ಕಾಸರಗೋಡು: ಭಾರತೀಯ ವಿದ್ಯಾನಿಕೇತನ ಜಿಲ್ಲಾ ಕಲೋತ್ಸವ 2022 ಕಾರ್ಯಕ್ರಮ ಡಿ. 30ಹಾಗೂ 31ರಂದು ಬಂದಡ್ಕ ಶ್ರೀ ಸರಸ್ವತಿ ವಿದ್ಯಾಲಯದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಸಂಜೆ 4.30ಕ್ಕೆ ಬಂದಡ್ಕ ಪೇಟೆಯಿಂದ ಸಾಂಸ್ಕøತಿಕ ಮೆರವಣಿಗೆ ನಡೆಯಲಿದ್ದು, 5.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಖ್ಯಾತ ಚಲನಚಿತ್ರ ನಿರ್ಮಾಪಕ ಶ್ರೀರಾಮಸಿಂಹನ್ ಕಲೋತ್ಸವ ಉದ್ಘಾಟಿಸುವರು. ಸ್ವಾಗತ ಸಂಘದ ಅಧ್ಯಕ್ಷ ಜಿ. ಸುಮೇಶ್ ಬಾಬು ಅಧ್ಯಕ್ಷತೆ ವಹಿಸುವರು. ಕುತ್ತಿಕ್ಕೋಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಮುರಳಿ ಪಯಂಗಾನಮ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ವಿದ್ಯಾಭಾರತಿ ಕ್ಷೇತ್ರೀಯ ಕಾರ್ಯದರ್ಶಿ ಎನ್.ಸಿ.ಟಿ ರಾಜಗೋಪಾಲ್ ಮುಖ್ಯ ಭಾಷಣ ನಡೆಸುವರು. 31ರಂದು ಬೆಳಗ್ಗೆ 10ರಿಂದ ಕಲಾತ್ಮಕ ಸ್ಪರ್ಧೆಗಳು ಆರಂಭವಾಗಲಿವೆ. ಜಿಲ್ಲೆಯ 30 ಶಾಲೆಗಳ ಸುಮಾರು 300 ಪ್ರತಿಭೆಗಳು ಕಲಾ ಉತ್ಸವದಲ್ಲಿ ಪ್ರದರ್ಶನ ನೀಡಲಿದ್ದಾರೆ. ಭಾರತೀಯ ವಿದ್ಯಾನಿಕೇತನದ ಸಂಯೋಜಿತ ಸಂಸ್ಥೆ 25 ವರ್ಷ ಪೂರೈಸಿದ ಬಂದಡ್ಕ ಸರಸ್ವತಿ ವಿದ್ಯಾಲಯದ ರಜತ ಮಹೋತ್ಸವ ಸಮಾರಂಭದ ಉದ್ಘಾಟನೆಯೂ ನಡೆಯಲಿದೆ. ಜತೆಗೆ ಸಾಮಾಜಿಕ, ಸಾಂಸ್ಕøತಿಕ, ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ಗೌರವಿಸಲಾಗುವುದು. 31 ರಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಈ ಸಂದರ್ಭ ವಿವಿಧ ಕಾರ್ಯಕ್ರಮ ನಡೆಯಲಿದೆ.
ನಾಳೆಯಿಂದ ಬಂದಡ್ಕದಲ್ಲಿ ಭಾರತೀಯ ವಿದ್ಯಾನಿಕೇತನ ಜಿಲ್ಲಾ ಕಲೋತ್ಸವ
0
ಡಿಸೆಂಬರ್ 28, 2022




