ್ತೇಶ್ವರೀ ದೈವ, ತುಲಾಭಾರ, ವಿಷ್ಣುಮೂರ್ತಿ ದೈವ, ಪ್ರೇತ ವಿಮೋಚನೆ ನಡೆಯುವುದು. 3ರಂದು ಬೆಳಗ್ಗೆ ಕಳಗ ಒಪ್ಪಿಸುವುದು ಜತೆಗೆ ಭಂಡಾರ ನಿರ್ಗಮನದೊಂದಿಗೆ ಕಳಿಯಾಟ ಸಂಪನ್ನಗೊಳ್ಳಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿಗಳಾದ ಕೆ.ಪಿ ಜಯರಾಜನ್, ಕೆ.ಪಿ ಶಬರೀನಾಥ್ ಉಪಸ್ಥಿತರಿದ್ದರು.
ಇಂದಿನಿಂದ ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದಲ್ಲಿ ಕಳಿಯಾಟ ಮಹೋತ್ಸವ
0
ಡಿಸೆಂಬರ್ 28, 2022
Tags


