ಕಾಸರಗೋಡು: ಶಬರಿಮಲೆ ಯಾತ್ರಾರ್ಥಿಗಳ ಸೌಕರ್ಯಕ್ಕಾಗಿ ಪತ್ತನಂತಿಟ್ಟ ಜಿಲ್ಲೆಯ ಎರುಮೇಲಿಯಿಂದ ಕೇರಳ-ಕರ್ನಾಟಕ ಗಡಿ ಪ್ರದೇಶ ಪಂಜಿಕಲ್ಲಿಗೆ ಕೇರಳ ರಸ್ತೆ ಸಾರಿಗೆ ನಿಗಮದ ಸೂಪರ್ ಫಾಸ್ಟ್ ಬಸ್ ಸೇವೆ ಆರಂಭಿಸಲಾಗಿದೆ.
ಎರುಮೆಲಿಯಿಂದ ಸಂಜೆ 5ಕ್ಕೆ ಹೊರಡುವ ಹಾಗೂ ಪಂಜಿಕಲ್ಲಿನಿಂದ ಸಂಜೆ 4.45ಕ್ಕೆ ವಾಪಸಾಗುವ ರೀತಿಯಲ್ಲಿ ಸಮಯ ಕ್ರಮೀಕರಿಸಲಾಗಿದೆ. ಸಂಜೆ 5ಕ್ಕೆ ಎರುಮೆಲಿಯಿಂದ ಹೊರಟು ಪಾಲಾ, ಎರ್ನಾಕುಳಂ, ಕೋಯಿಕ್ಕೋಡ್, ಕಣ್ಣೂರು, ಪಯ್ಯನ್ನೂರ್, ಕಾಞಂಗಾಡು ಹಾದಿಯಾಗಿ ಬೆಳಗ್ಗೆ 6ಕ್ಕೆ ಪಂಜಿಕಲ್ಲಿಗೆ ತಲುಪಲಿದೆ. ಅದೇ ರೀತಿ ಸಂಜೆ 4.45ಕ್ಕೆ ಪಂಜಿಕಲ್ಲಿನಿಂದ ಹೊರಡುವ ಬಸ್ 6.30ಕ್ಕೆ ಕಾಞಂಗಾಡು ತಲುಪಿ, ಪಯ್ಯನ್ನೂರು, ಕಣ್ಣೂರು, ಕೋಯಿಕ್ಕೋಡ್, ಎರ್ನಾಕುಳಂ, ಪಾಲಾ ಹಾದಿಯಾಗಿ ಬೆಳಗ್ಗೆ 6ಕ್ಕೆ ಎರುಮೆಲಿ ತಲುಪಲಿದೆ. ಕೆಎಸ್ಸಾರ್ಟಿಸಿ ವೆಬ್‍ಸೈಟ್ ಹಾಗೂ ಮೊಬೈಲ್ ಅಪ್ಲಿಕೇಶನ್ ಮೂಲಕ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯಿರುವುದಾಘಿ ಕೆಎಸ್ಸಾರ್ಟಿಸಿ ಪ್ರಕಟಣೆ ತಿಳಿಸಿದೆ.
ಪಂಜಿಕಲ್ಲಿನಿಂದ ಎರುಮೆಲಿಗೆ ಸೂಪರ್‍ಫಾಸ್ಟ್ ಬಸ್ ಸೌಕರ್ಯ
0
ಡಿಸೆಂಬರ್ 28, 2022





